ಸಿಎಂ, ಕುರುಬ ಸಮಾಜ ನಿಂದಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

| Published : Aug 13 2025, 12:30 AM IST

ಸಿಎಂ, ಕುರುಬ ಸಮಾಜ ನಿಂದಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆ ಬಸರಾಳು ಗ್ರಾಮದ ಬಿ.ಎನ್. ಕುಮಾರ ಹಾಗೂ ಶಾನುಭೋಗನಹಳ್ಳಿಯ ಮಹೇಶ ಎಂಬವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರುಬ ಜಾತಿಯವರಾಗಿರುವುದರಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಸಾರ್ವಜನಿಕವಾಗಿ ನಿಂದನಾತ್ಮಕವಾಗಿ ಮಾತನಾಡಿದ್ದಾರೆ.

ರಾಣಿಬೆನ್ನೂರು: ಸಾರ್ವಜನಿಕವಾಗಿ ಕುರುಬ ಸಮಾಜದ ಜಾತಿ ಕುರಿತು ಅವಹೇಳನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಲು ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲೂಕು ಪ್ರದೇಶ ಕುರುಬರ ಸಂಘದ ವತಿಯಿಂದ ಮಂಗಳವಾರ ಡಿವೈಎಸ್‌ಪಿ ಲೋಕೇಶ ಅವರಿಗೆ ಮನವಿ ಸಲ್ಲಿಸಲಾಯಿತು. ಮಂಡ್ಯ ಜಿಲ್ಲೆ ಬಸರಾಳು ಗ್ರಾಮದ ಬಿ.ಎನ್. ಕುಮಾರ ಹಾಗೂ ಶಾನುಭೋಗನಹಳ್ಳಿಯ ಮಹೇಶ ಎಂಬವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರುಬ ಜಾತಿಯವರಾಗಿರುವುದರಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಸಾರ್ವಜನಿಕವಾಗಿ ನಿಂದನಾತ್ಮಕವಾಗಿ ಮಾತನಾಡಿದ್ದಾರೆ.

ಇದಲ್ಲದೆ ಕುರುಬ ಜಾತಿ ಕುರಿತು ಕೀಳು ರೀತಿಯ ಹೇಳಿಕೆಗಳನ್ನು ನೀಡಿದ್ದಲ್ಲದೆ ಇದನ್ನೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆ ಮೂಲಕ ಜಾತಿ ಜಾತಿಗಳ ನಡುವೆ ದ್ವೇಷ ಹುಟ್ಟು ಹಾಕಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಪ್ರಯತ್ನಿಸಿದ್ದಾರೆ. ಆದ್ದರಿಂದ ಇವರನ್ನು ಬಂಧಿಸಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ತಾಲೂಕು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಪ್ಪ ಕರಡೇಣ್ಣನವರ, ಮೃತ್ಯುಂಜಯ ಗುದಿಗೇರ, ಬಸವರಾಜ ಕಂಬಳಿ, ಸಿದ್ದಪ್ಪ ದೇವರಗುಡ್ಡ, ಹನುಮಂತಪ್ಪ ಮುಳಗುಂದ, ಮಾಳಪ್ಪ ಪೂಜಾರ, ಬಾಬು ಕಂಬಳಿ, ಕುಬೇರ ಕೊಂಡಜ್ಜಿ, ಮಂಜಣ್ಣ ನಾಗೇನಹಳ್ಳಿ, ಕಿರಣ ಗುಳೇದ ಮತ್ತಿತರರಿದ್ದರು.ಜೋಳ ಖರೀದಿಸಿದ ಮೊತ್ತ ರೈತರ ಖಾತೆಗೆ ಜಮೆ

ಹಾವೇರಿ: 2024- 25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 578 ರೈತರಿಂದ ಬಿಳಿಜೋಳ ಮತ್ತು ಹೈಬ್ರಿಡ್ ಜೋಳವನ್ನು ಖರೀದಿಸಲಾಗಿತ್ತು.

ಖರೀದಿಸಿದ ಬಿಳಿಜೋಳ ಮತ್ತು ಹೈಬ್ರಿಡ್ ಜೋಳದ ಮೊತ್ತವನ್ನು ಸಂಬಂಧಿಸಿದ ರೈತರ ಆಧಾರ ಜೋಡಣೆಗೊಂಡಿರುವ ಖಾತೆಗೆ ಜಮಾ ಮಾಡಲಾಗಿದೆ. ರೈತರು ತಮ್ಮ ಖಾತೆಗೆ ಹಣ ಜಮಾ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.