ಸಾರಾಂಶ
ಸಂಕೇಶ್ವರ: ಲೋಕಸಭಾ ಚುನಾವಣೆ ಪ್ರಯುಕ್ತ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಟ್ಟಣದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಸಂಕೇಶ್ವರ ಪುರಸಭೆ ಸಹಯೋಗದಲ್ಲಿ ಜಾಗೃತಿ ಬೈಕ್ ಜಾಥಾ ಜಾಗೃತಿ ನಡೆಸಲಾಯಿತು. ಪಟ್ಟಣದ ಪುರಸಭೆಯ ಆವರಣದಲ್ಲಿ ಮತದಾನ ಜಾಗೃತಿ ಬೈಕ್ ಜಾಥಾಗೆ ಹುಕ್ಕೇರಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಟಿ.ಆರ್.ಮಲ್ಲಾಡದ ಹಾಗೂ ಪುರಸಭೆ ಮುಖ್ಯಾಧಿಕಾರಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಲೋಕಸಭಾ ಚುನಾವಣೆ ಪ್ರಯುಕ್ತ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಟ್ಟಣದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಸಂಕೇಶ್ವರ ಪುರಸಭೆ ಸಹಯೋಗದಲ್ಲಿ ಜಾಗೃತಿ ಬೈಕ್ ಜಾಥಾ ಜಾಗೃತಿ ನಡೆಸಲಾಯಿತು.ಪಟ್ಟಣದ ಪುರಸಭೆಯ ಆವರಣದಲ್ಲಿ ಮತದಾನ ಜಾಗೃತಿ ಬೈಕ್ ಜಾಥಾಗೆ ಹುಕ್ಕೇರಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಟಿ.ಆರ್.ಮಲ್ಲಾಡದ ಹಾಗೂ ಪುರಸಭೆ ಮುಖ್ಯಾಧಿಕಾರಿ ಚಾಲನೆ ನೀಡಿದರು.
ಮತದಾನ ಪ್ರತಿ ನಾಗರಿಕನ ಕರ್ತವ್ಯ. ಎಲ್ಲರೂ ತಪ್ಪದೇ ಮೇ.7 ರಂದು ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಿ. ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಹಕ್ಕೆ ಚಲಾಯಿಸುವಂತೆ ಹುಕ್ಕೇರಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಟಿ.ಆರ್.ಮಲ್ಲಾಡದ ಮನವಿ ಮಾಡಿದರು.ಪುರಸಭೆ ಮುಖ್ಯಾಧಿಕಾರಿ ವಿಜಯ ಮಾಂತೇಶ ಹೂಗಾರ ಮಾತನಾಡಿ, ಸಂಕೇಶ್ವರ ಪಟ್ಟಣದಲ್ಲಿ ಕಳೆದ ಬಾರಿ ಕಡಿಮೆ ಮತದಾನವಾಗಿದೆ. ಆದ್ದರಿಂದ ಈಗಾಗಲೇ ಮತದಾನ ಕಾಲ್ನಡಿಗೆ ಮೂಲಕ ಜಾಥಾ ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆ ಮನೆ ತೆರಳಿ ಮತದಾನ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಈ ವೇಳೆ ತಾಲೂಕು ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ತಾಲೂಕು ಪಂಚಾಯತಿ ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಪಿಡಿಒಗಳಾದ ಶಂಕರ ಕಾಂಬಳೆ, ಪಿ.ಆರ್.ನೇರ್ಲಿ, ನಿರಂಜನ ಕುರಬೇಟ,
ಎಂಐಎಸ್ ಸಂಯೋಜಕ ಶಂಕರ ಶಿರಗುಪ್ಪಿ, ತಾಂತ್ರಿಕ ಸಂಯೋಜಕ ನೇರ್ಲಿ, ಐಇಸಿ ತಾಲೂಕು ಸಂಯೋಜಕ ಮಹಾಂತೇಶ ಬಾದವನಮಠ ಸೇರಿದಂತೆ ತಾಂತ್ರಿಕ ಸಹಾಯಕರು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು, ಕರ ವಸೂಲಿಗಾರರು ಹಾಗೂ ಸಿಬ್ಬಂದಿ ಇದ್ದರು.