ಸಾರಾಂಶ
ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದ ಮನ್ನಿಕೇರಿ ತೋಟದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಕಿರಣ ಸಿದ್ದಪ್ಪ ಕುರ್ಲಚ್ಚಿ(16) ಬುಧವಾರ ಹೃದಯಾಘಾತದಿಂದ ಮೃತಪದ್ದಾನೆ.
ಕನ್ನಡಪ್ರಭ ವಾರ್ತೆ ಪಾಲಬಾವಿ
ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದ ಮನ್ನಿಕೇರಿ ತೋಟದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಕಿರಣ ಸಿದ್ದಪ್ಪ ಕುರ್ಲಚ್ಚಿ(16) ಬುಧವಾರ ಹೃದಯಾಘಾತದಿಂದ ಮೃತಪದ್ದಾನೆ.ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಕನಸು ಕಾಣುತ್ತಿದ್ದ ವಿದ್ಯಾರ್ಥಿಯ ಅಗಲಿಕೆ ಕುಟುಂಬ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಆಘಾತ ಉಂಟುಮಾಡಿದೆ. ವಿದ್ಯಾರ್ಥಿ ಕಿರಣ ಸಿದ್ದಪ್ಪ ಕುರ್ಲಚ್ಚಿ ನಾಲ್ಕು ವರ್ಷಗಳ ಹಿಂದೆ ನರದೋಷಕ್ಕೆ ತುತ್ತಾಗಿದ್ದ. ಬಳಿಕ ಎರಡು ಕಾಲು ಸ್ವಾಧೀನ ಕಳೆದುಕೊಂಡು ವ್ಹೀಲ್ ಚೇರ್ ಸಹಾಯ ಪಡೆದು ಮನೆಯಲ್ಲಿಯೇ ಅಧ್ಯಯನ ಮಾಡುತ್ತಿದ್ದ. ವೈದ್ಯರ ಬಳಿ ತೋರಿಸಿದರೂ ಫಲ ನೀಡಿರಲಿಲ್ಲ. ಈ ರೋಗ ವೈದ್ಯಕೀಯ ಲೋಕಕ್ಕೆ ಸವಾಲಾಗಿತ್ತು. ಬುಧವಾರ ಮಧ್ಯಾಹ್ನ 12.30ಕ್ಕೆ ಕಿರಣ್ ಆರೋಗ್ಯದಲ್ಲಿ ಏರುಪೇರಾಗಿ ಪ್ರಜ್ಞಾಹೀನಾಗಿದ್ದರಿಂದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಹೃದಯಾಘಾತದಿಂದ ಅಸುನೀಗಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.