ಎಂಸಿಇ ವಿದ್ಯಾರ್ಥಿಗಳಿಂದ ಬೇಲೂರು ದೇಗುಲ ಸುತ್ತ ಸ್ವಚ್ಛತೆ

| Published : Aug 31 2024, 01:39 AM IST

ಎಂಸಿಇ ವಿದ್ಯಾರ್ಥಿಗಳಿಂದ ಬೇಲೂರು ದೇಗುಲ ಸುತ್ತ ಸ್ವಚ್ಛತೆ
Share this Article
  • FB
  • TW
  • Linkdin
  • Email

ಸಾರಾಂಶ

ಎಂಸಿಇ ವಿದ್ಯಾರ್ಥಿನಿಯರು ಬೇಲೂರಿನ ಗ್ರೀನರಿ ಟ್ರಸ್ಟ್, ಭಾರತ್ ಸೇವಾ ದಳದೊಂದಿಗೆ ಪಟ್ಟಣದ ಅಮೃತಲಿಂಗೇಶ್ವರ ಕಲ್ಯಾಣಿ ಆವರಣ ಹಾಗೂ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಹಿಂಭಾಗ ವಾಹನಗಳ ನಿಲುಗಡೆ ಸ್ಥಳದಲ್ಲಿ ಇದ್ದ ಕಸಗಳನ್ನು ಸ್ವಚ್ಛ ಮಾಡಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಬೇಲೂರಿನ ಗ್ರೀನರಿ ಟ್ರಸ್ಟ್ ಹಾಗೂ ಭಾರತ್ ಸೇವಾ ದಳದೊಂದಿಗೆ ಬೇಲೂರು ದೇಗುಲ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬೇಲೂರು

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಬೇಲೂರಿನ ಗ್ರೀನರಿ ಟ್ರಸ್ಟ್ ಹಾಗೂ ಭಾರತ್ ಸೇವಾ ದಳದೊಂದಿಗೆ ಬೇಲೂರು ದೇಗುಲ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿನಿಯರು ಬೇಲೂರಿನ ಗ್ರೀನರಿ ಟ್ರಸ್ಟ್, ಭಾರತ್ ಸೇವಾ ದಳದೊಂದಿಗೆ ಪಟ್ಟಣದ ಅಮೃತಲಿಂಗೇಶ್ವರ ಕಲ್ಯಾಣಿ ಆವರಣ ಹಾಗೂ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಹಿಂಭಾಗ ವಾಹನಗಳ ನಿಲುಗಡೆ ಸ್ಥಳದಲ್ಲಿ ಇದ್ದ ಕಸಗಳನ್ನು ಸ್ವಚ್ಛ ಮಾಡಿದರು.ಮಲ್ನಾಡ್ ಕಾಲೇಜು ವಿದ್ಯಾರ್ಥಿನಿ ಯಶಸ್ವಿನಿ ಮಾತನಾಡಿ, ನಾವು ಆರೋಗ್ಯವಂತರಾಗಿ ಇರಬೇಕಾದರೆ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಾಗ ಮಾತ್ರ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ, ಹಾಗಾಗಿ ಮನೆಯಲ್ಲಿನ ಕಸ, ಅಂಗಡಿಗಳ ಕಸ, ಹಾಗೂ ವಾಣಿಜ್ಯ ಅಂಗಡಿಗಳಲ್ಲಿ ಶೇಖರವಾಗುವ ಕಸಗಳನ್ನು ಪುರಸಭೆಯ ಕಸದ ಗಾಡಿಗೆ ಹಾಕಿ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು ಮನವಿ ಮಾಡಿದರು,ವಿದ್ಯಾರ್ಥಿನಿ ತನ್ಮಯಿ ಮಾತನಾಡಿ, ನಮ್ಮ ಕಾಲೇಜಿನಿಂದ ಪರಿಸರ ಸ್ವಚ್ಛತೆಗೆ ಬೇಲೂರನ್ನು ಆಯ್ಕೆ ಮಾಡಿ ಮಾಡಿಕೊಂಡಾಗ ನಮಗೆ ಸಂತೋಷವಾಗಿ ಇಲ್ಲಿಗೆ ಬಂದು ನಮ್ಮ ವಿದ್ಯಾರ್ಥಿ ಸಹಪಾಠಿಗಳೊಂದಿಗೆ ಶ್ರಮದಾನದ ಮೂಲಕ ಬೇಲೂರಿನ ಬೇರೆ ಬೇರೆ ಭಾಗದ ಮೂರು ಸ್ಥಳಗಳಲ್ಲಿ ಸ್ವಚ್ಛತೆಯನ್ನು ಮಾಡಿದ್ದೇವೆ, ಸ್ವಚ್ಛತೆ ಕಾರ್ಯಕ್ರಮಕ್ಕೆ ನಮ್ಮ ಜೊತೆ ಕೈಜೋಡಿಸಿದ ಬೇಲೂರಿನ ಗ್ರೀನರಿ ಟೆಸ್ಟ್ ಹಾಗೂ ಭಾರತ್ ಸೇವಾದಳದ ಸದಸ್ಯರಿಗೆ ಧನ್ಯವಾದ ಎಂದರು. ಸ್ವಚ್ಛತಾ ಕಾರ್ಯದಲ್ಲಿ ಬೇಲೂರು ಭಾರತ್ ಸೇವಾ ದಳ ಹಾಗೂ ಗ್ರೀನರಿ ಟ್ರಸ್ಟ್ ಅಧ್ಯಕ್ಷ ಯುವರಾಜೇಗೌಡ, ಭಾರತ್ ಸೇವಾದಳದ ರಾಣಿ, ಗ್ರೀನರಿ ಟ್ರಸ್ಟ್ ಸದಸ್ಯ ರಿಜ್ವಾನ್, ನೂರ್ ಅಹಮದ್ ಇನ್ನೂ ಮುಂತಾದವರು ಇದ್ದರು.