ಸ್ವಂತ ಆರೋಗ್ಯ ಲೆಕ್ಕಿಸದೇ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರು-ಮನಿಯಾರ

| Published : Sep 24 2024, 01:54 AM IST

ಸ್ವಂತ ಆರೋಗ್ಯ ಲೆಕ್ಕಿಸದೇ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರು-ಮನಿಯಾರ
Share this Article
  • FB
  • TW
  • Linkdin
  • Email

ಸಾರಾಂಶ

ಪೌರಕಾರ್ಮಿಕರು ನಿತ್ಯ ತಮ್ಮ ಆರೋಗ್ಯವನ್ನು ಲೆಕ್ಕಸದೇ ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ಕಾಯಕ ಜೀವಿಗಳು. ಇಂತಹ ಕಾಯಕ ಜೀವಿಗಳಿಗೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಪಟ್ಟಣ ಸುಂದರವಾಗಿಡಲು ಸಾಧ್ಯವೆಂದು ಪುರಸಭೆ ಅಧ್ಯಕ್ಷ ಅಲ್ಲಾವುದೀನ್ ಮನಿಯಾರ ಹೇಳಿದರು.

ಸವಣೂರು: ಪೌರಕಾರ್ಮಿಕರು ನಿತ್ಯ ತಮ್ಮ ಆರೋಗ್ಯವನ್ನು ಲೆಕ್ಕಸದೇ ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ಕಾಯಕ ಜೀವಿಗಳು. ಇಂತಹ ಕಾಯಕ ಜೀವಿಗಳಿಗೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಪಟ್ಟಣ ಸುಂದರವಾಗಿಡಲು ಸಾಧ್ಯವೆಂದು ಪುರಸಭೆ ಅಧ್ಯಕ್ಷ ಅಲ್ಲಾವುದೀನ್ ಮನಿಯಾರ ಹೇಳಿದರು.ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕೈಗೊಳ್ಳುವ ಪೌರ ಕಾರ್ಮಿಕರು ವೃತ್ತಿಯೊಂದಿಗೆ ಉತ್ತಮ ಆರೋಗ್ಯ ಕುರಿತು ಜಾಗೃತಿ ವಹಿಸಲು ಮುಂದಾಗುವುದು ಅವಶ್ಯವಾಗಿದೆ ಎಂದರು.ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರ ಸೇವೆ ಅವಿಸ್ಮರಣೀಯ. ಮಳೆ ಚಳಿ, ಬಿಸಿಲನ್ನು ಲೆಕ್ಕಿಸದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡು ನಗರದ ಸ್ವಚ್ಛತೆಗೆ ಮುಂದಾಗಿರುವುದು ಹೆಮ್ಮೆಯ ವಿಷಯ. ಗಡಿ ಭಾಗದಲ್ಲಿ ದೇಶವನ್ನು ರಕ್ಷಿಸುವ ಸೈನಿಕರಂತೆ ನಗರದ ಸ್ವಚ್ಚತೆಯನ್ನು ಕೈಗೊಂಡು ಜನ ಸಾಮಾನ್ಯರ ಆರೋಗ್ಯವನ್ನು ಕಾಯುತ್ತಿರುವದು ವಿಶೇಷವಾಗಿದೆ. ಸರ್ಕಾರದ ಆದೇಶದಂತೆ ಪೌರ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಪೂರೈಸಿ ಆರೋಗ್ಯವನ್ನು ಕಾಪಾಡಲು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.ಪುರಸಭೆಯ ಕಾಯಂ ಪೌರ ಕಾರ್ಮಿಕರಿಗೆ ಸರ್ಕಾರ ಘೋಷಣೆ ಮಾಡಿದಂತೆ ತಲಾ ೭ ಸಾವಿರ ಪ್ರೋತ್ಸಾಹ ಧನವನ್ನು ಜಮಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿಯಲ್ಲಿ ೭.೫ ಲಕ್ಷ ನೀಡುವ ಮೂಲಕ ಸಹಕಾರವನ್ನು ನೀಡಿದೆ. ಪೌರ ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಪಡೆದುಕೊಂಡು ಸೂರನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು.ಬಿಎಚ್‌ಇಒ ಎಸ್.ಎಫ್. ಹನಕನಹಳ್ಳಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನೇತೃತ್ವ ವಹಿಸಿ ಪೌರ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಕುರಿತು ಉಪನ್ಯಾಸ ನೀಡಿದರು.ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಆನಂದ ಮತ್ತಿಗಟ್ಟಿ ಮಾತನಾಡಿ, ಪೌರ ಕಾರ್ಮಿಕರ ದಿನಾಚರಣೆಯನ್ನು ಸರ್ವ ಇಲಾಖೆ ಹಾಗೂ ಸಂಘಟನೆಯ ನೇತೃತ್ವದಲ್ಲಿ ಸಾರ್ವಜನಿಕರು ಆಚರಿಸುವ ಮೂಲಕ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸುವದು ಅವಶ್ಯವಾಗಿದೆ. ಪೌರ ಕಾರ್ಮಿಕರು ದುಶ್ಚಟಗಳಿಂದ ದೂರವಾದಲ್ಲಿ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾದ್ಯವಾಗಲಿದೆ ಎಂದರು.ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ನಾಗಪ್ಪ ಮೇಗಲಮನಿ, ಬಸವರಾಜ ಸಿದ್ದಮ್ಮನವರ, ಮರೆಪ್ಪ ಮುಳಗುಂದ, ಆರೇಂದ್ರ ಮೈಲಮ್ಮನವರ ಹಾಗೂ ಶಿವಾನಂದ ಮಯಾಗೇರಿ ಸೇರಿದಂತೆ ೬೨ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.ಪುರಸಭೆ ಸದಸ್ಯರಾದ ಫೀರಅಹ್ಮದ ಗವಾರಿ, ಉಮೇಶ ಕಲ್ಮಠ, ಶಿವಾನಂದ ಅರಳಿಕಟ್ಟಿ, ಫಜಲ್‌ಅಹ್ಮದಖಾನ್ ಪಠಾಣ, ಅಲ್ಲಾವುದೀನಖಾನ್ ಪಠಾಣ, ಅಬ್ದುಲನಾಶೀರ್ ಖಿದ್ಮತಗಾರ, ಸೋಪಿಯಾ ಚುಡಿಗಾರ, ಜೀನತಬಾನು ಹುಲಗೂರ, ಕಚೇರಿ ವ್ಯವಸ್ಥಾಪಕ ಮಹೇಶ ದೊಡ್ಡಣ್ಣವರ, ಕಂದಾಯ ಅಧಿಕಾರಿ ಸುರೇಶ ಪೂಜಾರ, ಪ್ರಕಾಶ ಕಬಾಡಿ ಹಾಗೂ ಇತರರು ಪಾಲ್ಗೊಂಡಿದ್ದರು. ಭಗವಂತಾಚಾರ್ಯ ಮಠದ ಕಾರ್ಯಕ್ರಮ ನಿರ್ವಹಿಸಿದರು.