ಸಾರಾಂಶ
ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಎಂಆರ್‌ಪಿಎಲ್ ಮುಖ್ಯ ಪ್ರಾಯೋಜಕತ್ವದಲ್ಲಿ ಕೋಸ್ಟಲ್ ಎಂಎಸ್ಎಂಇ ಮತ್ತು ಸ್ಟಾರ್ಟಪ್ ಕಾನ್‌ಕ್ಲೇವ್ 2025ನ್ನು ನಗರದ ರೆಡ್‌ಕ್ರಾಸ್ ಪ್ರೇರಣಾ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.
ಮಂಗಳೂರು: ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಹಾಗೂ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ, ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಎಂಆರ್‌ಪಿಎಲ್ ಮುಖ್ಯ ಪ್ರಾಯೋಜಕತ್ವದಲ್ಲಿ ಕೋಸ್ಟಲ್ ಎಂಎಸ್ಎಂಇ ಮತ್ತು ಸ್ಟಾರ್ಟಪ್ ಕಾನ್‌ಕ್ಲೇವ್ 2025ನ್ನು ನಗರದ ರೆಡ್‌ಕ್ರಾಸ್ ಪ್ರೇರಣಾ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭ ಅವಾರ್ಡ್ಸ್ ನೈಟ್ ಸಂಜೆ ನಡೆದಿದ್ದು, ನಾವೀನ್ಯತೆ, ನಾಯಕತ್ವ, ಬದ್ಧತೆಯ ಮೂಲಕ ಆಯಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ 29 ಎಂಎಸ್ಎಂಇಗಳನ್ನುಗುರುತಿಸಿ ಗೌರವಿಸಲಾಯಿತು.
ಕರ್ಣಾಟಕ ಬ್ಯಾಂಕಿನ ಸಿಬಿಒ ಚಂದ್ರಶೇಖರ ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ನರಸಿಂಹ ಕುಮಾರ್, ಡಾ. ಪ್ರಶಾಂತ್ ಶಂಕರ್, ಕೆನರಾ ಬ್ಯಾಂಕ್ ಡಿಜಿಎಂ ಶೈಲೇಂದ್ರನಾಥ್ ಶೀತ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಎಸ್‌ವಿಸಿ ಬ್ಯಾಂಕ್ ಕ್ಲಸ್ಟರ್ ಮುಖ್ಯಸ್ಥ ಸೂರಜ್ ಎಸ್. ಶೇಟ್, ಬ್ಯಾಂಕ್ ಆಫ್ ಮಹಾರಾಷ್ಟ್ರದ ವಲಯ ಮುಖ್ಯಸ್ಥ ಸುಚಿತ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾನ್‌ಕ್ಲೇವ್ ನಿರ್ದೇಶಕ ಸಿಎ ಎಸ್.ಎಸ್. ನಾಯಕ್, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ರೊಟೇರಿಯನ್ ಭಾಸ್ಕರ್ ರೈ ಕಟ್ಟ, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಅಧ್ಯಕ್ಷ ಯು. ರಾಮರಾವ್, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಕಾರ್ಯದರ್ಶಿ ರೊಟೇರಿಯನ್ ವಿಕಾಸ್ ಕೋಟ್ಯಾನ್, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಮುಖ್ಯ ಸಂಯೋಜಕ ಡಾ. ದೇವದಾಸ್ ರೈ, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಕಾರ್ಯದರ್ಶಿ ಪಿ. ರವೀಂದ್ರ ರಾವ್ ಇದ್ದರು.ಪ್ರಶಸ್ತಿ ಸಮಾರಂಭದಲ್ಲಿ ನಂದಗೋಕುಲ ನೃತ್ಯ ಅಕಾಡೆಮಿಯ ಶ್ವೇತಾ ಅರೆಹೊಳೆ ಮತ್ತು ತಂಡದಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.