ಸಹಕಾರ ಸಂಘದ ಕಟ್ಟಡಗಳು ಗ್ರಾಮಗಳ ಘನತೆ ಪ್ರತೀಕ: ಶಾಸಕ ಎಚ್.ಟಿ.ಮಂಜು

| Published : May 23 2024, 01:03 AM IST

ಸಹಕಾರ ಸಂಘದ ಕಟ್ಟಡಗಳು ಗ್ರಾಮಗಳ ಘನತೆ ಪ್ರತೀಕ: ಶಾಸಕ ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಡೇರಿ ಕಟ್ಟಡ ಜಲಸೂರು- ಬೆಂಗಳೂರು ರಸ್ತೆ ಹಗಲೀಕರಣದ ವೇಳೆ ನೆಲಸಮಗೊಂಡ ಹಿನ್ನೆಲೆಯಲ್ಲಿ ಕೆಶಿಪ್ ವತಿಯಿಂದ ನೂತನ ಕಟ್ಟಡ ನಿರ್ಮಾಣ ಮಾಡಲು ಸಹಕಾರ ನೀಡಲಾಗುತ್ತಿದೆ. ಗ್ರಾಮದ ಮುಖಂಡರು, ಸಂಘದ ಸದಸ್ಯರು ಕಟ್ಟಡ ನಿರ್ಮಾಣ ಮಾಡುವಾಗ ಗುಣಮಟ್ಟದ ಕಾಮಗಾರಿಯತ್ತ ಗಮನ ನೀಡಬೇಕು. ಆದಷ್ಟು ಶೀಘ್ರವಾಗಿ ಕೆಲಸ ಮುಗಿಸಿ ಡೈರಿ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಹಕಾರ ಸಂಘದ ಕಟ್ಟಡಗಳು ಆಯಾ ಗ್ರಾಮದ ಘನತೆಯ ಪ್ರತೀಕವಾಗಿವೆ. ಗ್ರಾಮಸ್ಥರ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಶಾಸಕ ಹಾಗೂ ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ತಿಳಿಸಿದರು.

ತಾಲೂಕಿನ ಮಾಚಹೊಳಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಡೇರಿ ಕಟ್ಟಡ ಜಲಸೂರು- ಬೆಂಗಳೂರು ರಸ್ತೆ ಹಗಲೀಕರಣದ ವೇಳೆ ನೆಲಸಮಗೊಂಡ ಹಿನ್ನೆಲೆಯಲ್ಲಿ ಕೆಶಿಪ್ ವತಿಯಿಂದ ನೂತನ ಕಟ್ಟಡ ನಿರ್ಮಾಣ ಮಾಡಲು ಸಹಕಾರ ನೀಡಲಾಗುತ್ತಿದೆ ಎಂದರು.

ಗ್ರಾಮದ ಮುಖಂಡರು, ಸಂಘದ ಸದಸ್ಯರು ಕಟ್ಟಡ ನಿರ್ಮಾಣ ಮಾಡುವಾಗ ಗುಣಮಟ್ಟದ ಕಾಮಗಾರಿಯತ್ತ ಗಮನ ನೀಡಬೇಕು. ಆದಷ್ಟು ಶೀಘ್ರವಾಗಿ ಕೆಲಸ ಮುಗಿಸಿ ಡೈರಿ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು ಶಾಸಕರು ಮನವಿ ಮಾಡಿದರು.

ಮನ್ಮುಲ್ ನಿರ್ದೇಶಕ ಡಾಲುರವಿ ಮಾತನಾಡಿ, ಸಹಕಾರ ಸಂಘದ ಕಾರ್ಯನಿರ್ವಹಣೆಗಾಗಿ ಸ್ವಂತ ಕಟ್ಟಡ ಹೊಂದುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ನೂತನ ಕಟ್ಟಡ ಕಾಮಗಾರಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದರು.

ಈ ವೇಳೆ ಸಂಘದ ಅಧ್ಯಕ್ಷೆ ಕಾವ್ಯ ಜಗದೀಶ್ ಹಾಗೂ ಮಾಚಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಕವಿತಾ ರಂಗೇಗೌಡ, ರಾಣಿ ಸೋಮಶೇಖರ, ರತ್ನಮ್ಮ ನಾಗಣ್ಣ, ಎಂ.ಕೆ. ಪ್ರಸನ್ನಕುಮಾರ್, ಎಂ.ಎಸ್.ಹರೀಶ, ಎಂ.ಜಿ.ಗೋಪಾಲ್. ಮಹದೇವ. ತಮ್ಮಣ್ಣೇಗೌಡ, ಗ್ರಾಪಂ ಮಾಜಿ ಸದಸ್ಯ ಹಾಗೂ ನಿರ್ದೇಶಕ ಎಂ.ಎಸ್.ಪ್ರಸನ್ನ, ಸಂಘದ ಕಾರ್ಯದರ್ಶಿ ಎಂ.ಪಿ.ರಮೇಶ್, ಸಹಾಯಕ ಬಸವರಾಜ್, ರಂಗನಾಥ್ ಗ್ರಾಮದ ಮುಖಂಡರಾದ ಪದ್ಮನಾಭ, ಹರೀಶ, ಸತೀಶ್‌, ಯಾಲಕ್ಕಿಗೌಡ, ರಾಜೇಗೌಡ, ಮಂಜುನಾಥ ಸೇರಿದಂತೆ ಹಲವರು ಹಾಜರಿದ್ದರು.