ಸಾರಾಂಶ
ಆಶ್ರಯ ಯೋಜನೆಯಡಿ ಮನೆಗಳನ್ನು ಬಡವರಿಗೆ ಹಂಚುವ ಬದಲು ಅವರಿಂದ ಲಂಚ ಪಡೆದಿರುವುದು ಸಾಬೀತಾಗಿದೆ. ಕೂಡಲೇ ಮುಖ್ಯಮಂತ್ರಿ ಸೇರಿದಂತೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಆಗ್ರಹಿಸಿದರು.
ವಿಜಯಪುರ : ಆಶ್ರಯ ಯೋಜನೆಯಡಿ ಮನೆಗಳನ್ನು ಬಡವರಿಗೆ ಹಂಚುವ ಬದಲು ಅವರಿಂದ ಲಂಚ ಪಡೆದಿರುವುದು ಶಾಸಕ ಬಿ.ಆರ್.ಪಾಟೀಲ ಅವರು ದೂರವಾಣಿಯಲ್ಲಿ ವಸತಿ ಸಚಿವ ಜಮೀರ ಅಹ್ಮದಖಾನ್ ಅವರ ಸಹಾಯಕರ ಮಾತನಾಡಿರುವುದರಿಂದ ಸಾಬೀತಾಗಿದೆ. ಕೂಡಲೇ ಮುಖ್ಯಮಂತ್ರಿ ಸೇರಿದಂತೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಭಾನುವಾರ ನಗರದ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಅವರು 2012 ರಲ್ಲಿ ಬಿಜೆಪಿ ಸರ್ಕಾರ ಆಡಳಿತವಿದ್ದಾಗ ಅಂದಿನ ವಸತಿ ಸಚಿವರಾದ ವಿ.ಸೋಮಣ್ಣ ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ೧೦ ರಿಂದ ೩೦ ಸಾವಿರ ಮನೆಗಳನ್ನು ನೀಡುವ ಮೂಲಕ ದಾಖಲೆ ನಿರ್ಮಿಸಿದ್ದರು. ನಾಗಠಾಣ ಹಾಗೂ ಸಿಂದಗಿ ತಾಲೂಕಿನ ರಾಂಪೂರ ಗ್ರಾಪಂನಲ್ಲಿ ಬಡವರಿಗೆ ಮನೆ ನೀಡಲು ಲಂಚದ ಆರೋಪ ಕೇಳಿ ಬಂದಿದ್ದು, ಲಂಚ ನೀಡಬಾರದು ಎಂದು ಮನವಿ ಮಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ವಸತಿ ಇಲಾಖೆಯಲ್ಲಿ ಬಡವರಿಗೆ ಮನೆಗಳನ್ನು ನೀಡಲು ಲಂಚ ನೀಡಬೇಕು ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ ಅವರ ಹೇಳಿಕೆ ನೀಡಿದ್ದಾರೆ.
ಮನೆಗಳು ಶ್ರೀಮಂತರಿಗೆ ಸಿಗುತ್ತವೆ ಹೊರತು ಬಡವರಿಗಲ್ಲ. ಆದ್ದರಿಂದ ಕಾಂಗ್ರೆಸ್ ಅಧಿಕಾರದಿಂದ ತೊಲಗಬೇಕು ಎಂದು ಆಕ್ರೊಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿ.ಪ. ಮಾಜಿ ಸದಸ್ಯ ಅರುಣ್ ಶಹಾಪುರ, ನಾಗಠಾಣ ಮತಕ್ಷೇತ್ರದ ಮುಖಂಡರಾದ ಉಮೇಶ್ ಕಾರಜೋಳ, ಮಹೇಂದ್ರ ನಾಯಕ್, ಚಂದ್ರಶೇಖರ ಕವಟಗಿ, ಪಾಪುಸಿಂಗ್ ರಾಜಪೂತ, ಗೋಪಾಲ್ ಘಟಕಾಂಬಳೆ, ಸುರೇಶ ಬಿರಾದಾರ್, ಮುಳುಗೌಡ ಪಾಟೀಲ, ಈರಣ್ಣ ರಾವೂರ, ಭೀಮಾಶಂಕರ್ ಹದನೂರ, ಬಾಬು ಚವ್ಹಾಣ, ಚಿದಾನಂದ ಚಲವಾದಿ, ಸಂಜಯ ಕನಮಡಿ, ಪ್ರಮೋದ್ ಬಡಿಗೇರ್, ಎಂ.ಎಸ್.ಕರಡಿ, ಎಸ್.ಈ.ಪಾಟೀಲ, ಬಾಬು ಚವಾಣ್ ಮುಂತಾದವರು ಭಾಗವಹಿಸಿದ್ದರು.