ಸಾರಾಂಶ
ಪೊಂಪೈ ಕಾಲೇಜಿನ ಎನ್.ಎಸ್.ಎಸ್ ಮತ್ತು ಎನ್.ಸಿ ಸಿ ಘಟಕದ ಸ್ವಯಂಸೇವಕರಿಂದ ಕಟೀಲು ಬಸ್ ನಿಲ್ದಾಣದಿಂದ ಕಟೀಲು ಶಾಂಭವಿ ನದಿ ತೀರದವರೆಗೆ ಸ್ವಚ್ಛತೆಯ ಘೋಷಣೆಯೊಂದಿಗೆ ಜಾಥಾ ನಡೆಯಿತು.
ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಹಯೋಗದೊಂದಿಗೆ ಐಕಳ ಪೊಂಪೈ ಕಾಲೇಜು ವತಿಯಿಂದ ಸ್ವಚ್ಛತಾ ಹಿ ಸೇವಾ ಅಭಿಯಾನದಲ್ಲಿ ನದಿ ಬದಿ ಸ್ವಚ್ಛತಾ ಕಾರ್ಯಕ್ರಮವು ಕಟೀಲು ನಂದಿನಿ ನದಿ ತೀರದಲ್ಲಿ ನಡೆಯಿತು.
ಪೊಂಪೈ ಕಾಲೇಜಿನ ಎನ್.ಎಸ್.ಎಸ್ ಮತ್ತು ಎನ್.ಸಿ ಸಿ ಘಟಕದ ಸ್ವಯಂಸೇವಕರಿಂದ ಕಟೀಲು ಬಸ್ ನಿಲ್ದಾಣದಿಂದ ಕಟೀಲು ಶಾಂಭವಿ ನದಿ ತೀರದವರೆಗೆ ಸ್ವಚ್ಛತೆಯ ಘೋಷಣೆಯೊಂದಿಗೆ ಜಾಥಾ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ ಕೆ.ವಿ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್, ಎನ್.ಸಿ.ಸಿ ಕಾರ್ಯಕ್ರಮಾಧಿಕಾರಿಗಳಾದ ಪೃಥ್ವಿರಾಜ್ ಬಿ, ನಿಶಿತ್ ಫರ್ನಾಂಡಿಸ್, ಪ್ರಾಧ್ಯಾಪಕರಾದ ಆಶಿತಾ ಜೆ., ತೆರೇಸ ಶರಲ್ ಡಿಕುನ್ನ, ಕಿನ್ನಿಗೋಳಿ ಪ.ಪಂ ಕಾರ್ಯನಿರ್ವಾಹಕಿ ಶಶಿಕಲಾ, ಚಂದ್ರಹಾಸ ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.