ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಮಾಜದ ಪ್ರತಿಯೊಬ್ಬರ ಆರೋಗ್ಯಕ್ಕೆ ಪೂರಕವಾಗಿ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಆರೋಗ್ಯವೂ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಸರ್ಕಾರ ಪೌರ ಕಾರ್ಮಿಕರಿಗೆ ನಗರಸಭೆಯಿಂದ ಕ್ರೀಡಾಕೂಟ ಏರ್ಪಡಿಸಿ ಅವರು ಮಾನಸಿಕ ಹಾಗೂ ದೈಹಿಕವಾಗಿ ಗಟ್ಟಿಗೊಳ್ಳಲು ಶ್ರಮಿಸಿದೆ ಎಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ತಿಳಿಸಿದರು.ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ನಗರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಎಲ್ಲಾ ಪೌರ ಕಾರ್ಮಿಕರಗಳಿಗೆ ವಾಹನ ಚಾಲಕರಿಗೆ, ಸ್ವಚ್ಛತಾ ಸಿಬ್ಬಂದಿಗೆ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು. ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಕ್ರೀಡೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದರು.ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲು ಗೆಲುವು ಮುಖ್ಯ ಅಲ್ಲ. ಎಲ್ಲರೂ ಭಾಗವಹಿಸುವುದೇ ಮುಖ್ಯ. ಸರ್ಕಾರ ಪೌರಕಾರ್ಮಿಕರಿಗಾಗಿ ಆಯೋಜಿಸಿರುವ ಕ್ರೀಡೆಗಳಲ್ಲಿ ಭಾಗವಹಿಸಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಮಾತನಾಡಿ, ಪ್ರತಿಯೊಬ್ಬರು ಕ್ರೀಡಾ ಸ್ಫೂರ್ತಿಯಿಂದ ಆಟವಾಡಬೇಕು. ನಿತ್ಯ ಒಂದಲ್ಲ ಒಂದು ಕ್ರೀಡೆಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.ಪೌರಕಾರ್ಮಿಕರಿಗಾಗಿ ಹಗ್ಗಜಗ್ಗಾಟ, ರನ್ನಿಂಗ್, ಶಾಟ್ ಪುಟ್, ಮ್ಯೂಸಿಕಲ್ ಚೇರ್,ಲೆಮನ್ ಸ್ಪೂನ್, ಕ್ರೀಡಾ ಸ್ಪರ್ಧೆಗಳು ನಡೆದವು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರವಿ, ಸದಸ್ಯರಾದ ಮಂಜುಳಾ ಉದಯ್ ಶಂಕರ್, ಪೂರ್ಣಿಮಾ, ಮಂಜುಳಾ, ಲಲಿತಾ, ಸೌಭಾಗ್ಯ, ಕುಮಾರ್, ಪರಿಸರ ಎಂಜಿನಿಯರ್ ರುದೇಗೌಡ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.ಪರಿಸರ ಜಾಗೃತಿ ದೇಗುಲದ ಆವರಣದಲ್ಲಿ ಗಿಡನೆಟ್ಟ ಪರಿಸರ ಪ್ರೇಮಿ
ಪಾಂಡವಪುರ:ತಾಲೂಕಿನ ಹಾರೋಹಳ್ಳಿ ಲಕ್ಷ್ಮಿನಾರಾಯಣ ದೇವಸ್ಥಾನ ಆವರಣದಲ್ಲಿ ಪರಿಸರ ಜಾಗೃತಿ ಅಂಗವಾಗಿ ಪರಿಸರ ಪ್ರೇಮಿ ಲವಕುಮಾರ್ ಸಸಿ ನೆಟ್ಟರು.
ನಂತರ ಮಾತನಾಡಿದ ಲವಕುಮಾರ್, ಜಾಗತಿಕ ಮಟ್ಟದಲ್ಲಿ ಉತ್ತಮ ಪರಿಸರ ಸಮಾಜಕ್ಕೆ ಬೇಕಿದೆ. ಆದ್ದರಿಂದ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.ಈ ವೇಳೆ ಎನ್.ಎಸ್.ವೆಂಕಟೇಶ್ ಅಂತಾರಾಷ್ಟ್ರೀಯ ಈಜುಪಟು ಮಧುಸೂದನ್ ಅವರನ್ನು ಅಭಿನಂದಿಸಲಾಯಿತು. ಲವಕುಮಾರ್ ರವರು ಜಿಲ್ಲಾದ್ಯಂತ 150ಕ್ಕೂ ಹೆಚ್ಚು ಸರ್ಕಾರಿ ಶಾಲೆ, ಸಾರ್ವಜನಿಕ ಆಸ್ವತ್ರೆ, ದೇವಸ್ಥಾನ, ಸರ್ಕಾರಿ ಕಚೇರಿಗಳಲ್ಲಿ ಸಿ ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಇವರ ಪರಿಸರ ಮತ್ತು ಸಮಾಜ ಸೇವೆ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಿರಿಗನ್ನಡ ವೇದಿಕೆ ಅಧ್ಯಕ್ಷರು. ಪದಾಧಿಕಾರಿಗಳು ಕವಿಗಳು, ಕಲಾವಿದರು, ಹಾರೋಹಳ್ಳಿ ಧನ್ಯಕುಮಾರ್ ಉಪಸ್ಥಿತರಿದ್ದರು.