ಸಾರಾಂಶ
ಸವಣೂರು: ಸ್ವಚ್ಛತೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರು ಸಹ ತಮ್ಮ ಮನೆ ಸ್ವಚ್ಛತೆ ವಹಿಸಿದಂತೆ ಗ್ರಾಮದ ಸ್ವಚ್ಛತೆ ಕುರಿತು ಜವಾಬ್ದಾರಿ ವಹಿಸುವುದು ಅವಶ್ಯವಾಗಿದೆ ಎಂದು ಶಾಸಕ ಯಾಸೀರ್ ಅಹ್ಮದ ಖಾನ್ ಪಠಾಣ ತಿಳಿಸಿದರು.ತಾಲೂಕಿನ ತೆಗ್ಗಿಹಳ್ಳಿ ಗ್ರಾಪಂ ವ್ಯಾಪ್ತಿಯ ಗುಂಡೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಚ್ಛತೆಯೇ ಸೇವೆ- 2025, ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಇಟ್ಟುಕೊಂಡಾಗ ಮಾತ್ರ ಸಾಂಕ್ರಾಮಿಕ ರೋಗ ತಡೆಯುವುದರೊಂದಿಗೆ ಗಾಂಧೀಜಿ ಅವರ ಗ್ರಾಮ ಸ್ವಚ್ಛತಾ ಕನಸು ನನಸು ಮಾಡಲು ಸಾಧ್ಯವಾಗಲಿದೆ. ಈ ಹಿನ್ನೆಲೆ ಸೆ. 17ರಿಂದ ಅ. 2ರ ವರೆಗೆ ನಿತ್ಯ ಕೈಗೊಳ್ಳಲಾಗುವುದು. ಕ್ಷೇತ್ರದ 3 ಪುರಸಭೆ ಹಾಗೂ 37 ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ತಾಪಂ ಸಹಯೋಗದಲ್ಲಿ ಸ್ವಚ್ಛತೆಗಾಗಿ ಕಾರ್ಯಕ್ರಮ ಆಯೋಜನೆಗೆ ಯೋಜನೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ತಾಪಂ ಇಒ ಬಿ.ಎಸ್. ಶಿಡೇನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಚ್ಛತೆಯೇ ಸೇವೆ- 2025, ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಏರ್ಪಡಿಸಲಾಗುತ್ತಿದೆ ಎಂದರು. ನಂತರ, ಶ್ರಮದಾನದಲ್ಲಿ ಪಾಲ್ಗೊಂಡ ಸರ್ವರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾಪಂ ಅಧ್ಯಕ್ಷೆ ರಾಧವ್ವ ಹರಿಜನ ಅಧ್ಯಕ್ಷತೆ ವಹಿಸಿದ್ದರು.ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಗ್ರಾಪಂ ಉಪಾಧ್ಯಕ್ಷ ತಿಪ್ಪನಗೌಡ ಪಾಟೀಲ, ಸದಸ್ಯರಾದ ಸೋಮಶೇಖರ ತಳವಾರ, ಗಿರೀಶಗೌಡ ಪಾಟೀಲ, ರಸೂಲ್ ಗುಂಡೂರ, ಶಾಂತಪ್ಪ ಲಮಾಣಿ, ಸುರೇಶಗೌಡ ಪಾಟೀಲ, ಲಲಿತವ್ವ ನೇಗುಣಿ, ಲಕ್ಷ್ಮವ್ವ ಪೂಜಾರ, ದ್ಯಾಮವ್ವ ಪಾಟೀಲ, ಪುಷ್ಪಾ ಮಸಳಿ, ಪ್ರೇಮಾ ಪಾಟೀಲ, ರೇಣುಕಾ ಬೂದಿಹಾಳ, ಲಕ್ಷ್ಮವ್ವ ವಾಲ್ಮೀಕಿ, ಗದಿಗೆಪ್ಪ ಯರೇಸಿಮಿ ಇತರರು ಪಾಲ್ಗೊಂಡಿದ್ದರು.