ಪೌರ ಕಾರ್ಮಿಕರು ಪಟ್ಟಣದ ಸೈನಿಕರಿದ್ದಂತೆ

| Published : Sep 24 2024, 01:46 AM IST

ಸಾರಾಂಶ

ತಮ್ಮ ಜೀವದ ಹಂಗನ್ನೂ ತೊರೆದು ನಾರೀಕರ ಹಿತ ಕಾಯುವ ಪೌರ ಕಾರ್ಮಿಕರು ಸಹ ದೇಶ ಕಾಯುವ ಯೋಧರಿಗೆ ಸಮಾನ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಆಶಾರಾಣಿ ರಾಜಶೇಖರ್ ಹೇಳಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ತಮ್ಮ ಜೀವದ ಹಂಗನ್ನೂ ತೊರೆದು ನಾರೀಕರ ಹಿತ ಕಾಯುವ ಪೌರ ಕಾರ್ಮಿಕರು ಸಹ ದೇಶ ಕಾಯುವ ಯೋಧರಿಗೆ ಸಮಾನ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಆಶಾರಾಣಿ ರಾಜಶೇಖರ್ ಹೇಳಿದರು. ಪಟ್ಟಣದ ಪಂಚಾಯಿತಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶ ಕಾಯುವ ಸೈನಿಕರು, ದೇಶಕ್ಕೆ ಅನ್ನ ನೀಡುವ ರೈತರನ್ನು ನೆನಪಿಸುವಂತೆ ನಾವುಗಳು ಸ್ವಚ್ಚತೆ ಮಾಡುವ ಪೌರ ಕಾರ್ಮಿಕರನ್ನು ಅಭಿನಂದಿಸುವ ಕೆಲಸ ಮಾಡಬೇಕು. ಸರ್ಕಾರ ಪೌರ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು. ಸೇವಾ ಆಧಾರದ ಮೇಲೆ ಸಂಬಳ ಹೆಚ್ಚಿಸಬೇಕು, ಆರೋಗ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು. ಸುಮಾರು ವರ್ಷಗಳಿಂದ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಆಂಜನ್ ಕುಮಾರ್, ಯಜಮಾನ್ ಮಹೇಶ್, ಚಿದಾನಂದ್ ಗಿರೀಶ್, ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಭಾಗ್ಯ ಮಹೇಶ್, ಸದಸ್ಯರಾದ ಯಜಮಾನ್ ಮಹೇಶ್, ಅಂಜನ್‌ಕುಮಾರ್. ಚಿದಾನಂದ್, ಎನ್.ಆರ್.ಸುರೇಶ್, ಮಧು, ಸ್ವಪ್ನನಟೇಶ್, ಶೀಲಾ ಶಿವಪ್ಪ ನಾಯ್ಕ, ಜಯಮ್ಮ ನಾಮಿನಿ ಸದಸ್ಯರಾದ ರುದ್ರೇಶ್, ಶ್ರೀನಿವಾಸ್, ಜಪ್ರುಲ್ಲಾ, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಆರ್.ಐ.ಗಿರೀಶ್ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ರಂಗನಾಥ್, ಸದಾನಂದ್ ಹಾಗೂ ಪೌರ ನೌಕರರು ಇದ್ದರು.