ಅರಣ್ಯಾಧಿಕಾರಿಗಳು ಆನೆಗಳು ಇವೆ ಎಚ್ಚರಿಕೆ ಎಚ್ಚರಿಕೆ ಎಂದು ಹೇಳಿಕೊಂಡು ಹೋಗುವುದನ್ನು ಬಿಟ್ಟರೇ, ಯಾವು ಜಾಗದಲ್ಲಿ ನಿಖರವಾಗಿ ಆನೆಗಳಿವೆ ಎಂಬುದನ್ನು ಹೇಳುವುದಿಲ್ಲ. ಇಂದು ಎಂದಿನಂತೆ ಕಾಫಿ ತೋಟಕ್ಕೆ ನೀರು ಹಾಯಿಸಲು ಹೋದ ವೇಳೆ ಕಾಡಾನೆ ರಾಜಶೇಖರ್ ಎಂಬುವರನ್ನು ಬಲಿ ಪಡೆದಿದೆ. ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಜೊತೆಗೆ ಕಾಡಾನೆಗೆ ಶಾಶ್ವತವಾದ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಅಹೋರಾತ್ರಿ ಪ್ರತಿಭಟನೆ ಮಾಡುವ ಮೂಲಕ ಶವ ಎತ್ತಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬೇಲೂರು: ತಾಲೂಕಿನ ಅರೆಹಳ್ಳಿ ಹೋಬಳಿ ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಬಲಿಯಾದ ಹಿನ್ನೆಲೆಯಲ್ಲಿ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವಂತೆ ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದರು.ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆ. ಜಿ. ಕುಮಾರ್ ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಅರಣ್ಯಾಧಿಕಾರಿಗಳು ಆನೆಗಳು ಇವೆ ಎಚ್ಚರಿಕೆ ಎಚ್ಚರಿಕೆ ಎಂದು ಹೇಳಿಕೊಂಡು ಹೋಗುವುದನ್ನು ಬಿಟ್ಟರೇ, ಯಾವು ಜಾಗದಲ್ಲಿ ನಿಖರವಾಗಿ ಆನೆಗಳಿವೆ ಎಂಬುದನ್ನು ಹೇಳುವುದಿಲ್ಲ. ಇಂದು ಎಂದಿನಂತೆ ಕಾಫಿ ತೋಟಕ್ಕೆ ನೀರು ಹಾಯಿಸಲು ಹೋದ ವೇಳೆ ಕಾಡಾನೆ ರಾಜಶೇಖರ್ ಎಂಬುವರನ್ನು ಬಲಿ ಪಡೆದಿದೆ. ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಜೊತೆಗೆ ಕಾಡಾನೆಗೆ ಶಾಶ್ವತವಾದ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಅಹೋರಾತ್ರಿ ಪ್ರತಿಭಟನೆ ಮಾಡುವ ಮೂಲಕ ಶವ ಎತ್ತಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಾಫಿ ಬೆಳೆಗಾರರ ಸಂಘದ ಹೋಬಳಿ ಅಧ್ಯಕ್ಷ ಮಂಜುನಾಥ್, ಕೆಜಿಫ್‌ನ ಮಲ್ಲಿಕಾರ್ಜುನ್ ಕಳೆದ 2 ವರ್ಷದ ಅಂತರದಲ್ಲಿ 4 ಮಂದಿಯನ್ನು ಬಲಿ ಪಡೆದಿರುವುದು ನಿಜಕ್ಕೂ ದುರ್ದೈವದ ಸಂಗತಿಯೇ ಸರಿ. ಏ. 10ರಂದು ಜಿಲ್ಲಾ ಉಸ್ತುವಾರಿ ತಾಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುವ ಮೂಲಕ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಹೇಳಿದ್ದರು. ಆದರೆ ಕೇವಲ ಒಂದು ದಿನದ ಅಂತರದಲ್ಲಿಯೇ ಕಾಡಾನೆಗೆ ಮತ್ತೊಂದು ಜೀವ ಬಲಿಯಾಗಿದೆ. ಸರ್ಕಾರ ಕೂಡಲೇ ಆನೆಗಳ ಸ್ಥಳಾಂತರಕ್ಕೆ ಮುಂದಾಗದಿದ್ದರೇ, ಮತ್ತಷ್ಟು ಜೀವಗಳು ಬಲಿಯಾಗುತ್ತವೆ ಎಂದು ಕಿಡಿಕಾರಿದರು.