ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ ಗ್ರಾಮದ ಬಳಿ 10 ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಹಣ್ಣು ಮತ್ತು ತರಕಾರಿ ಸಂಗ್ರಹಕ್ಕೆ 50 ಕೋಟಿ ವೆಚ್ಚದಲ್ಲಿ ನೂತನ ಕೋಲ್ಡ್ ಸ್ಟೋರೇಜ್ ನಿರ್ಮಿಸಿ ರೈತರು ಬೆಳೆದ ಹಣ್ಣು ತರಕಾರಿಗಳನ್ನು ದೀರ್ಘ ಕಾಲ ಉಳಿಯುವಂತೆ ಸಂಗ್ರಹಿಸಿಡುವ ಯೋಜನೆ ಶೀಘ್ರದಲ್ಲೆ ಜಾರಿಗೆ ತರಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಪಶುಸಂಗೋಪನಾ ಇಲಾಖೆ ಆವರಣದಲ್ಲಿ ಪಶು ಇಲಾಖೆ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ ಫಲಾನುಭವಿಗಳಿಗೆ ಸುಮಾರು 4 ಕೋಟಿ ವೆಚ್ಚದ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಪಶು ಇಲಾಖೆ ವತಿಯಿಂದ 60 ಮೇವು ಕತ್ತರಿಸುವ ಯಂತ್ರ, ರಾಸುಗಳಿಗೆ ನೆಲಹಾಸು ರಬ್ಬರ್ ಮ್ಯಾಟ್ ವಿತರಣೆ, ಪಶು ಸಖಿಯರಿಗೆ ಸಮವಸ್ತ್ರ ವಿತರಣೆ, ರಾಸುಗಳ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಲಸಿಕಾ ಅಭಿಯಾನಕ್ಕೆ ಚಾಲನೆ ಹಾಗೂ ನೂತನ ಸಭಾಭವನ ಉದ್ಘಾಟನೆ. ಕೃಷಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ ಮಾಡಿದ ರೈತರಿಗೆ ಸಹಾಯ ಧನ ವಿತರಣೆ, ರೇಷ್ಮೆ ಇಲಾಖೆ ವತಿಯಿಂದ ರೇಷ್ಮೆ ಹುಳುವಿನ ಮನೆ ನಿರ್ಮಾಣಕ್ಕೆ ಎಲಕ್ಟ್ರಿಕಲ್ ಸ್ಪೆಯರ್ ವಿತರಣೆ, ಪವರ್ ವೀಡರ್, 4 ಸ್ಪೋಕ್ ಬ್ರಷ್‌ಕಟರ್, ಪ್ಲಾಸ್ಟಿಕ್ ಚಂದ್ರಿಕೆ ವಿತರಣೆ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಹನಿ ನೀರಾವರಿ, ಹಸಿರುಮನೆ, ಕೃಷಿ ಹೊಂಡ ನಿರ್ಮಾಣ, ಟ್ರಾಕ್ಟರ್ ಆದಾರಿತ ಬೂಮರ್, ಸೋಲಾರ್ ಪಂಪ್ ಸೆಟ್‌ಗಳ ಅಳವಡಿಕೆಗೆ ಸಹಾಯ ಧನ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಬಿವಿ ಸತೀಶ್ ಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ ಮೂರ್ತಿ, ದಿ ಟೌನ್ ಬ್ಯಾಂಕ್ ಅಧ್ಯಕ್ಷ ಬಲ್ಪ್ ಮಂಜುನಾಥ್, ಉಪಾಧ್ಯಕ್ಷ ಅಕ್ಬರ್ ಪಾಷ, ನಿರ್ದೇಶಕ ಎಚ್‌ಎಸ್ ಗೋಪಾಲ್, ವಿಷ್ಣು, ಕೃಷಿ ಸಮಾಜದ ಅಧ್ಯಕ್ಷ ಕೃಷ್ಣಪ್ಪ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ ಮಂಜುನಾಥ್, ಕೃಷಿ ಇಲಾಖೆಯ ಪ್ರಸನ್ನ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮಣ್, ನಿವೃತ್ತ ತಾಪಂ ಇಒ ಡಾ ಸಿ.ಎನ್.ನಾರಾಯಣಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.ಕೋಟ್..................
ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಪಂಚ ಭಾಗ್ಯಗಳನ್ನು ಮಾತ್ರ ನೀಡುತ್ತಿದ್ದು, ಬೇರೆ ವರ್ಗದವರಿಗೆ ಸೂಕ್ತ ಸೌಲಭ್ಯಗಳ ಕೊರತೆ ಎಂಬ ಮಾತು ಸತ್ಯಕ್ಕೆ ದೂರವಾದುದು. ರೈತರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ವತಿಯಿಂದ ೪ ಕೋಟಿ ವೆಚ್ಚದ ಸವಲತ್ತು ವಿತರಣೆ, ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಕ್ರಮ, ಬಮೂಲ್ ವತಿಯಿಂದ ರೈತರಿಗೆ ಸಹಾಯ ಧನ ವಿತರಣೆ ಮಾಡಲಾಗಿದೆ.
-ಶರತ್ ಬಚ್ಚೇಗೌಡ, ಶಾಸಕ. ಹೊಸಕೋಟೆ
ಫೋಟೋ: 18 ಹೆಚ್‌ಎಸ್‌ಕೆ 1ಹೊಸಕೋಟೆಯ ಪಶು ಇಲಾಖೆ ಆವರಣದಲ್ಲಿ ವಿವಿಧ ಇಲಾಖೆಗಳ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಪಶು ಸಖಿಯರಿಗೆ ಸಮವಸ್ತ್ರ ಹಾಗೂ ರೈತರಿಗೆ ವಿವಿಧ ಸವಲತ್ತುಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು.