ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಚಂಪಕನಗರ ಟೋಲ್‌ಗೆಟ್‌ವರೆಗೆ ಇದ್ದ ಸುಮಾರು ೫೦ಕ್ಕೂ ಅಧಿಕ ಎಲ್ಲಾ ತರಹದ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಮುಂಜಾನೆ ೫.೩೦ಕ್ಕೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ, ಒಂದು ಜೆಸಿಬಿ, ೩೦ಕ್ಕೂ ಅಧಿಕ ಪುರಸಭೆ ಸಿಬ್ಬಂದಿ, ನಾಲ್ಕು ಟ್ರಾಕ್ಟರ್‌ಗಳು ಹಾಗೂ ಹೆಚ್ಚಿನ ಪೋಲಿಸ್ ಭದ್ರತೆ ಬಳಸಿ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದ ಮುಖ್ಯರಸ್ತೆಯ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿದ್ದ ಗೂಡಂಗಡಿಗಳನ್ನು ಸೋಮವಾರ ಮುಂಜಾನೆ ಜೆಸಿಬಿ ಯಂತ್ರಗಳನ್ನು ಬಳಸಿ ತೆರವುಗೊಳಿಸಲಾಯಿತು.ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಚಂಪಕನಗರ ಟೋಲ್‌ಗೆಟ್‌ವರೆಗೆ ಇದ್ದ ಸುಮಾರು ೫೦ಕ್ಕೂ ಅಧಿಕ ಎಲ್ಲಾ ತರಹದ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಮುಂಜಾನೆ ೫.೩೦ಕ್ಕೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ, ಒಂದು ಜೆಸಿಬಿ, ೩೦ಕ್ಕೂ ಅಧಿಕ ಪುರಸಭೆ ಸಿಬ್ಬಂದಿ, ನಾಲ್ಕು ಟ್ರಾಕ್ಟರ್‌ಗಳು ಹಾಗೂ ಹೆಚ್ಚಿನ ಪೋಲಿಸ್ ಭದ್ರತೆ ಬಳಸಿ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.ಕಾರ್ಯಚರಣೆ ಆರಂಭವಾದ ಕೆಲವೇ ಕ್ಷಣದಲ್ಲಿ ಗುಂಪುಗೂಡಿದ ಬೀದಿಬದಿ ವ್ಯಾಪಾರಿಗಳು ಪುರಸಭೆ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಕೆಲಕಾಲ ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಆದರೆ, ಹೆಚ್ಚಿನ ಪೋಲಿಸ್ ಭದ್ರತೆ ಇದ್ದ ಕಾರಣಕ್ಕೆ ಕಾರ್ಯಚರಣೆ ಸಾಂಘವಾಗಿ ನೆರವೇರಿತು. ಹಲವು ವರ್ಷಗಳಿಂದ ಪಟ್ಟಣದ ಹಳೇ ಬಸ್ ನಿಲ್ದಾಣ ಸುತ್ತಲಿನ ಪ್ರದೇಶ ಗೂಡಂಗಡಿಗಳಿಂದಾಗಿ ಕೊಳಗೇರಿಯಂತೆ ಬಾಸವಾಗುತ್ತಿದ್ದರಿಂದ ಪಟ್ಟಣದ ಸೌಂದರ್ಯಕ್ಕೆ ಕುಂದು ತರುತ್ತಿರುವ ಬೀದಿಬದಿ ಅಂಗಡಿಗಳ ತೆರವಿಗೆ ಸಾರ್ವಜನಿಕ ವಲಯದಿಂದ ಬಾರಿ ಪ್ರಮಾಣದ ಒತ್ತಾಯ ಕೇಳಿ ಬರುತ್ತಿತ್ತು.ಕಳೆದ ವಾರ ಪಟ್ಟಣಕ್ಕೆ ಬೇಟಿ ನೀಡಿದ್ದ ಜಿಲ್ಲಾಧಿಕಾರಿಗೂ ಈ ಬಗ್ಗೆ ದೂರು ನೀಡಲಾಗಿದ್ದು ಜಿಲ್ಲಾಧಿಕಾರಿ ತೆರವಿಗೆ ಸೂಚನೆ ನೀಡಿದ್ದರಿಂದ ಕಾರ್ಯಾಚರಣೆ ನಡೆಸಲಾಗಿದೆ.