ಶಿಕ್ಷಕರಿಗೆ ದೈನಂದಿನ ಪಾಠ- ಪ್ರವಚನಗಳ ಒತ್ತಡ ದೂರ ಮಾಡಲು ಸಹ ಪಠ್ಯ ಚಟುವಟಿಕೆ ಸ್ಪರ್ಧೆಗಳು ಉತ್ತಮ ವೇದಿಕೆಯಾಗಿದೆ.
ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ 2025- 26ನೇ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳು ಸಮೀಪದ ದೊಡ್ಡೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದವು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯ್ಕ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ದೈನಂದಿನ ಪಾಠ- ಪ್ರವಚನಗಳ ಒತ್ತಡ ದೂರ ಮಾಡಲು ಸಹ ಪಠ್ಯ ಚಟುವಟಿಕೆ ಸ್ಪರ್ಧೆಗಳು ಉತ್ತಮ ವೇದಿಕೆ ಎಂದರು.ಕಾರ್ಯಕ್ರಮದ ನೋಡಲ್ ಅಧಿಕಾರಿ, ಪ್ರೌಢ ವಿಭಾಗದ ಇಸಿಒ ರಾಘವೇಂದ್ರ ಜೋಶಿ ಮಾತನಾಡಿ, ಆಶುಭಾಷಣ, ಭಕ್ತಿಗೀತೆ, ಸ್ಥಳದಲ್ಲಿ ಕಲಿಕೋಪಕರಣ ತಯಾರಿಕೆ, ರಸಪ್ರಶ್ನೆ ಸೇರಿದಂತೆ 7 ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ವಿಜೇತರಾದವರು ರಾಜ್ಯಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು. ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಶಾಲಾ ಪ್ರಧಾನ ಶಿಕ್ಷಕ ಎಫ್.ಎನ್. ಗೋಣೆಪ್ಪನವರ, ಎಸ್‌ಡಿಎಂಸಿ ಅಧ್ಯಕ್ಷ ಹಾಲನಗೌಡ ಪಾಟೀಲ, ಉಮೇಶ ಡೊಳ್ಳಿನ, ಪುಟ್ಟಪ್ಪ ಲಮಾಣಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಮುಳಗುಂದ, ಕರಾಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಕರಾಸನೌ ಸಂಘದ ರಾಜ್ಯ ಪರಿಷತ್ ಸದಸ್ಯ ಅಶೋಕ ಇಚ್ಚಂಗಿ, ಬಿಆರ್‌ಪಿಗಳಾದ ಈಶ್ವರ ಮೆಡ್ಲೇರಿ, ವಾಸು ದೀಪಾಳಿ, ಎಸ್.ಡಿ. ಲಮಾಣಿ, ಎಚ್.ಎಂ. ಗುತ್ತಲ, ಜಿಲ್ಲಾ ಉಪಾಧ್ಯಕ್ಷ ಎಮ್.ಎಸ್. ಹಿರೇಮಠ, ಎಫ್.ಎಸ್. ತಳವಾರ, ಸಿಆರ್‌ಪಿ ಆರ್. ಮಹಾಂತೇಶ, ಎನ್.ಎನ್. ಸಾವಿರಕುರಿ, ಗಿರೀಶ್ ನೇಕಾರ, ನವೀನ್ ಅಂಗಡಿ, ಡಿ.ಡಿ. ಲಮಾಣಿ, ಜ್ಯೋತಿ ಗಾಯಕವಾಡ, ಕೆ.ಪಿ. ಕಂಬಳಿ, ಗೀತಾ ಸರವಿ, ಗಾಯತ್ರಿ ಹಳ್ಳದ, ತಿರಕಪ್ಪ ಪೂಜಾರ, ಸತೀಶ್ ಪಶುಪತಿಹಾಳ ಹಾಗೂ ತಾಲೂಕು ಶೈಕ್ಷಣಿಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಿ.ಎಂ. ಯರಗುಪ್ಪಿ ಸ್ವಾಗತಿಸಿದರು. ಎನ್.ಎ. ಮುಲ್ಲಾ ವಂದಿಸಿದರು. ಉಮೇಶ ನೇಕಾರ ನಿರೂಪಿಸಿದರು.