ಸಿದ್ದಾಪುರ, ಗಣಂಗೂರು ಗ್ರಾಮಗಳಲ್ಲಿ ಕೆರೆ-ಕಟ್ಟೆಗಳ ಒತ್ತುವರಿ ತೆರವು

| Published : Jul 14 2024, 01:39 AM IST

ಸಿದ್ದಾಪುರ, ಗಣಂಗೂರು ಗ್ರಾಮಗಳಲ್ಲಿ ಕೆರೆ-ಕಟ್ಟೆಗಳ ಒತ್ತುವರಿ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಗಣಂಗೂರು ಕಟ್ಟೆಗೆ ಸೇರಿದ ಸುಮಾರು 20 ಗುಂಟೆಯಷ್ಟು ಜಾಗ ಒತ್ತುವರಿಯಾಗಿತ್ತು. ಇದೇ ಕಟ್ಟೆಗೆ ಹೊಂದಿಕೊಂಡಿರುವ ಸಿದ್ದಾಪುರ ಕೆರೆಯ ಸುಮಾರು 15 ಗುಂಟೆ ಜಾಗ ಕೂಡ ಅತಿಕ್ರಮವಾದ್ದು ಅವುಗಳ ತೆರವು ಮಾಡಿ ಚರಂಡಿ ತೆಗೆಯಲಾಗಿದೆ. ತಾಲೂಕಿನಲ್ಲಿ ಈಗಾಗಲೇ ಒತ್ತುವರಿಯಾಗಿರುವ ಎಲ್ಲ ಕೆರೆ-ಕಟ್ಟೆಗಳ ಜಾಗದ ಸರ್ವೇ ನಡೆಸಿ ತೆರವು ಕಾರ್ಯಾ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಸಿದ್ದಾಪುರ ಹಾಗೂ ಗಣಂಗೂರು ಗ್ರಾಮಗಳಲ್ಲಿ ಒತ್ತುವರಿಯಾಗಿದ್ದ ಕೆರೆ-ಕಟ್ಟೆ ಜಾಗವನ್ನು ತಹಸೀಲ್ದಾರ್ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಿದರು.

ಸಿದ್ದಾಪುರ ಗ್ರಾಮಕ್ಕೆ ಸೇರಿದ ಸರ್ವೇ ನಂ.104ರಲ್ಲಿನ 1.12 ಎಕರೆ ಕೆರೆ ಮತ್ತು ಅದಕ್ಕೆ ಹೊಂದಿಕೊಂಡ ಗಣಂಗೂರು ಗ್ರಾಮದ ಸರ್ವೇ ನಂ.81ರಲ್ಲಿರುವ 4.35 ಎಕರೆ ವಿಸ್ತೀರ್ಣದ ಕಟ್ಟೆ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ ಒತ್ತುವರಿ ತೆರವು ಮಾಡಿದರು.

ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು, ಸರ್ವೇ ಅಧಿಕಾರಿಗಳ ಜೊತೆ ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವು ಮಾಡಿದರು.

ಗಣಂಗೂರು ಕಟ್ಟೆಗೆ ಸೇರಿದ ಸುಮಾರು 20 ಗುಂಟೆಯಷ್ಟು ಜಾಗ ಒತ್ತುವರಿಯಾಗಿತ್ತು. ಇದೇ ಕಟ್ಟೆಗೆ ಹೊಂದಿಕೊಂಡಿರುವ ಸಿದ್ದಾಪುರ ಕೆರೆಯ ಸುಮಾರು 15 ಗುಂಟೆ ಜಾಗ ಕೂಡ ಅತಿಕ್ರಮವಾದ್ದು ಅವುಗಳ ತೆರವು ಮಾಡಿ ಚರಂಡಿ ತೆಗೆಯಲಾಗಿದೆ.

