ಸಾರಾಂಶ
ಕಡೂರು ಪಟ್ಟಣದ ಸ್ವಚ್ಛತೆಗೆ ಪ್ರತಿನಿತ್ಯ ಶ್ರಮಿಸುವ ಪೌರ ಕಾರ್ಮಿಕರು ದುಶ್ಚಟಗಳಿಂದ ವಿಮುಖರಾಗಿ ಆರೋಗ್ಯಯುತ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಕಡೂರು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣದ ಸ್ವಚ್ಛತೆಗೆ ಪ್ರತಿನಿತ್ಯ ಶ್ರಮಿಸುವ ಪೌರ ಕಾರ್ಮಿಕರು ದುಶ್ಚಟಗಳಿಂದ ವಿಮುಖರಾಗಿ ಆರೋಗ್ಯಯುತ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕಡೂರನ್ನು ಸುಂದರ ಪಟ್ಟಣವನ್ನಾಗಿ ರೂಪಿಸುವಲ್ಲಿ ಪೌರ ಕಾರ್ಮಿಕರ ಪರಿಶ್ರಮ ಹೆಚ್ಚಿನ ದಾಗಿರುತ್ತದೆ. ಜೊತೆಯಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ. ದೇಶಕ್ಕೆ ಸೈನಿಕರು ರಕ್ಷಣೆ ನೀಡುವಂತೆ ಪಟ್ಟಣದ ಸ್ವಚ್ಛತೆ ಮಾಡುವ ಸೈನಿಕರು ನೀವಾಗಿದ್ದೀರಿ. ನಿಮ್ಮ ಕೆಲಸವನ್ನು ಸಾರ್ವಜನಿಕರು, ಜನಪ್ರತಿನಿಧಿಗಳು ಗೌರವಿಸ ಬೇಕು. ಸರ್ಕಾರ ಪೌರ ಕಾರ್ಮಿಕರಿಗಾಗಿ ಹಲವು ವಿಶೇಷ ಸೌಲಭ್ಯ ಒದಗಿಸುತ್ತಿದೆ. ತಮ್ಮ ಒತ್ತಡದ ಕಾರ್ಯದಲ್ಲಿ ಪಟ್ಟಣವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು ವಿಶೇಷತೆಗೆ ಸಾಕ್ಷಿಯಾಗಿದೆ. ದುಶ್ಚಟಗಳಿಂದ ದೂರ ಇದ್ದು ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬಕ್ಕೆ ಆಧಾರವಾಗಿರಬೇಕು ನಮ್ಮ ಆಡಳಿತದ ಅವಧಿ ಯಲ್ಲಿ ಪೌರಕಾರ್ಮಿಕರನ್ನು ಉತ್ತಮವಾಗಿ ಸ್ನೇಹಿತರಂತೆ ನಡೆಸಿಕೊಂಡಿದ್ದೇನೆ ಎಂದು ಹೇಳಿ ನೀವೂ ಸಹ ಅಷ್ಟೇ ಗೌರವ ನೀಡಿದ್ದೀರಿ ಎಂದರು. ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಕ್ರೀಡಾಕೂಟಗಳಿಂದ ಒತ್ತಡದ ಮನಸ್ಸಿನಿಂದ ಹೊರಬರಲು ಸಾಧ್ಯವಾಗಲಿದೆ ನಿಮ್ಮ ಆರೋಗ್ಯ ಸರಿ ಇದ್ದರೆ ಪಟ್ಟಣದ ವ್ಯವಸ್ಥೆ ಸರಿಯಾಗುತ್ತದೆ ಎಂದರು. ಪುರಸಭೆ ಸದಸ್ಯ ಸೈಯ್ಯ ದ್ ಯಾಸೀನ್ ಮಾತನಾಡಿ, ಬೆಳಗ್ಗೆಯಿಂದ ಸಂಜೆ ತನಕ ನಗರವನ್ನು ಸ್ವಚ್ಛ ಮಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಹೆಚ್ಚಿರುತ್ತದೆ. ನಿಮ್ಮ ಆರೋಗ್ಯ ಕಾಪಾಡಿಕೊಂಡರೆ ಪಟ್ಟಣವನ್ನು ಸ್ವಚ್ಛವಾಗಿಡಲು ಸಾಧ್ಯ. ಸರ್ಕಾರ ಅನೇಕ ಸೌಲಭ್ಯ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ. ವರ್ಷವೆಲ್ಲಾ ಕಾರ್ಯ ಪ್ರವೃತ್ತರಾಗುವ ನಿಮಗೂ ಮನರಂಜನೆ, ಕ್ರೀಡೆಗಳು ಅಗತ್ಯವಾಗಿ ಇದೆ. ಇದಕ್ಕೆ ಪುರಸಭೆ ಆಡಳಿತ ಪ್ರೋತ್ಸಾಹ ನೀಡುತ್ತದೆ ಎಂದರು. ಪುರಸಭೆ ಸದಸ್ಯರಾದ ಮರುಗುದ್ದಿ ಮನು, ಗೋವಿಂದ, ತೋಟದಮನೆ ಮೋಹನ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎ.ಗಿರೀಶ್, ತಿಮ್ಮಯ್ಯ, ಅಣ್ಣಪ್ಪ, ಪರಿಸರ ಅಭಿಯಂತರ ಶ್ರೇಯಸ್‌ಕುಮಾರ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್‌ಮೂರ್ತಿ, ವಾಸು, ಶಂಕರ್, ನಾಮಿನಿ ಸದಸ್ಯರಾದ ದೇವೇಂದ್ರ, ಖಾದರ್, ದಂಡಾವತಿ ವಿನಯ್ ಹಾಗೂ ಪುರಸಭೆ ಸಿಬ್ಬಂದಿ ಚಿನ್ನರಾಜು ಮತ್ತಿತರರು ಇದ್ದರು. 19ಕೆಕೆಡಿಯು.1.ಕಡೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕ್ರಿಡಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟಕ್ಕೆ ಪುರ ಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಬಾಲ್ ಎಸೆಯುವ ಮೂಲಕ ಚಾಲನೆ ನೀಡಿದರು.