ಮಂಗಳೂರಿಗೆ ರಾಜೀವ್‌ ಗಾಂಧಿ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ: 17ರಂದು ಸಿಎಂ ಶಂಕುಸ್ಥಾಪನೆ

| Published : Jan 15 2025, 12:47 AM IST

ಮಂಗಳೂರಿಗೆ ರಾಜೀವ್‌ ಗಾಂಧಿ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ: 17ರಂದು ಸಿಎಂ ಶಂಕುಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಲಾನ್ಯಾಸದ ಪೂರ್ವಭಾವಿಯಾಗಿ ಸಿಂಡಿಕೇಟ್ ಸಭೆ ಮತ್ತು ಸೆನೆಟ್‌ ವಾರ್ಷಿಕ ಸಭೆ ಜ.16ರಂದು ಮಧ್ಯಾಹ್ನ 2:30ಕ್ಕೆ ನಗರದ ಗೋಲ್ಡ್ ಫಿಂಚ್‌ನಲ್ಲಿ ಆಯೋಜಿಸಲಾಗಿದೆ ಎಂದವರು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಮಂಗಳೂರು ಪ್ರಾದೇಶಿಕ ಕೇಂದ್ರ ಕಚೇರಿ ಕಟ್ಟಡ ಸ್ಥಾಪನೆಗೆ ಜ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಅಲೈಡ್ ಮತ್ತು ಆರೋಗ್ಯ ರಕ್ಷಣಾ ಮಂಡಳಿ ಅಧ್ಯಕ್ಷ ಡಾ.ಯು.ಟಿ. ಇಫಿಕಾರ್ ಅಲಿ, ಕರಾವಳಿಯಲ್ಲಿ ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆ ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ ನಗರದ ಮೇರಿಹಿಲ್‌ನ ಅಬಕಾರಿ ಇಲಾಖೆ ಕಟ್ಟಡದ ಪಕ್ಕದಲ್ಲಿ ಆರ್‌ಜಿಯುಎಚ್ಎಸ್‌ನ ಹೊಸ ಪ್ರಾದೇಶಿಕ ಕೇಂದ್ರ ಆರಂಭವಾಗಲಿದೆ ಎಂದರು.

ಆರ್‌ಜಿಯುಎಚ್‌ಎಸ್‌ ಸೆನೆಟ್‌ ಸದಸ್ಯ ಡಾ.ಶಿವಶರಣ್ ಶೆಟ್ಟಿ ಮಾತನಾಡಿ, ಜ.17ರಂದು ಮೇರಿ ಹಿಲ್ ನಲ್ಲಿ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಆರ್‌ಜಿಯುಎಚ್ಎಸ್ ಸಹ ಕುಲಪತಿ ಡಾ.ಶರಣ್ ಪ್ರಕಾಶ್ ಪಾಟೀಲ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಾ.ಭರತ್‌ ಶೆಟ್ಟಿ, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಸ್ಸಿನ್, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ.ತ್ರಿವೇಣಿ, ಆರ್‌ಜಿಯುಎಚ್ಎಸ್‌ನ ಉಪ ಕುಲಪತಿ ಡಾ.ಎಂ.ಕೆ. ರಮೇಶ್ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಶಿಲಾನ್ಯಾಸದ ಪೂರ್ವಭಾವಿಯಾಗಿ ಸಿಂಡಿಕೇಟ್ ಸಭೆ ಮತ್ತು ಸೆನೆಟ್‌ ವಾರ್ಷಿಕ ಸಭೆ ಜ.16ರಂದು ಮಧ್ಯಾಹ್ನ 2:30ಕ್ಕೆ ನಗರದ ಗೋಲ್ಡ್ ಫಿಂಚ್‌ನಲ್ಲಿ ಆಯೋಜಿಸಲಾಗಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆರ್‌ಜಿಯುಎಚ್ಎಸ್‌ನ ಸೆನೆಟ್ ಸದಸ್ಯರಾದ ಪ್ರೊ. ವೈಶಾಲಿ ಶ್ರೀಜಿತ್, ಡಾ. ಸಲೀಮುಲ್ಲಾ ಡಾ. ಚರಿಷ್ಮಾ ಡಿಸಿಲ್ವ, ಡಾ.ಮುಹಮ್ಮದ್ ಸುಹೈಲ್ ಇದ್ದರು.