ಸಿಎಂ, ಡಿಸಿಎಂಗಳ ಬದಲಾವಣೆ ಹೈಕಮಾಡ್‌ ತೀರ್ಮಾನ: ಸಚಿವ ಮಧು

| Published : Jun 30 2024, 12:46 AM IST

ಸಿಎಂ, ಡಿಸಿಎಂಗಳ ಬದಲಾವಣೆ ಹೈಕಮಾಡ್‌ ತೀರ್ಮಾನ: ಸಚಿವ ಮಧು
Share this Article
  • FB
  • TW
  • Linkdin
  • Email

ಸಾರಾಂಶ

ಬೆಲೆ ಏರಿಕೆ ಕುರಿತು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಪ್ರತಿಭಟನೆ ಮಾಡುವ ನೈತಿಕತೆಯಿಲ್ಲ ಎಂದು ಸಚಿವ ಮಧು ಬಿಜೆಪಿ ವಿರುದ್ಧ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜನ ಸ್ಪಂದನಾ ಕಾರ್ಯಕ್ರಮ ಯಶಸ್ವಿಯಾಗಿದೆ. ಶಿವಮೊಗ್ಗ ಸಿಟಿ ಸಮಸ್ಯೆ ಜಾಸ್ತಿ ಇತ್ತು, ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿದೆ. ಜನರ ಅನೇಕ ಸಮಸ್ಯೆಗಳಿಗೆ ಉತ್ತರ ಸಿಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ಕುರಿತು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಪ್ರತಿಭಟನೆ ಮಾಡುವ ನೈತಿಕತೆ ಇದ್ಯಾ ಎಂದು ಪ್ರಶ್ನಿಸಿದ ಅವರು, ಸಿಎಂ, ಡಿಸಿಎಂ ಬದಲಾವಣೆ ವಿಚಾರದ ಬಗ್ಗೆ ನಾನು ರಿಯಾಕ್ಟ್ ಮಾಡಲ್ಲ. ಹೈ ಕಮಾಂಡ್ ನಿಯಮಗಳನ್ನು ಪಾಲಿಸುತ್ತೇವೆ ಎಂದರು.

ಅನಧಿಕೃತ ಶಾಲೆಗಳು ಇರುವುದು ಗಮನಕ್ಕೆ ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ, ಸೆಪ್ಟಿ ವಿಚಾರದಲ್ಲಿ ಪ್ರತಿವರ್ಷ ರಿನಿವಲ್ ಮಾಡಿಕೊಳ್ಳಬೇಕು. ವಿದ್ಯುತ್, ನೀರು ಶಾಲೆಗಳಿಗೆ ಉಚಿತ ನೀಡಿದ್ದೇವೆ ಎಂದರು.

ಡಿಸಿಸಿ ಬ್ಯಾಂಕ್ ಚುನಾವಣೆ ಒಗ್ಗಟಿನಿಂದ ಮಾಡಿದ್ದು, 11 ಸ್ಥಾನ ಗೆದ್ದಿದ್ದಾರೆ. ಸಹಕಾರಿ ಬ್ಯಾಂಕ್ ಜನರಿಗೆ ಸಹಕಾರ ಮಾಡಲಿ. ಡಿಸಿಸಿ ಬ್ಯಾಂಕ್ ನೇಮಕಾತಿ ಹಗರಣ ನಡೆದಿದ್ದರೆ ಸರ್ಕಾರ ತನಿಖೆ ಮಾಡುತ್ತದೆ ಎಂದು ಹೇಳಿದರು.

ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದ ಸಾವಿನ ಬಗ್ಗೆ ಬಹಳ ನೋವಾಗಿದೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ. ಅಲ್ಲದೇ, ನಮ್ಮ ಕಡೆಯಿಂದ ಆಗುವ ಸಹಕಾರ ಮಾಡುತ್ತೇವೆ. ಪರಿಹಾರ ಜಾಸ್ತಿ ಮಾಡುವ ಕುರಿತು ಮಾತಾಡುತ್ತೇವೆ. ಕುಟುಂಬದ ಪರವಾಗಿ ಸರ್ಕಾರ ಇರುತ್ತೆ ಎಂದರು.