ಕಾಫಿ ಉತ್ಪಾದನೆ ಹೆಚ್ಚಿಸಲು ಕಾಫಿ ದಿನಾಚರಣೆ: ಡಾ.ನಾಗರಾಜ್

| Published : Oct 03 2024, 01:21 AM IST

ಕಾಫಿ ಉತ್ಪಾದನೆ ಹೆಚ್ಚಿಸಲು ಕಾಫಿ ದಿನಾಚರಣೆ: ಡಾ.ನಾಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಅಂತಾರಾಷ್ಟ್ರೀಯ ಕಾಫಿ ಸಂಸ್ಥೆ ಅಕ್ಟೋಬರ್ 1ನ್ನು ವಿಶ್ವ ಕಾಫಿ ದಿನ ಎಂದು 2015ರಲ್ಲಿ ಘೋಷಿಸಿದ್ದು, ಕಾಫಿ ಬಗೆಗಿನ ಜನಪ್ರಿಯತೆ ಹೆಚ್ಚಿಸಿ ಕಾಫಿ ಬೆಳೆಗಾರರ ಉತ್ಪಾದನೆ ಮತ್ತು ಮಾರಾಟ ಉತ್ತೇಜಿಸುವ ಸಲುವಾಗಿ ಈ ದಿನಆಚರಿಸಲಾಗುತ್ತದಿ ಎಂದು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಜಂಟಿ ನಿರ್ದೇಶಕ ಡಾ.ನಾಗರಾಜ್ ತಿಳಿಸಿದರು.

ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿಶ್ವ ಕಾಫಿ ದಿನಾಚರಣೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಅಂತಾರಾಷ್ಟ್ರೀಯ ಕಾಫಿ ಸಂಸ್ಥೆ ಅಕ್ಟೋಬರ್ 1ನ್ನು ವಿಶ್ವ ಕಾಫಿ ದಿನ ಎಂದು 2015ರಲ್ಲಿ ಘೋಷಿಸಿದ್ದು, ಕಾಫಿ ಬಗೆಗಿನ ಜನಪ್ರಿಯತೆ ಹೆಚ್ಚಿಸಿ ಕಾಫಿ ಬೆಳೆಗಾರರ ಉತ್ಪಾದನೆ ಮತ್ತು ಮಾರಾಟ ಉತ್ತೇಜಿಸುವ ಸಲುವಾಗಿ ಈ ದಿನಆಚರಿಸಲಾಗುತ್ತದಿ ಎಂದು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಜಂಟಿ ನಿರ್ದೇಶಕ ಡಾ.ನಾಗರಾಜ್ ತಿಳಿಸಿದರು. ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿಶ್ವ ಕಾಫಿ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದ ಅತೀ ಹೆಚ್ಚಿನ ದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ನಮ್ಮ ದೇಶ ಆರನೇ ಸ್ಥಾನದಲ್ಲಿದೆ. ವಿಶೇಷ ಉತ್ಪನ್ನಗಳೊಂದಿಗೆ ಇದು ಜನರ ಗಮನ ಸೆಳೆದಿದೆ ಎಂದು ತಿಳಿಸಿದರು.

ವಿಜ್ಞಾನಿ ಡಾ. ಎ.ಪಿ.ರಂಜಿನಿ ಮಾತನಾಡಿ, ಕಾಫಿ ಸೇವನೆಯಿಂದ ಹಲವು ಆರೋಗ್ಯದ ಲಾಭಗಳಿದ್ದು, ಭಾವನಾತ್ಮಕ ಆರೋಗ್ಯ, ತೂಕ ಇಳಿಸು ವಿಕೆಗೆ ಸಹಾಯ, ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಹಲವು ವಿಧಗಳಲ್ಲಿ ಪೂರಕವಾಗಿದೆ ಎಂದರು.ವಿಜ್ಞಾನಿ ಡಾ. ಹರೀಶ್ ಮಾತನಾಡಿ, ಸ್ವಚ್ಛತಾ ಅಭಿಯಾನ 4.0 ಕಾರ್ಯಕ್ರಮಈ ಬಾರಿ ಹಮ್ಮಿಕೊಂಡಿದ್ದು, ಪ್ಲಾಸ್ಟಿಕ್ ನಿಷೇಧ, ಮಣ್ಣಿನ ಮತ್ತು ಜಲ ಮಾಲಿನ್ಯಕ್ಕೆ ಕಾರಣಗಳು ಹಾಗೂ ನಿವಾರಿಸುವ ಕ್ರಮಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು ಎಂದರು.ನವೋದಯ ವಿದ್ಯಾಲಯದ ಪ್ರಾಚಾರ್ಯೆ ರೇಖಾ ಅಶೋಕ್, ಉಪ ಪ್ರಾಚಾರ್ಯ ಶಶಿಕುಮಾರ್, ಉಪನ್ಯಾಸಕರಾದ ಶಿವಮೂರ್ತಿ, ಎ.ಪಿ.ನಾಗರಾಜ್ ಮತ್ತಿತರರು ಹಾಜರಿದ್ದರು. ೦೨ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಕಾಫಿ ದಿನಾಚರಣೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಕಾಫಿ ಮಹತ್ವ ತಿಳಿಸಲಾಯಿತು. ಡಾ.ನಾಗರಾಜ್, ರಂಜಿನಿ, ಹರೀಶ್, ರೇಖಾ, ಶಶಿಕುಮಾರ್ ಇದ್ದರು.