ಭಾರತದ ಬಲಿಷ್ಠ ಆರ್ಥಿಕತೆಗೆ ಸಹಕಾರ ಸಂಘಗಳು ಅಗತ್ಯ: ಮನು ಮುತ್ತಪ್ಪ

| Published : Nov 20 2023, 12:45 AM IST

ಭಾರತದ ಬಲಿಷ್ಠ ಆರ್ಥಿಕತೆಗೆ ಸಹಕಾರ ಸಂಘಗಳು ಅಗತ್ಯ: ಮನು ಮುತ್ತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ದೇಶದಲ್ಲಿ ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತಿವೆ. ೨೦೨೮ನೇ ಇಸವಿಗೆ ಭಾರತದಲ್ಲಿ ೫ ಟ್ರಿಲಿಯನ್ ಡಾಲರ್‌ಗಳ ಆರ್ಥಿಕತೆಯ ಶಕ್ತಿಯಾಗಿ ಸಾಧನೆ ಮಾಡಬೇಕಾದರೆ ಸಹಕಾರಿ ವಲಯವನ್ನು ಪುನಃಶ್ಚೇತನಗೊಳಿಸಬೇಕಿದೆ ಎಂದು ಮನು ಮುತ್ಹಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಭಾರತ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕಾದರೆ ಸಹಕಾರ ಸಂಘ ಸಂಘಗಳ ಪಾತ್ರ ಪ್ರಮುಖವಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ಹೇಳಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ಇಲಾಖೆ ಕೊಡಗು, ಸೋಮವಾರಪೇಟೆ ವಿವಿಧ ಸಹಕಾರ ಸಂಘಗಳ ಆಶ್ರಯದಲ್ಲಿ ಚನ್ನಬಸಪ್ಪ ಸಭಾಂಗಣದಲ್ಲಿ ಭಾನುವಾರ ನಡೆದ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಡೀ ದೇಶದಲ್ಲಿ ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತಿವೆ. ೨೦೨೮ನೇ ಇಸವಿಗೆ ಭಾರತದಲ್ಲಿ ೫ ಟ್ರಿಲಿಯನ್ ಡಾಲರ್‌ಗಳ ಆರ್ಥಿಕತೆಯ ಶಕ್ತಿಯಾಗಿ ಸಾಧನೆ ಮಾಡಬೇಕಾದರೆ ಸಹಕಾರಿ ವಲಯವನ್ನು ಪುನಃಶ್ಚೇತನಗೊಳಿಸಬೇಕಿದೆ ಎಂದು ಹೇಳಿದರು.

೧೯೯೧ರಲ್ಲಿ ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಆರ್ಥಿಕತೆಗೆ ಚೈತನ್ಯ ತುಂಬಿದರು. ಈಗ ಭಾರತ ಪ್ರಪಂಚದಲ್ಲೇ ೫ನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಸಹಕಾರಿ ಆಂದೋಲನ ಬೆಳವಣಿಗೆಗೆ ಸಹಕಾರಿ ಸಪ್ತಾಹವು ಉತ್ತಮ ಬುನಾದಿ ಹಾಕಲಿದೆ ಎಂದು ಹೇಳಿದರು.ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ಮಾತನಾಡಿ, ದೇಶದ ಶೇ.೬೦ರಷ್ಟು ಸಂಪತ್ತು, ಕೇವಲ ಶೇ.೬ ರಷ್ಟಿರುವ ಜನರಲ್ಲಿ ಕೇಂದ್ರಿಕೃತವಾಗಿದೆ. ಕಾರ್ಪೋರೇಟ್ ವಲಯದ ಅರ್ಭಟಕ್ಕೆ ಸಹಕಾರ ಕ್ಷೇತ್ರ ಅಭಿವೃದ್ಧಿಯಾಗುತ್ತಿಲ್ಲ. ಸಹಕಾರ ಕ್ಷೇತ್ರ ಬಲಿಷ್ಠವಾಗಬೇಕಾದರೆ ಯುವ ಸಮುದಾಯದ ಕೈಗೆ ಸಿಗಬೇಕು ಎಂದರು.

ತಾಲೂಕು ಸಹಕಾರ ಒಕ್ಕೂಟದ ಅಧ್ಯಕ್ಷ ಕೆ.ಟಿ.ಪರಮೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ.ಭರತ್‌ಕುಮಾರ್, ಹಿರಿಯ ಸಹಕಾರಿಗಳಾದ ತಾಕೇರಿ ಪೊನ್ನಪ್ಪ, ನಾಪಂಡ ಉಮೇಶ್, ಸುಮಾ ಸುದೀಪ್, ದಿವಾನ್, ಕೆ.ಡಿ.ಸಿ.ಎಂ. ಪ್ರಾಂಶುಪಾಲರಾದ ಆರ್.ಎಸ್.ರೇಣುಕಾ, ಬ್ಯಾಂಕ್ ವ್ಯವಸ್ಥಾಪಕಿ ಮಂಜುಳಾ ಇದ್ದರು.