ಭುವನೇಶ್ವರಿ ಸನ್ನಿಧಿಯಲ್ಲಿ ಸ್ವಚ್ಛತಾ ಕಾರ್ಯ, ಕಾಗೇರಿ ಭಾಗಿ

| Published : Jan 15 2024, 01:51 AM IST / Updated: Jan 15 2024, 04:35 PM IST

ಸಾರಾಂಶ

ಭುವನಗಿರಿ ಶ್ರೀಭುವನೇಶ್ವರಿ ದೇಗುಲದ ಆವಾರದಲ್ಲಿ ಕಸಕಡ್ಡಿ ಹೆಕ್ಕಿ, ಪ್ರಾಂಗಣವನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು. ನಂತರ ೧೦೮ ರಾಮನಾಮ ಜಪಿಸಿ, ದೇವಿಗೆ ಪೂಜೆ

ಸಿದ್ದಾಪುರ: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗುವ ಅಪೂರ್ವ ಸಂದರ್ಭದಲ್ಲಿ ಜ. ೧೪ರಿಂದ ೨೧ರವರೆಗೆ ಎಲ್ಲ ತೀರ್ಥಕ್ಷೇತ್ರ ಮತ್ತು ದೇಗುಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಭುವನಗಿರಿಯ ಭುವನೇಶ್ವರಿ ಸನ್ನಿಧಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವರು ಭುವನಗಿರಿ ಶ್ರೀಭುವನೇಶ್ವರಿ ದೇಗುಲದ ಆವಾರದಲ್ಲಿ ಕಸಕಡ್ಡಿ ಹೆಕ್ಕಿ, ಪ್ರಾಂಗಣವನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು. ನಂತರ ೧೦೮ ರಾಮನಾಮ ಜಪಿಸಿ, ದೇವಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ, ಗುರುರಾಜ ಶಾನಭಾಗ, ಆದರ್ಶ ಪೈ ಬೀಳಗಿ, ಸುರೇಶ ನಾಯ್ಕ ಬಾಲಿಕೊಪ್ಪ, ಶಾಂತಕುಮಾರ ಭಟ್, ಗಿರೀಶಕುಮಾರ ಆಲ್ಮನೆ, ಕೃಷ್ಣಮೂರ್ತಿ ನಾಯ್ಕ, ಮಹೇಶ ನಾಯ್ಕ, ಅಣ್ಣಪ್ಪ ನಾಯ್ಕ, ತೋಟಪ್ಪ ನಾಯ್ಕ ಮುಂತಾದ ಕಾರ್ಯಕರ್ತರು, ದೇವಾಲಯ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.