ತಾಲೂಕಿನಲ್ಲಿ ಈಗಾಗಲೇ ಒತ್ತುವರಿಯಾಗಿರುವ ಎಲ್ಲ ಕೆರೆ-ಕಟ್ಟೆಗಳ ಜಾಗದ ಸರ್ವೇ ನಡೆಸಿ ತೆರವು ಕಾರ್ಯಾ ಮಾಡಲಾಗುತ್ತಿದೆ. ಒತ್ತುವರಿಯಾದ ಜಾಗವನ್ನು ಆಯಾ ಗ್ರಾಪಂ ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿಗೊಳಿಸಲಾಗುತ್ತದೆ. ಇದರಲ್ಲಿ ಸಾರ್ವಜನಿಕರು ಕೂಡ ಕೈ ಜೋಡಿಸಬೇಕು ಎಂದು ತಹಸೀಲ್ದಾರ್ ಮನವಿ ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ತಹಸೀಲ್ದಾರ್ ನವೀನ್, ಕಂದಾಯ ಅಧಿಕಾರಿ ಮಂಜುನಾಥ್, ತಾಲೂಕು ಸರ್ವೇಯರ್ ಬಸವರಾಜು, ಸಬ್ಬನಕುಪ್ಪೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾರಾಯಣ್ ಸೇರಿದಂತೆ ಇತರರ ಅಧಿಕಾರಿಗಳು ಇದ್ದರು.ಇಂದು ಕೃಷಿಕರ ಜಾಗೃತಿ ಸಮಾವೇಶ

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ, ಸಂಪೂರ್ಣ ಸಾವಯವ ಕೃಷಿಕರ ಸಂಘ, ಮಳವಳ್ಳಿ ಹಾಗೂ ಆರಿಗ್ರಾಫ್ (ಡಿಎಲ್‌ಟಿ) ಸಂಸ್ಥೆಯ ಸಹಭಾಗಿತ್ವದಲ್ಲಿ ಜು. 14ರಂದು ಬೆಳಗ್ಗೆ 10 ಗಂಟೆಯಿಂದ 1.30ರವರೆಗೆ ನಗರದ ಪಿಇಎಸ್ ಕಾಲೇಜು ಆವರಣದಲ್ಲಿರುವ ಶ್ರೀ ವಿವೇಕಾನಂದ ಸಭಾಂಗಣದಲ್ಲಿ ಕೃಷಿಕರ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಸಾವಯವ ಕೃಷಿಕ ಅನಂತರಾವ್ ಕೆರಗೋಡು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಮಾರಂಭ ಉದ್ಘಾಟಿಸುವರು. ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕೆ. ಅಮರನಾರಾಯಣ ಅಧ್ಯಕ್ಷತೆ ವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕರಾದ ಪಿ. ರವಿಕುಮಾರ್, ಮಧು ಜಿ.ಮಾದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಪಂ ಸಿಇಓ ಶೇಖ್ ತನ್ವೀರ್ ಆಸೀಫ್, ಬೆಳಗಾರರ ಸಂಘದ ಉಪಾಧ್ಯಕ್ಷ ಯು. ಶರಣಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಆರಿಗ್ರಾಫ್ ಮುಖ್ಯಸ್ಥ ಸುಬ್ಬು ಜೋಯಿಸ್, ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜು, ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್. ಮಹೇಶ್‌ಕುಮಾರ್ ವಿಶೇಷ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.ಹ್ಯೂಮಸ್‌ನಿಂದ ತುಂಬಿದ ಪರಿಪೂರ್ಣವಾಗಿ ಪರಿಪಕ್ವವಾದ ಫಲವತ್ತಾದ ಮಣ್ಣು ವ್ಯವಸಾಯದ ಅಡಿಪಾಯ ಕೃಷಿಯ ಮೂಲ ಬುನಾದಿ, ಹ್ಯೂಮಸ್ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಫಲವತ್ತಾದ ಮಣ್ಣಿನಿಂದ ಇಳುವರಿ ಅಧಿಕಗೊಳ್ಳುವುದಲ್ಲದೆ, ಆರೋಗ್ಯಕರ ಆಹಾರೋತ್ಪನ್ನಗಳು ದೊರಕುತ್ತವೆ. ಇಳುವರಿಯನ್ನು ಅಧಿಕಗೊಳಿಸುವುದು ನಮ್ಮ ಮುಖ್ಯಗುರಿಯಾಗಿದೆ. ಭೂಮಿಗೆ ರಸಗೊಬ್ಬರ ಬಳಸದೆ, ರಾಸಾಯನಿಕ ಸಿಂಪಡಣೆ ಮಾಡದೆ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕದೆ ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಈ ನಿಟ್ಟಿನಲ್ಲಿ ರೈತರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ರೈತ ಮುಖಂಡರಾದ ಹನಿಯಂಬಾಡಿ ಸೋಮಶೇಖರ್, ವೆಂಕಟೇಶ್, ಮಂಜು, ದಯಾನಂದ, ಅಂಕನಹಳ್ಳಿ ಸ್ವಾಮಿ, ಮಳವಳ್ಳಿ ಚಿಕ್ಕಣ್ಣ ಗೋಷ್ಠಿಯಲ್ಲಿದ್ದರು.