ಸಹಕಾರ ಸಂಘಗಳು ರೈತರ ಜೀವನಾಡಿ

| Published : Jan 22 2024, 02:19 AM IST

ಸಾರಾಂಶ

ಹೊಸಕೋಟೆ: ಸಹಕಾರ ಸಂಘಗಳು ಸದೃಢವಾಗಿದ್ದರೆ ರೈತರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಅವು ರೈತರ ಜೀವನಾಡಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ: ಸಹಕಾರ ಸಂಘಗಳು ಸದೃಢವಾಗಿದ್ದರೆ ರೈತರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಅವು ರೈತರ ಜೀವನಾಡಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಹಿಂಡಿಗನಾಳ ಗ್ರಾಮದಲ್ಲಿ ಎಸ್‌ಎಫ್‌ಸಿಎಸ್‌ ನಿರ್ಮಿಸುತ್ತಿರುವ ಅಂಗಡಿ ಮಳಿಗೆಗಳ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಕಾರಹಳ್ಳಿ ಮತ್ತು ಸಿದ್ದನಹಳ್ಳಿಯಲ್ಲಿ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ರೈತರ ಅಭ್ಯುದಯಕ್ಕೆ ಸ್ಥಾಪನೆಯಾಗಿದ್ದು, ಸಹಕಾರ ಸಂಘಗಳ ಮುಖೇನ ರೈತರ ಬೇಡಿಕೆಗಳಿಗೆ ಅನುಗುಣವಾಗಿ ಸರಕಾರ ಯೋಜನೆಗಳನ್ನು ರೂಪಿಸಿ ಆರ್ಥಿಕವಾಗಿ ಸಬಲರನ್ನಾಗಿಸಲು ಮುಖ್ಯ ಪಾತ್ರ ವಹಿಸುತ್ತವೆ ಎಂದರು.

ರೈತ ಕುಟುಂಬಗಳನ್ನು ಆರ್ಥಿಕವಾಗಿ ಸದೃಢರನ್ನಾಗಿಸಿ, ನಮ್ಮ ಬ್ಯಾಂಕ್ ಲಾಭ ಗಳಿಸುವುದರಲ್ಲಿ ಮುಂದಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಹಲವು ಸವಲತ್ತುಗಳನ್ನು ರೂಪಿಸಿದೆ. ರೈತರ ಹಿತಕ್ಕಾಗಿ ನೂತನ ಕಟ್ಟಡ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಬಿ.ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಬಮೂಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವೀಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಸಗೀರ್ ಅಹಮದ್, ತಾಪಂನ ಮಾಜಿ ಅಧ್ಯಕ್ಷ ಕೆಂಚೇಗೌಡ, ಮಾಜಿ ಸದಸ್ಯರಾದ ಬೀರಪ್ಪ, ರಾಮಚಂದ್ರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಉದ್ಯಮಿ ಎಂ. ಮಂದೀಪ್‌ಗೌಡ, ಸಂಘದ ಅಧ್ಯಕ್ಷ ಕೆ. ಮಂಜುನಾಥ್, ಉಪಾಧ್ಯಕ್ಷ ಎನ್. ಮಂಜುನಾಥ್, ಸಿಇಒ ಗುರುದೇವ್, ನಿರ್ದೇಶಕರಾದ ಎನ್.ಡಿ. ರಮೇಶ್, ಎಸ್. ಮಂಜುನಾಥ್, ಹೆಚ್.ಕೆ. ನಾರಾಯಣಗೌಡ, ಎಸ್‌ಬಿಟಿ ಬೈರೇಗೌಡ, ಶ್ರೀನಿವಾಸ್, ರವಿಶಂಕರ್, ಟಿ. ಮುನಿರಾಜು, ಎ.ಆರ್. ಕೃಷ್ಣಪ್ಪ, ಜಯಮ್ಮ, ಲಕ್ಷ್ಮೀದೇವಮ್ಮ, ಮುನಿನಾರಾಯಣಪ್ಪ, ಗ್ರಾಪಂನ ಅಧ್ಯಕ್ಷೆ ವಸಂತ ಲೋಕೇಶ್, ಸದಸ್ಯರಾದ ಸೊಣ್ಣೇಗೌಡ, ಹೆಚ್.ಡಿ. ಮಧು, ಹೆಚ್.ಎಂ. ಮೂರ್ತಿ, ಸಲೀಂ, ಕರಗೇಗೌಡ, ಶಿಲ್ಪಶ್ರೀ ಮುನಿರಾಜು, ಸರೋಜಮ್ಮ ಜಯರಾಮ್, ರುಕ್ಮಣಿ ಮಂಜುನಾಥ್ ಇತರರಿದ್ದರು.ಫೋಟೋ: 21 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕಿನ ಹಿಂಡಿಗನಾಳದಲ್ಲಿ ಎಸ್‌ಎಫ್‌ಸಿಎಸ್‌ ಅಂಗಡಿ ಮಳಿಗೆಗಳ ಕಟ್ಟಡ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಗುದ್ದಲಿಪೂಜೆ ನೆರವೇರಿಸಿದರು.