ಸಿಎಂ ಸಿದ್ದರಾಮಯ್ಯ 5 ವರ್ಷ ಅವಧಿ ಪೂರ್ಣಗೊಳಿಸುತ್ತಾರೆ: ಯತೀಂದ್ರ

| Published : Nov 23 2025, 02:45 AM IST

ಸಿಎಂ ಸಿದ್ದರಾಮಯ್ಯ 5 ವರ್ಷ ಅವಧಿ ಪೂರ್ಣಗೊಳಿಸುತ್ತಾರೆ: ಯತೀಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯನವರು ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹೀಗಾಗಿ ಅಹಿಂದ ಸಮುದಾಯ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಮುಂದೆಯೂ ನಿಲ್ಲಬೇಕು ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನರಗುಂದ: ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಪಟ್ಟಣದ ಮಾರ್ಕಂಡೇಯ ಹಾಲ್‌ನಲ್ಲಿ ಕನಕದಾಸ ಕುರುಬರ ಕಲ್ಯಾಣ ಸಮಿತಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಸಹಯೋಗದಲ್ಲಿ ಜರುಗಿದ ಕನಕದಾಸರ 538ನೇ ಜಯಂತ್ಯುತ್ಸವ, ₹2 ಕೋಟಿ ಅನುದಾನದ ಕನಕ ಭವನ ಕಟ್ಟಡದ ಅಡುಗೆ ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸಿಎಂ ಸಿದ್ದರಾಮಯ್ಯನವರು ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹೀಗಾಗಿ ಅಹಿಂದ ಸಮುದಾಯ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಮುಂದೆಯೂ ನಿಲ್ಲಬೇಕು ಎಂದರು.ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಕನಕ ಭವನದ ಅವಶ್ಯಕತೆ ಇತ್ತು. ಸಮಾಜದವರು ತಮ್ಮ ಶಕ್ತ್ಯಾನುಸಾರ ಕನಕ ಭವನಕ್ಕೆ ಸಹಾಯ ಮಾಡಬೇಕು. ಶಾಸಕರ ನಿಧಿಯಿಂದ ₹10 ಲಕ್ಷ ಅನುದಾನ ನೀಡುತ್ತೇನೆ. ತಾಲೂಕಿನಲ್ಲಿ ಕನಕ ಭವನ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಭವನ ಬೇಗ ನಿರ್ಮಾಣವಾಗಲಿ. ಎರಡು ಕಟ್ಟಡಗಳ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಗಮಿಸಬೇಕೆಂದು ಆಶಯ ವ್ಯಕ್ತಪಡಿಸಿದರು.ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಮಾತನಾಡಿ, ನಾನು ಶಾಸಕನಿದ್ದಾಗ 2007ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ವೇಳೆ ನರಗುಂದದ ಕನಕ ಭವನ ನಿರ್ಮಾಣದ ಅಡಿಗಲ್ಲು ಸಮಾರಂಭ ನಡೆದಿತ್ತು. ಆದರೆ ಆ ಜಾಗದ ವ್ಯಾಜ್ಯವಿದ್ದ ಪರಿಣಾಮ ಭವನ ನಿರ್ಮಾಣವಾಗಲಿಲ್ಲ ಎಂದರು.ಸಮಾರಂಭದಲ್ಲಿ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಶಶಿಧರ ರೊಳ್ಳಿ ಮಾತನಾಡಿದರು. ಸಮಾರಂಭದಲ್ಲಿ ಲಕನಾಯನಕೊಪ್ಪ ಪೂರ್ಣಾನಂದ ಮಠದ ಸದ್ಗುರು ಕೃಷ್ಣಾನಂದ ಶ್ರೀಗಳು, ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ, ಸಮಾಜದ ಅಧ್ಯಕ್ಷ ಫಕೀರಪ್ಪ ಸವದತ್ತಿ, ಕುರುಬರ ಸಂಘದ ತಾಲೂಕು ಅಧ್ಯಕ್ಷ ನೀಲಪ್ಪ ಗುಡದಣ್ಣವರ, ಡಾ. ಎಸ್.ಎಚ್. ಹುರಳಿ, ಶಶಿಧರ ರೊಳ್ಳಿ, ಎಸ್.ಬಿ. ದಂಡಿನ, ಪ್ರಕಾಶ ಕರಿ, ಉಮೇಶಗೌಡ ಪಾಟೀಲ, ಚಂದ್ರು ದಂಡಿನ, ಪ್ರವೀಣ ಯಾವಗಲ್ಲ, ದ್ಯಾಮಣ್ಣ‌ ಕಾಡಪ್ಪನವರ, ರೇಣುಕಾ ಅವರಾದಿ, ದ್ಯಾಮಣ್ಣ ಸವದತ್ತಿ, ರಾಜು ಹುರಳಿ, ಬೀರಪ್ಪ ದುಂಡಿ, ರಮೇಶ ನಾಯ್ಕರ, ಅನೀಲ ಧರಿಯಣ್ಣವರ, ಮಂಜು ಮೆಣಸಗಿ ಇತರರಿದ್ದರು. ಎಸ್.ಐ. ಅಂಕಲಿ ನಿರೂಪಿಸಿ, ವಂದಿಸಿದರು.