ಭಕ್ತರು ಮತ್ತು ಭಗವಂತ ಸಂಬಂಧ ಬೆಳಸುವ ಸ್ಥಳ ದೇವಸ್ಥಾನ ಅದಕ್ಕೆ ಎಲ್ಲಾ ಭಕ್ತಾಧಿಗಳು ಗಂಟೆಗಟ್ಟಲೆ ಕಾಯ್ದುಕೊಂಡು ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ಧೇಶ್ವರಸ್ವಾಮಿ ದರ್ಶನ ಪಡೆಯುತ್ತಾರೆ ಎಂದು ತಿಳಿಸಿದರು. ನಾನು ನನ್ನದೇ ಎಂಬುದು ಅಧರ್ಮ ನಾವು, ನಮ್ಮದು ಎನ್ನುವುದು ಧರ್ಮ ಎಂದು ಹೇಳಿದವರು ನಿಮಗಾಗಿ ಬದುಕುವುದು ಕೇವಲ ಜೀವನ ಜನರಿಗಾಗಿ ಜನರಿಗೋಸ್ಕರ ಬದುಕುವುದು ಬಹಳ ಶ್ರೇಷ್ಟವಾದ ಧರ್ಮ ಎಂದರು. ರಾಜ್ಯದ ಜನತೆಗೆ ಸುಖ, ಶಾಂತಿ, ನೆಮ್ಮದಿ ದೊರೆಯಲೆಂದು ಹಾಸನಾಂಬಾ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನರಾಜ್ಯದ ಜನತೆಗೆ ಸುಖ, ಶಾಂತಿ, ನೆಮ್ಮದಿ ದೊರೆಯಲೆಂದು ಹಾಸನಾಂಬಾ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ತಿಳಿಸಿದ್ದಾರೆ.ಹಾಸನಾಂಬಾ ಜಾತ್ರಾ ಮಹೋತ್ಸವದ ಹಿನ್ನಲೆ ಯಲ್ಲಿ ಮಹಾನಗರ ಪಾಲಿಕೆಯ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ, ವಾಲಿಬಾಲ್ ಪಂದ್ಯಾವಳಿ, ಫಲಪುಷ್ಪ ಪ್ರದರ್ಶನ ಹಾಗೂ ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಸನಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಈ ಬಾರಿ ಹೊಸದಾಗಿ ಪಂದ್ಯಾವಳಿಗಳನ್ನು ಏರ್ಪಡಿಸಿದ್ದಾರೆ ಎಂದರು.

ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ, ಪೂಜೆ ಮತ್ತು ಭಕ್ತಿ ಪ್ರದರ್ಶನಕೋಸ್ಕ ಅಲ್ಲ, ಮನುಷ್ಯರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಇರುವಂತಹ ಒಂದು ದಾರಿಗಳು ಎಂದು ಹೇಳಿದರು.ಭಕ್ತರು ಮತ್ತು ಭಗವಂತ ಸಂಬಂಧ ಬೆಳಸುವ ಸ್ಥಳ ದೇವಸ್ಥಾನ ಅದಕ್ಕೆ ಎಲ್ಲಾ ಭಕ್ತಾಧಿಗಳು ಗಂಟೆಗಟ್ಟಲೆ ಕಾಯ್ದುಕೊಂಡು ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ಧೇಶ್ವರಸ್ವಾಮಿ ದರ್ಶನ ಪಡೆಯುತ್ತಾರೆ ಎಂದು ತಿಳಿಸಿದರು.

