ಸಹಕಾರಿ ಸಂಘಗಳು ರೈತರ ಜೀವನಾಡಿ: ಮಹಾಂತೇಶ ದೊಡಗೌಡರ

| Published : Jan 09 2024, 02:00 AM IST

ಸಾರಾಂಶ

ನೇಸರಗಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ.ದ ನಬಾರ್ಡ್‌ ಯೋಜನೆಯಡಿ ₹34 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಹಕಾರಿ ಸಂಘದ ಬಹುಉದ್ದೇಶಿತ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಮಹಾಂತೇಶ ದೊಡಗೌಡರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಹಕಾರಿ ಸಂಘಗಳು ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಹಾಗೂ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಹೇಳಿದರು.

ನೇಸರಗಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ.ದ ನಬಾರ್ಡ್‌ ಯೋಜನೆಯಡಿ ₹34 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಹಕಾರಿ ಸಂಘದ ಬಹುಉದ್ದೇಶಿತ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನೇಸರಗಿ ಭಾಗದಲ್ಲಿ ಹಿರಿಯರ ಪರಿಶ್ರಮದ ಫಲವಾಗಿ ಇಂದು ಸಹಕಾರಿ ಸಂಘವು ಹೆಮ್ಮರವಾಗಿ ಬೆಳೆದಿದೆ. ವಿವಿಧೋದ್ದೇಶಗಳ ಸಹಕಾರಿ ಸಂಘದ ಮೂಲಕ ಪೆಟ್ರೊಲ್ ಪಂಪ, ಔಷಧ ಅಂಗಡಿ ತೆರಯಲು ಬೈಲಾದಲ್ಲಿ ಅವಕಾಶವನ್ನು ಕಲ್ಪಿಸಿದ್ದು, ಇದರಿಂದ ಸಹಕಾರಿ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಳೆದ 30ವರ್ಷಗಳಿಂದ ಸಹಕಾರಿ ರಂಗದಲ್ಲಿ ತೊಡಗಿ ನೇಸರಗಿ ಭಾಗದ ರೈತರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸಿದ ತೃಪ್ತಿ ನನಗಿದೆ. ಸಹಕಾರಿ ಸಂಘಗಳು ಇಂದು ರೈತರ ಬೇಡಿಕೆ ಅನುಗುಣವಾಗಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ, ರಿಯಾಯತಿ ದರದಲ್ಲಿ ಸೊಯಾಬಿನ್, ಕಡಲೆ,ಜೋಳದ ಬೀಜಗಳ ಹಾಗೂ ಟ್ರ್ಯಾಕ್ಟರ್‌ ವಿತರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ರೈತರಿಗೆ ₹1 ಲಕ್ಷದವರೆಗೆ ಅಪಘಾತ ವಿಮೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಪಿಕೆಪಿಎಸ್ ಅಧ್ಯಕ್ಷ ರಾಜಶೇಖರ ಯತ್ತಿನಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಘಗಳು ಇವತ್ತು ಈ ಮಟ್ಟಕದಕೆ ಬೆಳೆಯಲು ರೈತರ ಸಹಕಾರವೇ ಮುಖ್ಯವಾದುದಾಗಿದೆ ಎಂದರು.

ನೇಸರಗಿ-ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಾನಾಸಾಹೇಬ್‌ ಪಾಟೀಲ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಪ್ರಕಾಶ ಮೂಗಬಸವ, ಗ್ರಾಪಂ ಅಧ್ಯಕ್ಷ ನಿಂಗಪ್ಪ ಮಾಳಣ್ಣವರ, ಬೆಳಗಾವಿ ಎನ್.ಜಿ.ಕಲಾವಂತ, ಸುರೇಶ ಮತ್ತಿಕೊಪ್ಪ, ಸಚಿನ ಪಾಟೀಲ, ಬಾಳಪ್ಪ ಮಾಳಗಿ, ರಮೇಶ ರಾಯಪ್ಪಗೋಳ, ಸೋಮನಗೌಡ ಪಾಟೀಲ, ಯಲ್ಲನಗೌಡ ದೊಡಗೌಡರ, ಬಾಳಾಸಾಹೇಬ್‌ ದೇಸಾಯಿ, ಐ.ಪಿ.ಯತ್ತಿನಮನಿ, ಪಿಕೆಪಿಎಸ್ ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ವಿಶ್ವನಾಥ ಕೂಲಿನವರ, ಶ್ರೀಕಾಂತ ತರಗಾರ, ನೇಸರಗಿ ಹಾಗೂ ಸೋಮನಟ್ಟಿ ಗ್ರಾಮದ ಸದಸ್ಯರು ಇದ್ದರು.