ಐ ಲವ್ ಮಹಮ್ಮದ್‌ ಬರಹದ ಫ್ಲೆಕ್ಸ್‌ಗಳ ತೆರವು

| Published : Sep 27 2025, 12:00 AM IST

ಐ ಲವ್ ಮಹಮ್ಮದ್‌ ಬರಹದ ಫ್ಲೆಕ್ಸ್‌ಗಳ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ತಡರಾತ್ರಿ ಕಾರ್ಲ್ ಮಾರ್ಕ್ಸ್‌ ನಗರದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ದಾವಣಗೆರೆ ಹಳೇ ಭಾಗದ ವಿವಿಧೆಡೆ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಐ ಲವ್ ಮಹಮ್ಮದ್ ಬರಹದ ಬ್ಯಾನರ್‌ಗಳನ್ನು ಅದೇ ಸಮುದಾಯದವರು ತೆರವುಗೊಳಿಸಿದ್ದಾರೆ.

- ಮುಸ್ಲಿಮರಿಂದಲೇ ತೆರವು, ಪೊಲೀಸ್ ಭದ್ರತೆ । ರಂಗನಾಥನ ಬಿಡಿ: ತಾಯಿ ಅಳಲು- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಬುಧವಾರ ತಡರಾತ್ರಿ ಕಾರ್ಲ್ ಮಾರ್ಕ್ಸ್‌ ನಗರದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ದಾವಣಗೆರೆ ಹಳೇ ಭಾಗದ ವಿವಿಧೆಡೆ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಐ ಲವ್ ಮಹಮ್ಮದ್ ಬರಹದ ಬ್ಯಾನರ್‌ಗಳನ್ನು ಅದೇ ಸಮುದಾಯದವರು ತೆರವುಗೊಳಿಸಿದ್ದಾರೆ.

ಹರ್ ಜಗಾ ಟ್ರೆಂಡ್ ಕರೋ, ದುಷ್ಮನ್‌ ಕಾ ಖಲೀಜಾ ಜಲಾವೋ ಎಂಬ ಬರಹದ ಜೊತೆಗೆ ಐ ಲವ್ ಮಹಮ್ಮದ್ ಬ್ಯಾನರ್ ಹಾಕಲಾಗಿತ್ತು. ಅನುಮತಿಯನ್ನೇ ಪಡೆಯದೇ ಹಾಕಿದ್ದ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಈ ರೀತಿಯ ಪ್ರಚೋದಕಾರಿ ಬರಹದ ಸಮೇತ ಐ ಲವ್ ಮಹಮ್ಮದ್ ಬ್ಯಾನರ್ ಸಹ ಕಟ್ಟಿದ್ದರು. ಅವುಗಳನ್ನು ಕಟ್ಟಿದ್ದವರಿಂದಲೇ ಪೊಲೀಸರು ತೆರವು ಮಾಡಿಸಿದ್ದಾರೆ. ಕಾರ್ಲ್‌ ಮಾರ್ಕ್ಸ್ ನಗರ ಘಟನೆಯಿಂದ ಜಿಲ್ಲಾ ಕೇಂದ್ರ ಬೂದಿ ಮುಚ್ಚಿದ ಕೆಂಡದಂತಾಗಿದೆ. ಉದ್ವಿಗ್ನಗೊಂಡಿದ್ದ ಕಾರ್ಲ್ ಮಾರ್ಕ್ಸ್ ನಗರ ಈಗ ಸಹಜ ಸ್ಥಿತಿಯತ್ತ ಮರಳಿದ್ದು, ಪೊಲೀಸ್ ಬಿಗಿ ಭದ್ರತೆಯೂ ಮುಂದುವರಿಸಲಾಗಿದೆ.

ಮೊನ್ನೆ ಘಟನೆಯಲ್ಲಿ ಹಲ್ಲೆಗೊಳಗಾಗಿ, ಗಾಯಗೊಂಡಿದ್ದ ರೇಖಾ ಸಹೋದರ ರಂಗನಾಥನನ್ನು ಪೊಲೀಸರು ಬಂಧಿಸಿದ್ದಾರೆ. ಯಮನೂರಪ್ಪ, ಗಂಗಮ್ಮ ದಂಪತಿ ಮಗನಾದ ರಂಗನಾಥನನ್ನು ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ರಂಗನಾಥ ಸೇರಿದಂತೆ 15 ಜನರ ವಿರುದ್ಧ ಮೊಹಮ್ಮದ್ ಸಾದಿಕ್ ನೀಡಿದ್ದ ದೂರಿನ ಹಿನ್ನೆಲೆ ಬಂಧಿಸಲಾಗಿದೆ.

