ಸಾರಾಂಶ
ಹಾವೇರಿಯಲ್ಲಿ ಒಟ್ಟು 2381 ಪ್ರಕರಣಗಳಲ್ಲಿ 819 ಫಲಾನುಭವಿಗಳು 2ನೇ ಹಂತದ ಅನುದಾನ ಪಡೆಯಲು ಅರ್ಹರಿದ್ದಾರೆ, ಈ ಬಗ್ಗೆ ಪರಿಶೀಲನೆ ಸಹ ನಡೆಸಲಾಗಿದೆ. ಬ್ಲಾಕ್ ಆಗಿರುವ ಫಲಾನುಭವಿಗಳ ಎಲ್ಲ ದಾಖಲೆಗಳನ್ನು ವರದಿಯಲ್ಲಿ ಸಹ ಸಲ್ಲಿಸಲಾಗಿದೆ.
ಬ್ಯಾಡಗಿ: ಹಾವೇರಿ ಜಿಲ್ಲೆಯ ನೆರೆ ಸಂತ್ರಸ್ಥರ ಪುನರ್ವಸತಿ ಯೋಜನೆಯಡಿಯಲ್ಲಿ 2019-20ನೇ ಸಾಲಿನಿಂದ 22-23 ನೇ ಸಾಲಿನ ವರೆಗೆ ರಾಜೀವ ಗಾಂಧಿ ನಿಗಮದ ತಂತ್ರಾಂಶದಲ್ಲಿ ಬ್ಲಾಕ್ ಆಗಿದ್ದ ಮನೆಗಳನ್ನು ತೆರವುಗೊಳಿಸುವಂತೆ ಪಂಚ ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ನಿಗಮಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಈ ಕುರಿತು ಮಂಗಳವಾರ ಮಾತನಾಡಿದ ಅವರು, ಕಳೆದ 2019-20 ನೇ ಸಾಲಿನಿಂದ 2022-23 ನೇ ಸಾಲಿನ ವರೆಗೆ ನೆರೆ ಸಂತ್ರಸ್ಥರ ಪುನರ್ವಸತಿ ಯೋಜನೆ ಮನೆಗಳ ಪೈಕಿ ವಿವಿಧ ಕಾರಣಗಳಿಂದ ರಾಜೀವ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಬ್ಲಾಕ್ ಆಗಿರುವ ಮನೆಗಳನ್ನು ತೆರವುಗೊಳಿಸಿ ದೇವರಾಜ ಅರಸು ವಸತಿ ಯೋಜನೆಯ ಅಡಿಯಲ್ಲಿ ಮುಂದುವರಿಸಿದ್ದಲ್ಲಿ ಉತ್ತಮ ಇದರಿಂದ ಅವರಿಗೆ ಅನೂಕೂಲವಾಗಲಿದ್ದು, ಈ ಬಗ್ಗೆ ಜಿಲ್ಲೆಯ ಆಯಾ ತಾಲೂಕು ತಹಸೀಲ್ದಾರ್‌ರಿಂದ ಪರಿಶೀಲಿಸಿ ವರದಿ ಪಡೆದುಕೊಂಡು ದೃಢೀಕರಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಈ ಅವಧಿಯಲ್ಲಿ ಹಾವೇರಿಯಲ್ಲಿ ಒಟ್ಟು 2381 ಪ್ರಕರಣಗಳಲ್ಲಿ 819 ಫಲಾನುಭವಿಗಳು 2ನೇ ಹಂತದ ಅನುದಾನ ಪಡೆಯಲು ಅರ್ಹರಿದ್ದಾರೆ, ಈ ಬಗ್ಗೆ ಪರಿಶೀಲನೆ ಸಹ ನಡೆಸಲಾಗಿದೆ. ಬ್ಲಾಕ್ ಆಗಿರುವ ಫಲಾನುಭವಿಗಳ ಎಲ್ಲ ದಾಖಲೆಗಳನ್ನು ವರದಿಯಲ್ಲಿ ಸಹ ಸಲ್ಲಿಸಲಾಗಿದೆ. ಬ್ಲಾಕ್ ಆಗಿರುವ 819 ಫಲಾನುಭವಿಗಳು ನಮಗೆ ಅತ್ಯಂತ ನೋವಿನಿಂದ ಮನವಿ ಲ್ಲಿಸಿ, ಬ್ಲಾಕ್ ತೆರವುಗೊಳಿಸುವಂತೆ ಒತ್ತಾಯ ಮಾಡಿದ್ದು ಕೂಡಲೇ ತಾವುಗಳು ಎಲ್ಲವನ್ನೂ ಪರಿಶೀಲನೆ ಮಾಡಿ ಈ ಫಲಾನುಭವಿಗಳಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.