ಪೌರಕಾರ್ಮಿಕರು ಆರೋಗ್ಯದ ಕಾಳಜಿ ವಹಿಸಲಿ: ರೇಖಾ ಆನೆಹೊಸುರ

| Published : Sep 23 2025, 01:05 AM IST

ಪೌರಕಾರ್ಮಿಕರು ಆರೋಗ್ಯದ ಕಾಳಜಿ ವಹಿಸಲಿ: ರೇಖಾ ಆನೆಹೊಸುರ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಟಗಿಯ ಸಿದ್ದೇಶ್ವರ ಬಯಲು ಮಂದಿರದ ಆವರಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗೆ, ಕಚೇರಿಯ ಸಿಬ್ಬಂದಿ ಹಾಗೂ ಸದಸ್ಯರಿಗೆ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸುರ ಚಾಲನೆ ನೀಡಿದರು.

ಕಾರಟಗಿ: ದಿನನಿತ್ಯ ಊರು, ಪಟ್ಟಣ ಸ್ವಚ್ಛಗೊಳಿಸುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸುರ ಹೇಳಿದರು.

ಇಲ್ಲಿನ ಸಿದ್ದೇಶ್ವರ ಬಯಲು ಮಂದಿರದ ಆವರಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗೆ, ಕಚೇರಿಯ ಸಿಬ್ಬಂದಿ ಹಾಗೂ ಸದಸ್ಯರಿಗೆ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೈನಂದಿನ ಕರ್ತವ್ಯದ ಒತ್ತಡದಲ್ಲಿ ಪೌರಕಾರ್ಮಿಕರು ಕ್ರೀಡಾಚಟುವಟಿಯಲ್ಲಿ ತೊಡಗಿಕೊಂಡಾಗ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರತಿ ದಿನ ಬೆಳಗಾದರೆ ಪಟ್ಟಣದ ಬೀದಿಗಳಲ್ಲಿ ಸ್ವಚ್ಚತೆಯಲ್ಲಿ ಕಾರ್ಮಿಕರು ತೊಡಗುತ್ತಾರೆ. ಸಂಜೆ ಬಿಡುಗಡೆ ಈ ವೇಳೆ ದೈಹಿಕ ಅಂಗಾಂಗ ಕಸರತ್ತು ಮಾಡಬೇಕು. ಆ ಮೂಲಕ ನಿಮ್ಮ ಆರೋಗ್ಯದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣ ಮಾಡಿ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ. ಯೋಗ, ಧ್ಯಾನ, ಮಾಡಬೇಕು, ರೋಗಗಳು ಬರುವುದಕ್ಕಿಂತ ಮೊದಲೇ ಮುಂಜಾಗ್ರತೆ ಅಗತ್ಯ ಎಂದು ಹೇಳಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ ಮಾತನಾಡಿ, ಪೌರ ಕಾರ್ಮಿಕರಿಗೆ ಆರೋಗ್ಯ ರಕ್ಷಣೆಗಾಗಿ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ನಿಮಗೆ ದೊರಕಬೇಕಾದ ಹಕ್ಕುಗಳನ್ನು ಕೇಳಿ ಪಡೆಯುವುದು ನಿಮ್ಮ ಕರ್ತವ್ಯ ಎಂದರು.

ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಮಾತನಾಡಿ, ಮಹಿಳಾ ಪೌರ ಕಾರ್ಮಿಕರಿಗೆ ಕ್ರಿಯಾಶೀಲತೆ ಹೆಚ್ಚಿಸಲು ಕುರ್ಚಿ ಆಟ, ನಿಂಬೆಹಣ್ಣಿನ ಆಟ ಸೇರಿದಂತೆ ವಿವಿಧ ಆಟಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ. ೨೪ರಂದು ಪೌರ ಕಾರ್ಮಿಕರ ದಿನಾಚರಣೆ ವಿಜೃಂಭಣೆಯಿಂದ ನಡೆಯಲಿದೆ. ಪೌರ ಕಾರ್ಮಿಕರನ್ನು ಗೌರವಿಸಲಾಗುವುದು ಎಂದರು.

ಪುರಸಭೆ ಸದಸ್ಯ ಆನಂದ ಮೇಗಡೆಮನಿ ಮಾತನಾಡಿದರು. ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸದಸ್ಯರಾದ ಫಕೀರಪ್ಪ ಬಿಲ್ಗಾರ, ಸುರೇಶ ಭಜಂತ್ರಿ, ಬಸವರಾಜ ಕೊಪ್ಪದ, ದೊಡ್ಡ ಬಸವರಾಜ ಬೂದಿ, ಶ್ರೀನಿವಾಸ ರೆಡ್ಡಿ, ಸುಜಾತಾ, ಜಿ. ಅರುಣಾದೇವಿ, ಮೆಹಬೂಬ, ರಾಜಶೇಖರ ಸಿರಿಗೇರಿ, ಪ್ರಮುಖರಾದ ರಾಜಶೇಖರ ಆನೆಹೊಸುರ, ಅಲಿಹುಸೇನ್, ಪುರಸಭ ವಿವಿಧ ವಿಭಾಗದ ಅಧಿಕಾರಿಗಳಾದ ರಾಘವೇಂದ್ರ, ಅಕ್ಷತಾ ಕಮ್ಮಾರ, ನಾಗರಾಜ ತಳವಾರ, ಮಂಜುನಾಥ ನಾಯಕ, ಸೀಮಾರಾಣಿ, ಭಾರ್ಗವಿ, ಮಲ್ಲಮ್ಮ, ಆದೇಪ್ಪ, ಶಮೀರ್, ಚನ್ನಬಸವ ಹಿರೇಮಠ, ಆನಂತ ಜೂರಟಗಿ ಇದ್ದರು.