ರಾಮನಗರ: ನನ್ನಂತಹ ಅನೇಕರಿಗೆ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ರಾಜಕೀಯ ಮಾರ್ಗದರ್ಶಕರು. ಅವರು ಅವಕಾಶ ನೀಡಿದ ಕಾರಣದಿಂದಲೇ ಹೈನುಗಾರಿಕೆ ಕ್ಷೇತ್ರದಲ್ಲಿ ಗುರುತರವಾದ ಕೆಲಸ ಮಾಡಲು ಸಾಧ್ಯವಾಯಿತು. ಅಂತಹ ಮೇರು ವ್ಯಕ್ತಿತ್ವದ ನಾಯಕನನ್ನು ಪೌರಸನ್ಮಾನಕ್ಕೆ ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್ ಹೇಳಿದರು.
ರಾಮನಗರ: ನನ್ನಂತಹ ಅನೇಕರಿಗೆ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ರಾಜಕೀಯ ಮಾರ್ಗದರ್ಶಕರು. ಅವರು ಅವಕಾಶ ನೀಡಿದ ಕಾರಣದಿಂದಲೇ ಹೈನುಗಾರಿಕೆ ಕ್ಷೇತ್ರದಲ್ಲಿ ಗುರುತರವಾದ ಕೆಲಸ ಮಾಡಲು ಸಾಧ್ಯವಾಯಿತು. ಅಂತಹ ಮೇರು ವ್ಯಕ್ತಿತ್ವದ ನಾಯಕನನ್ನು ಪೌರಸನ್ಮಾನಕ್ಕೆ ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್ ಹೇಳಿದರು.
ತಾಲೂಕಿನ ಮಾಯಗಾನಹಳ್ಳಿಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಹುಟ್ಟುಹಬ್ಬದ ಪ್ರಯುಕ್ತ ಮೊರಾರ್ಜಿ ದೇಸಾಯಿ ಶಾಲಾ ಮಕ್ಕಳಿಗೆ ಸ್ವೇಟರ್ ವಿತರಣೆ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪನವರಿಗೆ ಪೌರ ಸನ್ಮಾನ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಗೂ ಹಾಲು ಉತ್ಪಾದಕ ಸಂಘದ ಸಿಬ್ಬಂದಿಗೆ ಗುರುತಿನ ಚೀಟಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.1987ರಿಂದ ನಮ್ಮ ರಾಜಕೀಯ ಜೀವನ ಆರಂಭಗೊಂಡಿತು. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹಾಗೂ ಶಿವಣ್ಣಗೌಡರ ರಾಜಕೀಯ ಗರಡಿಯಲ್ಲಿ ಬೆಳೆದವನು ನಾನು. ರಾಜಕೀಯವಾಗಿ ಅನೇಕ ಅವಕಾಶಗಳು ನನಗೆ ಬಂದಿತ್ತು. ಲಿಂಗಪ್ಪನವರ ಮಾರ್ಗದರ್ಶನದಂತೆ ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿ ರೈತರಿಗಾಗಿ ಕೆಲಸ ಮಾಡಿದ ಸಾರ್ತಕಥೆ ಇದೆ ಎಂದರು.ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ ಸಣ್ಣ ಕಳಂಕ ಇಲ್ಲದಂತೆ ಲಿಂಗಪ್ಪನವರು ಜೀವಿಸಿದವರು. ರಾಮನಗರ ಕ್ಷೇತ್ರದ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅವರು ಜೀವನದುದ್ದಕ್ಕೂ ಜನಸೇವೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದವರು ಎಂದು ಬಣ್ಣಿಸಿದರು.