ಮುಡಾ ಹಗರದಲ್ಲಿ ಭಂಡತನ ತೋರುತ್ತಿರುವ ಸಿಎಂ: ಶಾಸಕ ಅರವಿಂದ ಬೆಲ್ಲದ

| Published : Jan 20 2025, 01:31 AM IST

ಮುಡಾ ಹಗರದಲ್ಲಿ ಭಂಡತನ ತೋರುತ್ತಿರುವ ಸಿಎಂ: ಶಾಸಕ ಅರವಿಂದ ಬೆಲ್ಲದ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಭಂಡತನ ತೋರಿದ್ದಾರೆ. ರಾಜ್ಯಪಾಲರು ಮುಡಾ ಪ್ರಕರಣವನ್ನು ಪ್ರಾಸಿಕ್ಯೂಷನ್​ಗೆ ಕೊಟ್ಟಾಗ ಬಂಧನ ಆಗುವವರೆಗೂ ಮುಖ್ಯಮಂತ್ರಿಗಳು ಕಾಯಬಾರದು. ಕೂಡಲೇ ರಾಜೀನಾಮೆ ಕೊಟ್ಟು ಕೆಳಗಿಳಿಯಬೇಕು ಎಂಬುದು ಜನರ ಅಪೇಕ್ಷೆಯಾಗಿತ್ತು.

ಧಾರವಾಡ:

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಭಾಗಿಯಾಗಿದೆ ಎಂಬುದು ಜಗತ್ತಿಗೇ ಗೊತ್ತು. ಸೂಕ್ಷ್ಮತೆ ಇದ್ದ ಮುಖ್ಯಮಂತ್ರಿ ಆಗಿದ್ದರೆ ಇಷ್ಟು ಹೊತ್ತಿಗೆ ರಾಜೀನಾಮೆ ನೀಡುತ್ತಿದ್ದರು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಭಂಡತನ ತೋರಿದ್ದಾರೆ. ರಾಜ್ಯಪಾಲರು ಮುಡಾ ಪ್ರಕರಣವನ್ನು ಪ್ರಾಸಿಕ್ಯೂಷನ್​ಗೆ ಕೊಟ್ಟಾಗ ಬಂಧನ ಆಗುವವರೆಗೂ ಮುಖ್ಯಮಂತ್ರಿ ಕಾಯಬಾರದು. ಕೂಡಲೇ ರಾಜೀನಾಮೆ ಕೊಟ್ಟು ಕೆಳಗಿಳಿಯಬೇಕು ಎಂಬುದು ಜನರ ಅಪೇಕ್ಷೆಯಾಗಿತ್ತು. ಈ ಪ್ರಕರಣವನ್ನು ಯಾವುದೇ ಕೈವಾಡವಿಲ್ಲದೆ ತನಿಖೆ ನಡೆಸಬೇಕು. ಇದಕ್ಕಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಇರಬಾರದು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಸಿಎಂ ಭಂಡತನ ತೋರುತ್ತಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಬೆಲ್ಲದ, ರಾಜ್ಯಾಧ್ಯಕ್ಷರ ನೇಮಕವನ್ನು ಹೈಕಮಾಂಡ್​ ನಿರ್ಧಾರ ಮಾಡಲಿದೆ. ಹೈಕಮಾಂಡ್​ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ನೋಡೋಣ. ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.