ಸಾರಾಂಶ
ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿಗೆ ಉದ್ಘಾಟನೆಗೆ ಫೆ.29 ಇಲ್ಲವೆ ಮಾರ್ಚ 1ರಂದು ಅಥಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ-ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಅನೇಕ ಸಚಿವರು ಆಗಮಿಸಲಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಅಥಣಿ
ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿಗೆ ಉದ್ಘಾಟನೆಗೆ ಫೆ.29 ಇಲ್ಲವೆ ಮಾರ್ಚ 1ರಂದು ಅಥಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ-ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಅನೇಕ ಸಚಿವರು ಆಗಮಿಸಲಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದರು.ಭಾನುವಾರ ವಾರ್ಡ ನಂ.21 ರಲ್ಲಿ ಅಥಣಿ ಪುರಸಭೆಯ ₹3.21 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಈ ವರ್ಷದ ಬಜೆಟ್‌ನಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಸುಮಾರು ₹1400 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ನನ್ನ ವೈಯಕ್ತಿಕ ಮತ್ತು ಕ್ಷೇತ್ರದ ಜನತೆ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು.
ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಈ ಭಾಗದ ರೈತರ ಬಹು ದಿನದ ಕನಸು ಇಂದು ನನಸಾಗಿದೆ. ಈ ಯೋಜನೆ ಅಧುನಿಕ ತಂತ್ರಜ್ಞಾನ ಒಳಗೊಂಡಿದೆ. ಕೇವಲ ಎರಡು ವರ್ಷದಲ್ಲಿ ಪೂರ್ಣವಾಗುವುದು. ಇದರ ಸಂಗಡ 13 ಕೆರೆ ತುಂಬುವ ಯೋಜನೆ ಒಳಗೊಂಡಿದೆ ಎಂದು ತಿಳಿಸಿದರು.ಅಂದು ಅಥಣಿ ನಗರಕ್ಕೆ ದಿನದ 24 ಗಂಟೆಗಳ ನೀರು ಒದಗಿಸುವ ₹90 ಕೋಟಿ ಯೋಜನೆಗೆ ಮುಖ್ಯ ಮಂತ್ರಿಗಳು ಶಿಲನ್ಯಾಸ ಮಾಡಲಿದ್ದಾರೆ.
ಪುರಸಭೆಯ 27 ವಾರ್ಡಗಳ ಚರಂಡಿ ರಸ್ತೆ ಕಾಮಗಾರಿ, ನೀರಿನ ಪೈಪ ಲೈಗಳ ಒಳಗೊಂಡ ಅನೇಕ ಮೂಲ ಸೌಲಭ್ಯಗಳ ಕಾಮಗಾರಿಯನ್ನು ₹3.21 ಕೋಟಿ ಅನುದಾನ ಬಳಕೆ ಮಾಡಲಾಗುವುದು ಎಂದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಪುರಸಭೆ ಸದಸ್ಯ ಮಿಲಿಂದರಾಜ ಯಳಮೆಲಿ, ರಾವಸಾಬ ಐಹೋಳೆ, ದತ್ತಾ ವಾಸ್ಟರ, ರಾಜಶೇಖರ ಗುಡೋಡಗಿ, ಆಸೀಪ ತಾಂಭೋಳಿ, ಪ್ರಮೋದ ಬಿಳ್ಳೂರ, ಉದಯ ಸೋಳಸಿ, ಸಂತೋಷ ಸಾವಡಕರ ಸೈಯದ ಅಮಿನ್ ಗ್ಪದ್ಯಾಳ, ಕಲ್ಲಪ್ಪ ಮಡ್ಡಿ, ವೆಂಕಟೇಶ ದೆಶಪಾಚಿಡೆ ಮುಂತಾದವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))