ರಾಮನಗರ ನಗರಸಭೆ ವತಿಯಿಂದ ಲಿಂಗಪ್ಪ ಅವರಿಗೆ ಪೌರ ಸನ್ಮಾನ ಸಲ್ಲಿಸುತ್ತಿರುವುದು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಗೆ ಕೆಂಗಲ್ ಹನುಮಂತಯ್ಯ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿರುವುದು ಸ್ವಾಗಾತಾರ್ಹ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ನಾನು ಮತ್ತು ಲಿಂಗಪ್ಪರವರ ರಾಜಕೀಯ ಸನ್ನಿವೇಶದಲ್ಲಿ ವಿರೋಧ ಮಾಡಿದ್ದೇವೆ. ಆದರೆ, ಇಂದಿನ ಕಾಲಘಟ್ಟದ ರಾಜಕಾರಣಕ್ಕೆ ಹೋಲಿಸಿದರೆ ಲಿಂಗಪ್ಪನವರು ರಾಜಕೀಯದಲ್ಲಿ ಋಷಿಗಳಿದ್ದಂತೆ. ಅವರ ವ್ಯಕ್ತಿತ್ವ ರಾಜಕಾರಣಿಗಳಿಗೆ ಮಾದರಿ ಎಂದರು.ಭೂ ನ್ಯಾಯ ಮಂಡಳಿ ಸದಸ್ಯರಾಗಿದ್ದಾಗ ಲಿಂಗಪ್ಪನವರು ಸಾವಿರಾರು ಗಣಿದಾರರನ್ನು ಗುರುತಿಸಿ ಭೂಮಿ ಕೊಡಿಸಿದರು. ಶಾಸಕರಾದ ಮೇಲೆ ಬಡವರಿಗೆ ಮನೆ ಕೊಡುವಾಗ ಪಕ್ಷಾತೀತವಾಗಿ ಅರ್ಹ ಬಡವರನ್ನು ಗುರುತಿಸಿ ಸವಲತ್ತುಗಳನ್ನು ಒದಗಿಸುತ್ತಿದ್ದರು. ಶಾಸಕರಾಗಿದ್ದ ಅವಧಿಯಲ್ಲಿ ಸುಮಾರು 2 ಸಾವಿರ ನಿವೇಶನಗಳನ್ನು ಬಡವರಿಗೆ ನೀಡಿದ್ದಾರೆ. 60 ವರ್ಷ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಿ.ರಾಮಯ್ಯ, ಮುಖಂಡರಾದ ಪ್ರಭು, ಉಮಾಶಂಕರ್, ಮಂಚೇಗೌಡ, ರವಿ, ವಾಸು, ಪರಮಶಿವಯ್ಯ, ಸುಗ್ಗನಹಳ್ಳಿ ಗ್ರಾಪಂ ಅಧ್ಯಕ್ಷೆ ಅರ್ಪಿತಾ , ರೇವಣ್ಣ, ಶೇಖರ್, ಅಜಿತ್, ಚಂದ್ರಣ್ಣ ಮತ್ತಿತರರಿದ್ದರು.
(ಅಗತ್ಯ ಬಿದ್ದರೆ ಮಾತ್ರ ಕೋಟ್ ಬಳಸಿ, ಇಲ್ಲದಿದ್ದರೆ ಬಿಡಲೂ ಬಹುದು)ಕೋಟ್ .............
ಸಿ.ಎಂ.ಲಿಂಗಪ್ಪ ಅವರು ಹಾಕಿಕೊಟ್ಟ ರಾಜಕೀಯ ಬುನಾದಿ ಮೇಲೆ ನಾವು ನಡೆಯುತ್ತಿದ್ದೇವೆ. 45 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ನಡೆದುಕೊಂಡವರು. ಇಂದಿಗೂ ಕಷ್ಟ ಎಂದು ಹೇಳಿಕೊಂಡು ಹೋದರೆ ಸ್ಪಂದಿಸುವ ಔದಾರ್ಯತೆ ಹೊಂದಿರುವು ನಾಯಕರು.- ಪ್ರಾಣೇಶ್ , ಮಾಜಿ ಅಧ್ಯಕ್ಷರು, ತಾಪಂ18ಕೆಆರ್ ಎಂಎನ್ 9.ಜೆಪಿಜಿ
ರಾಮನಗರ ತಾಲೂಕಿನ ಮಾಯಗಾನಹಳ್ಳಿಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಮೊರಾರ್ಜಿ ದೇಸಾಯಿ ಶಾಲಾ ಮಕ್ಕಳಿಗೆ ಸ್ವೇಟರ್ ಹಾಗೂ ಡೇರಿ ಸಿಬ್ಬಂದಿಗೆ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಪಿ.ನಾಗರಾಜ್ ಉದ್ಘಾಟಿಸಿದರು.