ಸಿದ್ದಾಪುರ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

| Published : Oct 30 2025, 02:45 AM IST

ಸಾರಾಂಶ

ವಿಖಾಯ ತಂಡದ ಕಾರ್ಯಕರ್ತರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಸುತ್ತಮುತ್ತಲಿನ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಎಸ್ ಕೆ ಎಸ್ ಎಸ್ ಎಫ್ ವಿಖಾಯ ಸಂಘಟನೆಯ ನೂರನೇ ಅಂತರಾಷ್ಟ್ರೀಯ ಸಮ್ಮೇಳನದ ಪ್ರಚಾರದ ಅಂಗವಾಗಿ ಕೊಡಗು ಜಿಲ್ಲಾ ವಿಖಾಯ ತಂಡದಿಂದ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಯನ್ನು ಮಾಡುವ ಮೂಲಕ ಗಮನ‌ಸೆಳೆದರು.

ಕಾರ್ಯಕ್ರಮದ ಅಂಗವಾಗಿ ವಿಖಾಯ ತಂಡದ ಕಾರ್ಯಕರ್ತರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಸುತ್ತಮುತ್ತಲಿನ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಸಂಘಟನೆಯ ಕೊಡಗು ಜಿಲ್ಲಾ ಚೇರ್ಮನ್ ಕರೀಂ ಮಾತನಾಡಿ, ವಿಖಾಯ ತಂಡವು ಸಾಮಾಜಿಕ ಕಳಕಳಿಯೊಂದಿಗೆ ಸದಾ ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವ ಸಂಘಟನೆಯಾಗಿದೆ. ಈ ಸಂಘಟನೆಯು ತರಬೇತಿಯನ್ನು ಪಡೆದ ನುರಿತರೊಂದಿಗೆ ಪ್ರಳಯ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸೇನೆಯೊಂದಿಗೆ ಕೈಜೋಡಿಸುವ ಮೂಲಕ ಸಮಾಜದ ನೆರವಿಗೆ ನಿಂತಿದೆ. ಎಸ್ ಕೆ ಎಸ್ ಎಸ್ ಎಫ್ ವಿಖಾಯ ಸಂಘಟನೆಯ ಅಂತರಾಷ್ಟ್ರೀಯ ಸಮ್ಮೇಳನವು ಕಾಸರಗೋಡಿನಲ್ಲಿ ನಡೆಯಲಿದ್ದು ಕಾರ್ಯಕ್ರಮದ ಪ್ರಚಾರಾಂದೋಲನದ ಅಂಗವಾಗಿ ನ. 29 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿದ್ದು ಕಾರ್ಯಕ್ರಮದ ಪ್ರಚಾರದ ಉದ್ದೇಶದಿಂದ ಜಿಲ್ಲೆಯ ಎಲ್ಲೆಡೆ ವಿಖಾಯ ತಂಡವು ಸ್ವಚ್ಛತಾ ಕಾರ್ಯಗಳನ್ನು ಮಾಡುವ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಲಿದೆ ಎಂದರು.ಈ ಸಂದರ್ಭ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕೊಡಗು ಜಿಲ್ಲಾ ಕನ್ವೀನರ್ ಶೌಕತ್ ಹಾಜಿ, ಸಂಘಟನೆಯ ಪ್ರಮುಖರಾದ ಸಂಶುದ್ದಿನ್ ಅಯ್ಯೂಬ್ ನಲ್ವತ್ತೇಕರೆ ಸೇರಿದಂತೆ ನೆಲ್ಯಹುದಿಕೇರಿ, ಸಿದ್ದಾಪುರ, ನಲ್ವತ್ತೇಕರೆ ವ್ಯಾಪ್ತಿಯ ವಿಖಾಯ ಸಂಘಟನೆಯ ಪ್ರಮುಖರು ಇದ್ದರು.