ಸೆ.24ರಂದು ಸಂಜೆ 7.30ರ ವೇಳೆ ಐ ಲವ್ ಮಹಮ್ಮದ್ ಫ್ಲೆಕ್ಸ್ ವಿಚಾರಕ್ಕೆ ಗಲಾಟೆಯಾಗಿತ್ತು. ಅನುಮತಿ ಇಲ್ಲದೇ ಪ್ಲೆಕ್ಸ್ ಹಾಕಿದ್ದೀರಿ ಎಂಬುದಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾಗಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ನನ್ನನನ್ನು ಬಿಡುಗಡೆ ಮಾಡಿ:

ಮಗ ರಂಗನಾಥನ ವಿರುದ್ಧ ಸುಳ್ಳು ದೂರು ನೀಡಿದ್ದು, ಪೊಲೀಸರು ತಕ್ಷಣ ಮಗನಿಗೆ ಬಿಡುಗಡೆ ಮಾಡಬೇಕು ಎಂದು ಗಂಗಮ್ಮ ಯಮನೂರಪ್ಪ ಒತ್ತಾಯಿಸಿದ್ದಾರೆ. ಫ್ಲೆಕ್ಸ್ ವಿಚಾರಕ್ಕೆ ನನ್ನ ಮಗ ರಂಗನಾಥ ಹೋಗಿಯೇ ಇಲ್ಲ. ನಮ್ಮ ಮನೆ ಎದುರು ಫ್ಲೆಕ್ಸ್ ಹಾಕಲು ಬಂದಾಗ ಪ್ರಶ್ನಿಸಿದ್ದ ಅಷ್ಟೇ. ಅವನು ತಪ್ಪು ಮಾಡಿಲ್ಲ. ಇದು ಯಾವ ನ್ಯಾಯ? ಮಗನ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ರಂಗನಾಥ ಮೊದಲು ಮನೆಗೆ ಬರಲಿ ಎಂದು ಕಣ್ಣೀರಿಟ್ಟರು.

- - -

* ಕಾರ್ಲ್‌ ಮಾರ್ಕ್ಸ್ ನಗರ ಘಟನೆ: 7 ಬಂಧನ - ಅಧಿಕಾರಿ, ಸಿಬ್ಬಂದಿ ಒಳಗೊಂಡ 4 ತಂಡ ರಚನೆ

ದಾವಣಗೆರೆ: ದಾವಣಗೆರೆ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಸೆ.24ರಂದು ಫ್ಲೆಕ್ಸ್ ಕಟ್ಟುವ ವಿಚಾರದ ಘಟನೆಗೆ ಸಂಬಂಧಿಸಿದಂತೆ ಆಜಾದ್ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಒಳಗೊಂಡ 4 ತಂಡಗಳನ್ನು ರಚಿಸಿದ್ದು, ಈವರೆಗೆ ಒಟ್ಟು 7 ಆರೋಪಿಗಳನ್ನು ಪೊಲೀಸ್ ಇಲಾಖೆ ಬಂಧಿಸಿದೆ.

ನಗರದಲ್ಲಿ ಎರಡೂ ಕಡೆಯ ಮುಖಂಡರಿಗೆ ಶಾಂತಿ, ಸೌಹಾರ್ದತೆ ಕಾಪಾಡಲು ಉಭಯ ಕೋಮಿನ ಮುಖಂಡರು, ನಾಗರೀಕರು ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು. ಯಾವುದೇ ಕೋಮಿನ ಮುಖಂಡರು, ನಾಗರೀಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಹೇಳಿಕೆ, ಪೋಸ್ಟ್‌ಗಳನ್ನು ಹಂಚಿಕೊಳ್ಳಬಾರದು. ಸೂಚನೆ ಉಲ್ಲಂಘಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಸಿದ್ದು, ತನಿಖೆ ಮುಂದುವರಿದಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

- - -

(ಸಾಂದರ್ಭಿಕ ಚಿತ್ರ)