ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಚತೆ ಕಾಪಾಡಬೇಕು : ಬಸವರಾಜ್

| Published : Jul 24 2025, 12:45 AM IST

ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಚತೆ ಕಾಪಾಡಬೇಕು : ಬಸವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕಳೆದ ಎರಡು ವಾರದಿಂದ ನಗರದ ಸಂತೆ ಮಾರುಕಟ್ಟೆ ಸ್ವಚ್ಛತೆ ಹಾಗೂ ವರ್ತಕರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಇಂದು ಹೇಳಿದರು.

ಸಂತೆ ಮಾರ್ಕೆಟ್‌ಗೆ ಭೇಟಿ ನೀಡಿ ವರ್ತಕರಿಗೆ ಸೂಚನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಳೆದ ಎರಡು ವಾರದಿಂದ ನಗರದ ಸಂತೆ ಮಾರುಕಟ್ಟೆ ಸ್ವಚ್ಛತೆ ಹಾಗೂ ವರ್ತಕರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಇಂದು ಹೇಳಿದರು.ಬುಧವಾರ ಸಂತೆ ಮಾರ್ಕೆಟ್‌ಗೆ ಭೇಟಿ ನೀಡಿ ಸಂತೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ವರ್ತಕರಿಗೆ ಸೂಚನೆ ನೀಡಿ ಗ್ರಾಹಕರಿಗೆ ಅರಿವು ಮೂಡಿಸಿದರು. ಎಲ್ಲಾ ವರ್ತಕರು ಪ್ರತೀ ವಾರ ಇದೇ ರೀತಿ ವ್ಯಾಪಾರ ವಹಿವಾಟು ನಡೆಸಬೇಕೆಂದು ಸೂಚನೆ ನೀಡಿದ ಅವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತರಕಾರಿ ಮುಂತಾದ ಅಗತ್ಯ ವಸ್ತುಗಳನ್ನು ಖರೀದಿಸಬೇಕೆಂದು ಮನವಿ ಮಾಡಿದರು.

ನಗರದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡಿದ್ದು, ಸಂತೆ ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್‌ನ್ನು ವರ್ತಕರು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತಿದ್ದು, ಗ್ರಾಹಕರು ಬಟ್ಟೆ ಬ್ಯಾಗ್‌ಗಳನ್ನು ತರುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ವಿನಂತಿಸಿದರು.ಶುದ್ಧಗಂಗಾ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ನಿರ್ಮಿಸಬೇಕೆಂಬ ವರ್ತಕರು ಹಾಗೂ ಸಾರ್ವಜನಿಕರ ಬೇಡಿಕೆ ಗನುಗುಣವಾಗಿ ಮಾರುಕಟ್ಟೆಯಲ್ಲಿ ಹಾಲಿ ಇರುವ ಜೊತೆಗೆ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ನಗರಸಭೆಯಲ್ಲಿ ಅನುಮೋದನೆ ಪಡೆದು ಇನ್ನೊಂದು ತಿಂಗಳಲ್ಲಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ನಡೆಸುತ್ತಿರುವವರ ಅನುಕೂಲಕ್ಕಾಗಿ ಮಯೂರ ಹೋಟೆಲ್ ಹಿಂಭಾಗದಲ್ಲಿ ಕಟ್ಟೆ ನಿರ್ಮಿಸಿದ್ದು, ತಾತ್ಕಾಲಿಕವಾಗಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ದಿನದ 24 ಗಂಟೆ ಇಲ್ಲಿಯೇ ವ್ಯಾಪಾರ ಮಾಡಬೇಕೆಂದು ಸೂಚನೆ ನೀಡಿದರು.ನಗರಸಭೆ ಸದಸ್ಯೆ ಸಿ.ಎನ್ ಸಲ್ಮಾ ಮಾತನಾಡಿ, ನಗರಸಭೆ ನಿರ್ಧಾರದಿಂದ ಸಂತೆ ಮಾರುಕಟ್ಟೆ ಸ್ವಚ್ಛತೆಯಿಂದ ಕೂಡಿದ್ದು, ವರ್ತಕರು ಮತ್ತು ನಾಗರಿಕರು ಇದೇ ರೀತಿ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಈಶ್ವರ್, ಅಣ್ಣಯ್ಯ ಉಪಸ್ಥಿತರಿದ್ದರು. 23 ಕೆಸಿಕೆಎಂ 2ಚಿಕ್ಕಮಗಳೂರು ನಗರದ ಸಂತೆ ಮಾರುಕಟ್ಟೆಗೆ ಪೌರಾಯುಕ್ತ ಬಿ.ಸಿ. ಬಸವರಾಜ್‌ ಅವರು ಭೇಟಿ ನೀಡಿದ್ದರು.