ಸಾರಾಂಶ
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ಸ್ನಾತಕೋತರ ಕೇಂದ್ರ ನಂದಿಹಳ್ಳಿಯ ಸಮಾಜಕಾರ್ಯ ಅಧ್ಯಯನ ವಿಭಾಗದ ವತಿಯಿಂದ ತಾಲೂಕಿನ ಯರದಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳು ಸಮಾಜಕಾರ್ಯ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಸಂಡೂರು
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ಸ್ನಾತಕೋತರ ಕೇಂದ್ರ ನಂದಿಹಳ್ಳಿಯ ಸಮಾಜಕಾರ್ಯ ಅಧ್ಯಯನ ವಿಭಾಗದ ವತಿಯಿಂದ ತಾಲೂಕಿನ ಯರದಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳು ಸಮಾಜಕಾರ್ಯ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಿತು.ಉಪನ್ಯಾಸಕ ಲಕ್ಷ್ಮಣ್ ತೋಳಿ ಶಿಬಿರದಲ್ಲಿ ಹಮ್ಮಿಕೊಂಡಿದ್ದ ಕೌಟುಂಬಿಕ ತಳಹದಿ ಸಮೀಕ್ಷೆಯ ಫಲಿತಾಂಶವನ್ನು ಮಂಡಿಸಿದರು.
ಸಮಾಜಕಾರ್ಯ ಶಿಬಿರದ ಏಳು ದಿನಗಳ ವರದಿಯನ್ನು ಡಾ. ವಿನಾಯಕ್ ಮಂಡಿಸಿ ಏಳು ದಿನಗಳ ಕಾರ್ಯ ಚಟುವಟಿಕೆಗಳನ್ನು ಸವಿವರವಾಗಿ ವಿವರಿಸಿದರು,ಸಮಾಜ ಕಾರ್ಯ ಅಧ್ಯಯನದ ಸಂಯೋಜಕಿ ಡಾ. ಸುಮಾ ಕೆ.ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ, ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಕೆಲವು ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಗ್ರಾಮದ ಸರ್ವೇಯಲ್ಲಿ ಕಂಡುಬಂದಿರುವ ನೂನ್ಯತೆಗಳಿಗೆ ಪರಿಹಾರ ಒದಗಿಸಲು ಸಮಾಜಕಾರ್ಯ ವಿಭಾಗ ಪ್ರಯತ್ನ ಮಾಡಲಿದೆ. ಪಂಚಾಯತ್ ಸಹಕಾರದಿಂದ ಗ್ರಾಮಗಳಲ್ಲಿ ಶೌಚಾಲಯದ ಕುರಿತು ಹಾಗೂ ಸರ್ಕಾರಗಳ ಆಯುಷ್ಮಾನ್ ಭಾರತ್, ಮಾತೃ ವಂದನಾ ಯೋಜನೆ, ಪ್ರಧಾನಮಂತ್ರಿ ಜೀವನ್‌ಜ್ಯೋತಿ ಭೀಮಾಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಭಿಮಾಯೋಜನೆ ಸೇರಿ ಹಲವು ಯೋಜನೆಗಳ ಅಡಿಯಲ್ಲಿ ಗ್ರಾಮಸ್ಥರ ನೋಂದಣಿ ಹಾಗೂ ಅವುಗಳ ಬಳಕೆಯ ಕುರಿತು ಪ್ರಾತ್ಯಕ್ಷಿತ ಸಭೆಗಳನ್ನು ಮಾಡಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಶಿಬಿರಾರ್ಥಿಗಳು ನೆರವೇರಿಸಿದರು. ಶಿಬಿರದಲ್ಲಿ ಡಾ. ಹನುಮಂತ ಜಿ., ಹನುಮಂತ ಎನ್., ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ಕುಮಾರಸ್ವಾಮಿ, ಉಪಾಧ್ಯಕ್ಷ ನಾಗರಾಜ್, ಉದ್ಯಮಿ ನಾಗೇಶ್ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಕುಮಾರಸ್ವಾಮಿ, ಸರಕಾರಿ ಶಾಲೆಯ ಶಿಕ್ಷಕರಾದ ಮೆಹಬೂಬ್, ಬಸವರಾಜ್ ಹಾಗೂ ಮಂಜುನಾಥ ಉಪಸ್ಥಿತರಿದ್ದರು.