ದೀರ್ಘಾವಧಿ ಕಾಲ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿ, ಇತಿಹಾಸ ನಿರ್ಮಿಸಿರುವ ನಮ್ಮ ಸಿಎಂ ಸಿದ್ದರಾಮಯ್ಯನವರು ಕಾಲಗರ್ಭದ ರಾಜಕೀಯ ಕಲಿಯಾಗಿ ಮನುಷ್ಯನ ಸಭಲೀಕರಣಕ್ಕಾಗಿ ಶ್ರಮಿಸಿದ ಅಪ್ರತಿಮ ಶಕ್ತಿ ಎಂದು ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಹೇಳಿದರು.
ಶಿಗ್ಗಾಂವಿ: ದೀರ್ಘಾವಧಿ ಕಾಲ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿ, ಇತಿಹಾಸ ನಿರ್ಮಿಸಿರುವ ನಮ್ಮ ಸಿಎಂ ಸಿದ್ದರಾಮಯ್ಯನವರು ಕಾಲಗರ್ಭದ ರಾಜಕೀಯ ಕಲಿಯಾಗಿ ಮನುಷ್ಯನ ಸಭಲೀಕರಣಕ್ಕಾಗಿ ಶ್ರಮಿಸಿದ ಅಪ್ರತಿಮ ಶಕ್ತಿ ಎಂದು ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಹೇಳಿದರು.ಪಟ್ಟಣದ ಕಿತ್ತೂರಾಣಿ ಚನ್ನಮ್ಮ ಸರ್ಕಲ್‌ನಲ್ಲಿ ಅವರ ಅಭಿಮಾನಿಗಳೊಂದಿಗೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಮೇಲಿನ ಪ್ರೀತಿ, ನ್ಯಾಯದ ಬದ್ಧತೆಯಿಂದ ಆಡಳಿತ ನೀಡಿ ಜನಮನ್ನಣೆ ಗಳಿಸಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಚಿಂತಕರಾಗಿರುವ ಅವರು, ಸಾಮಾಜಿಕ ನ್ಯಾಯದ ಮೂಲಕ ಸಾಮ್ಯತೆ ಕಾಯ್ದುಕೊಂಡಿದ್ದಾರೆ ಎಂದರು.ಕನ್ನಡ ಅಸ್ಮಿತೆಯ ಹಿತರಕ್ಷಕರಾಗಿ ಆರ್ಥಿಕ ಶಿಸ್ತು ವಿಚಾರದಲ್ಲಿ ತೋರಿರುವ ಶಕ್ತಿ ಬಹಳಷ್ಟು ಅಪರೂಪದ್ದು, ಅವರ ಪ್ರತಿಭಾರಿಯೂ ಆಡಳಿತದ ಹೊಸತನದೊಂದಿಗೆ ಜನರ ಮುಂದೆ ಬರುತ್ತಾರೆ, ಅವರೋಬ್ಬ ಕ್ರಾಂತಿಕಾರಿ ಯೋಜನೆಗಳ ಜನಕರಾಗಿದ್ದಾರೆ. ರಾಜ್ಯವನ್ನು ಅತಿ ದೀರ್ಘಾವಧಿ ಕಾಲದವರಗೆ ಸಮರ್ಥವಾಗಿ ಮುನ್ನಡೆಸಿದ ಅವರು ಈ ದಾಖಲೆ ಮಾಡುವ ದಿನವೇ ನಮ್ಮ ಜಿಲ್ಲೆಗೆ ಆಗಮಿಸಿದ್ದು, ನನಗೆ ವಯಕ್ತಿಕವಾಗಿ ಮತ್ತಷ್ಟು ಉತ್ಸಾಹವನ್ನು ನೀಡಿದೆ. ಅವರ ಮಾರ್ಗದರ್ಶನದಲ್ಲಿ ನಮ್ಮ ಹೆಸ್ಕಾಂ ಇಲಾಖೆ ರಾಜ್ಯದ ಜನರ ಸೇವೆ ಮಾಡುತ್ತಿದೆ. ಶೋಷಿತರ ಧ್ವನಿ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾದ ಅವರು ನುಡಿದಂತೆ ನಡೆದವರಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಅಂದರೆ ೧೬ ಬಜೆಟ್ ಮಂಡಿಸಿರುವ ಅಪ್ರತಿಮ ದಾಖಲೆ ಅವರದ್ದಾಗಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ ಮಣ್ಣಣ್ಣವರ, ಅಣ್ಣಪ್ಪ ನಡಟ್ಟಿ, ರವಿಕಾಂತ ಕೋಣಪ್ಪನವರ, ಬಾಬಾ ಹುಸೇನ್ ಗೌಡಗೇರಿ, ಇಸ್ಮಾಯಿಲ್ ಅಕ್ಕಿ, ಅರ್ಜುನ ಕಟಗಿ, ವಿಠಲ್ ಜೀವಾಜಿ, ಮಹಾಂತೇಶ ಕೊಂಡಾಯಿ, ರಹೀಮ್ ಮಲ್ಲೂರ ಸೇರಿದಂತೆ ಅಭಿಮಾನಿಗಳು ಇದ್ದರು.