ನಾನು ನನ್ನದೇ ಎಂಬುದು ಅಧರ್ಮ ನಾವು, ನಮ್ಮದು ಎನ್ನುವುದು ಧರ್ಮ ಎಂದು ಹೇಳಿದವರು ನಿಮಗಾಗಿ ಬದುಕುವುದು ಕೇವಲ ಜೀವನ ಜನರಿಗಾಗಿ ಜನರಿಗೋಸ್ಕರ ಬದುಕುವುದು ಬಹಳ ಶ್ರೇಷ್ಟವಾದ ಧರ್ಮ ಎಂದರು. ಸ್ಕೌಟ್ಸ್‌ ಅಂಡ್ ಗೈಡ್ಸ್ ಮಕ್ಕಳು ತುಂಬಾ ಶಿಸ್ತಿನಿಂದ ಶ್ರೀ ಹಾಸನಂಬಾ ದೇವಿ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು. ನ್ಯಾಯ ನೀತಿಯಿಂದ ಪ್ರಜಾಸೇವೆ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸೋಣ ಮಾನವೀಯತೆ ಮತ್ತು ಧರ್ಮವನ್ನು ಎರಡು ಸಹ ಸಮವಾಗಿರಬೇಕು. ಈ ಭೂಮಿಯಲ್ಲಿ ಸೈನಿಕ, ಶಿಕ್ಷಕ, ಕಾರ್ಮಿಕ ಹಾಗೂ ಕೃಷಿಕ ಈ ನಾಲ್ಕು ಜನ ನಮ್ಮ ಸಮಾಜದ ಆಧಾರ ಸ್ತಂಭಗಳು ಎಂದು ತಿಳಿಸಿದರು. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾಯಾಂಗ, ನ್ಯಾಯಾಂಗ, ಪತ್ರಿಕಾರಂಗ ಮುಖ್ಯವಾಗಿದ್ದು, ಶಾಸಕಾಂಗದ ಮತ್ತು ಕಾಯಾಂಗ ತಪ್ಪುಗಳನ್ನು ತಿದ್ದುವ ಕೆಲಸದಲ್ಲಿ ನ್ಯಾಯಾಂಗ, ಪತ್ರಿಕಾರಂಗ ಪ್ರಮುಖ ಪಾತ್ರವಹಿಸುತ್ತದೆ, ಧಾರ್ಮಿಕತೆಯನ್ನು ಉಳಿಸಿಕೊಂಡು ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ ಎಂದರು. ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ ಶಿವಲಿಂಗೇಗೌಡ ಅವರು ಮಾತನಾಡಿ, ೫೦ ವರ್ಷದ ಹಿಂದಿನಿದಲೂ ಮಹಾನಗರ ಪಾಲಿಕೆ ಆವರಣದಲ್ಲಿ ಎಕ್ಸಿಬಿಷನ್ ನಡೆಯುತ್ತಿತ್ತು. ಮಹಾನಗರ ಪಾಲಿಕೆಯವರು ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಲು ಬಳಸುತ್ತಿದ್ದ ಜಾಗವನ್ನು ೮ ದಿನಗಳಲ್ಲಿ ತೆರವುಗೊಳಿಸಿ ಹಾಸನಾಂಬಾ ಕ್ರೀಡೋತ್ಸವಕ್ಕೆ ಬಳಸಿಕೊಳ್ಳಲಾಗಿದೆ ಎಂದರು. ರಂಗೋಲಿ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ಜಾನುವಾರುಗಳ ಪ್ರದರ್ಶನ, ವಾಲಿಬಾಲ್, ಕಬಡ್ಡಿ ಪಂದ್ಯಾವಳಿ, ಪಾಕಸ್ಪರ್ಧೆ, ಫಲ ಪುಷ್ಪ ಪ್ರದರ್ಶನ, ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ಹೀಗೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದವರೆಲ್ಲರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು ಎಂದು ತಿಳಿಸಿದರು. ಸಂಸದರಾದ ಶ್ರೇಯಸ್ ಎಂ ಪಟೇಲ್, ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಜೇಗೌಡ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೃಷ್ಣಮೂರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ರಂಜಿತ್ ಕುಮಾರ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಪ್ಪ ಪಟೇಲ್, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲ, ಹಾಸನಾಂಬಾ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಮತ್ತಿತರರು ಇದ್ದರು.