ಬೃಹತ್ ಗಾತ್ರದ ನಾಗರ ಹಾವು ಸೆರೆ

| Published : May 07 2025, 12:46 AM IST

ಸಾರಾಂಶ

ಐದುವರೆ ಅಡಿ ಉದ್ದದ ನಾಗರ ಹಾವನ್ನು ಹೊಸ್ಕೇರಿಯ ಸ್ನೇಕ್‌ ರಮೇಶ್‌ ಪಿ. ಎಸ್‌. ಸೆರೆ ಹಿಡಿದು ಕಂಡಕೆರೆ ಅರಣ್ಯಕ್ಕೆ ಬಿಟ್ಟಿದ್ದಾರೆ.

ಸಿದ್ದಾಪುರ: ಮರಗೋಡುವಿನ ಹೊಸ್ಕೇರಿ ಗ್ರಾಮದ ಕಂದನ್ ಎಂಬುವರ ಮನೆಯ ಅಡುಗೆ ಕೋಣೆಯಲ್ಲಿದ್ದ ಐದುವರೆ ಅಡಿ ಉದ್ದದ ನಾಗರಹಾವನ್ನು ಹೊಸ್ಕೇರಿಯ ಸ್ನೇಕ್ ರಮೇಶ್. ಪಿ ಎಸ್ ಸೆರೆ ಹಿಡಿದು ಕಂಡಕರೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಅಡುಗೆ ಕೋಣೆಯಲ್ಲಿ ಅಡಗಿದ ಬೃಹತ್ ನಾಗರಹಾವನ್ನು ಸೆರೆ ಹಿಡಿಯಲು ಹರಸಾಹಸ ಪಟ್ಟು ಕೊನೆಗೆ ಅಡುಗೆ ಕೋಣೆಯ ಗೋಡೆಯನ್ನು ಒಡೆದು ಹಾಕಿದ ನಂತರ ಹಾವನ್ನು ಸೆರೆ ಹಿಡಿಯಲಾಯಿತು.

--------------------

24, 25ರಂದು ಯಂಗ್ ಸ್ಟಾರ್ ಸೀಸನ್-3 ಕ್ರಿಕೆಟ್ ಪಂದ್ಯಾವಳಿ

ಕನ್ನಡಪ್ರಭವಾರ್ತೆ ಸೋಮವಾರಪೇಟೆಇಲ್ಲಿನ ಯಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಿಂದ ಮೇ 24 ಮತ್ತು 25ರಂದು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 35 ವರ್ಷ ಮೇಲ್ಪಟ್ಟ ಆಟಗಾರರಿಗೆ ಯಂಗ್ ಸ್ಟಾರ್ ಸೀಸನ್-3 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಸಂಯೋಜಕ ಮಂಜುನಾಥ್ ತಿಳಿಸಿದ್ದಾರೆ.

ಐಪಿಎಲ್ ಮಾದರಿಯಲ್ಲಿ ಪಂದ್ಯಾಟಗಳು ನಡೆಯಲಿದ್ದು, ಪ್ರಥಮ ಬಹುಮಾನ 30 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 15 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ಮ್ಯಾನ್ ಆಫ್ ದ ಸೀರೀಸ್, ಮ್ಯಾನ್ ಆಫ್ ದ ಮ್ಯಾಚ್, ಬೆಸ್ಟ್ ಬ್ಯಾಟ್ಸ್ಮೆನ್, ಬೆಸ್ಟ್ ಬೌಲರ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಗಳನ್ನು ನೀಡಲಾಗುವುದು.

ಇದರೊಂದಿಗೆ ಪ್ರತ್ಯೇಕ ವಿಭಾಗದಲ್ಲಿ 9ನೇ ತರಗತಿ ಒಳಗಿನ ಮಕ್ಕಳಿಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ:9535530248 ಸಂಖ್ಯೆಯನ್ನು ಸಂಪರ್ಕಿಸಬಹುದು.