ದುಷ್ಕರ್ಮಿಗಳಿಂದ 1.45 ಲಕ್ಷ ರು.ಮೌಲ್ಯದ ಬಟ್ಟೆ ಕಳವು
KannadaprabhaNewsNetwork | Published : Nov 04 2023, 12:31 AM IST
ದುಷ್ಕರ್ಮಿಗಳಿಂದ 1.45 ಲಕ್ಷ ರು.ಮೌಲ್ಯದ ಬಟ್ಟೆ ಕಳವು
ಸಾರಾಂಶ
ರಾಮನಗರ: ದುಷ್ಕರ್ಮಿಗಳು ಅಂಗಡಿ ಬಾಗಿಲು ಹೊಡೆದು 1.45 ಲಕ್ಷ ರುಪಾಯಿ ಮೌಲ್ಯದ ಬಟ್ಟೆ ಹಾಗೂ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಿರುವ ಘಟನೆ ನಗರದ ಎಚ್.ಡಿ.ದೇವೇಗೌಡ ಕಾಂಪ್ಲೆಕ್ ನಲ್ಲಿ ನಡೆದಿದೆ.
ರಾಮನಗರ: ದುಷ್ಕರ್ಮಿಗಳು ಅಂಗಡಿ ಬಾಗಿಲು ಹೊಡೆದು 1.45 ಲಕ್ಷ ರುಪಾಯಿ ಮೌಲ್ಯದ ಬಟ್ಟೆ ಹಾಗೂ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಿರುವ ಘಟನೆ ನಗರದ ಎಚ್.ಡಿ.ದೇವೇಗೌಡ ಕಾಂಪ್ಲೆಕ್ ನಲ್ಲಿ ನಡೆದಿದೆ. ತಾಲೂಕು ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಎಚ್.ಡಿ.ದೇವೇಗೌಡ ಕಾಂಪ್ಲೆಕ್ಸ್‌ನಲ್ಲಿ ವಿನಯ್ ಕುಮಾರ್ ಅವರಿಗೆ ಸೇರಿದ ತಾಮರ ಫ್ಯಾಶನ್ಸ್ ಎಂಬ ಬಟ್ಟೆ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ರಾತ್ರಿ ಅಂಗಡಿ ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ ಸಿಲ್ಕ್ ಸೀರೆ, ಕುರ್ತಾ ಸೆಟ್, ಡಿವಿಆರ್ ಸೇರಿ ಸುಮಾರು 1.45 ಲಕ್ಷ ರು. ಮೌಲ್ಯದ ವಸ್ತು ಕಳವು ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.