ಸಾರಾಂಶ
ಸ್ವಚ್ಛ ಭಾರತ ಅಭಿಯಾನದ 10ನೇ ವಾರ್ಷಿಕೋತ್ಸವ ಪ್ರಯುಕ್ತ ದೇಶದೆಲ್ಲೆಡೆ ನಡೆಯುತ್ತಿರುವ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದಡಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಮಂಗಳೂರು ಘಟಕದಲ್ಲಿ ನಡೆದ ಕಾರ್ಯಕ್ರಮಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಸ್ವಚ್ಛತೆ ಎನ್ನುವುದು ಭಾರತಾಂಬೆ ಹಾಗೂ ಭಗವಂತನ ಸೇವೆಯಾಗಿದ್ದು, ಇದು ನಮ್ಮೆಲ್ಲರ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರಬೇಕು ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಕರೆ ನೀಡಿದ್ದಾರೆ.ಸ್ವಚ್ಛ ಭಾರತ ಅಭಿಯಾನದ 10ನೇ ವಾರ್ಷಿಕೋತ್ಸವ ಪ್ರಯುಕ್ತ ದೇಶದೆಲ್ಲೆಡೆ ನಡೆಯುತ್ತಿರುವ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದಡಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಮಂಗಳೂರು ಘಟಕದಲ್ಲಿ ನಡೆದ ಕಾರ್ಯಕ್ರಮಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಸೇವೆ ಮತ್ತು ತ್ಯಾಗಕ್ಕೆ ತನ್ನದೇ ಮಹತ್ವವಿದೆ. ಹೀಗಾಗಿ ಎಲ್ಲರೂ ಸ್ವಚ್ಛತಾ ಸೇವೆಯನ್ನು ವ್ರತದಂತೆ ಸ್ವೀಕರಿಸಬೇಕು. ಇದು ಒಂದು ದಿನದ ಅಭಿಯಾನಕ್ಕೆ ಮಾತ್ರ ಸೀಮಿತವಾಗಬಾರದು. ಯಾವುದೋ ಒಂದು ಸಂಸ್ಥೆ ಅಥವಾ ವ್ಯವಸ್ಥೆ ಭಾಗವಾಗಿದ್ದಾಗ ನಾವು ಸ್ವಚ್ಛತೆಯನ್ನು ಸೇವೆ ರೂಪದಲ್ಲಿ ಮಾಡುವುದನ್ನು ವೈಯಕ್ತಿಕವಾಗಿಯೂ ಹೆಚ್ಚು ಬದ್ಧತೆಯಿಂದ ಮಾಡಬೇಕು ಎಂದು ಕ್ಯಾ.ಚೌಟ ಹೇಳಿದರು.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಥವಾ ದೇಶದ ಯಾವುದೇ ಭದ್ರತಾ ಪಡೆಯ ಸೈನಿಕರನ್ನು ಜನಸಾಮಾನ್ಯರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ಹೀಗಾಗಿ ಸೈನಿಕರು ಇಡುವ ಪ್ರತಿ ಹೆಜ್ಜೆಯೂ ಜನರಿಗೆ ಸ್ಫೂರ್ತಿಯಾಗುವಂತೆ ಇರಬೇಕು. 10 ವರ್ಷಗಳ ಹಿಂದೆ 2014ರ ಅ.2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದ ಸ್ವಚ್ಛ ಭಾರತ ಅಭಿಯಾನವನ್ನು ಸೇವೆ ರೂಪದಲ್ಲಿ ಮಾಡಬೇಕು ಎಂದು ಕ್ಯಾ. ಚೌಟ ಸಲಹೆ ನೀಡಿದರು.ಶಾಸಕರಾದ ಉಮಾನಾಥ ಕೋಟ್ಯಾನ್, ಸೀನಿಯರ್ ಕಮಾಂಡೆಂಟ್ ವೀರೇಂದ್ರ ಮೋಹನ್, ಡೆಪ್ಯೂಟಿ ಕಮಾಂಡೆಂಟ್ ಎಸ್.ಎಂ. ಮೈಟೈ, ಸನತ್ ಕುಮಾರ್ ಶೆಟ್ಟಿ, ಭದ್ರತಾ ಸಿಬ್ಬಂದಿ ಮತ್ತು ಬಿಜೆಪಿ ಮುಖಂಡರು ಇದ್ದರು.
;Resize=(128,128))
;Resize=(128,128))