ಬಾಟಂ.. ಗ್ರಾಮಾಂತರಕ್ಕೆವಿಜೃಂಭಣೆಯ ಸ್ವಾತಂತ್ರೋತ್ಸವ ಆಚರಿಸಲು ನಿರ್ಧಾರ

| Published : Jul 25 2025, 12:30 AM IST

ಬಾಟಂ.. ಗ್ರಾಮಾಂತರಕ್ಕೆವಿಜೃಂಭಣೆಯ ಸ್ವಾತಂತ್ರೋತ್ಸವ ಆಚರಿಸಲು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ವೇದಿಕೆಯಲ್ಲಿ ಧ್ವಜಾರೋಹಣ ಕಾರ್ಯ ನೆರವೇರಿಸುವ ಉಪವಿಭಾಗಾಧಿಕಾರಿ ಮತ್ತು ತಾಲೂಕಿನ ಶಾಸಕರು ಧ್ವಜವಂದನೆ ಸ್ವೀಕರಿಸುವುದು ಶಿಷ್ಟಾಚಾರ

ಕನ್ನಡಪ್ರಭ ವಾರ್ತೆ ಹುಣಸೂರು ಈ ಬಾರಿಯ ಸ್ವಾತಂತ್ರೋತ್ಸವ ದಿನವನ್ನು ದೇಶಭಕ್ತಿ, ರಾಷ್ಟ್ರಪ್ರೇಮದೊಂದಿಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.ನಗರಸಭೆಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸ್ವಾತಂತ್ರೋತ್ಸದ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಸ್ವಾತಂತ್ರ್ಯ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಿತು.ಎಲ್ಲ ಇಲಾಖೆಗಳ ಸಹಯೋಗದಲ್ಲಿ ಅಚ್ಚುಕಟ್ಟಾಗಿ ಮತ್ತು ಶಿಸ್ತುಬದ್ಧವಾಗಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಡೆಸಲು ತೀರ್ಮಾನಿಸಲಾಯಿತು.ಮುಖಂಡ ಪುಟ್ಟರಾಜು, ಡಿ.ಕುಮಾರ್, ಚಿಕ್ಕಸ್ವಾಮಿ ಮುಂತಾದವರು ಮಾತನಾಡಿ, ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ವೇದಿಕೆಯಲ್ಲಿ ಧ್ವಜಾರೋಹಣ ಕಾರ್ಯ ನೆರವೇರಿಸುವ ಉಪವಿಭಾಗಾಧಿಕಾರಿ ಮತ್ತು ತಾಲೂಕಿನ ಶಾಸಕರು ಧ್ವಜವಂದನೆ ಸ್ವೀಕರಿಸುವುದು ಶಿಷ್ಟಾಚಾರವಾಗಿದೆ. ಆದರೆ ಇತ್ತೀಚಿನ ವರ್ಷಗಳಲಿ. ಎಲ್ಲ ಅದಿಕಾರಿಗಳು ಮತ್ತು ಜನಪ್ರತಿನಿಧಿಗಳು ವೇದಿಕೆಯನ್ನೇರುತ್ತಿರುವುದು ಅಭಾಸಕ್ಕೆ ಎಡೆಯುಂಟು ಮಾಡುತ್ತಿದ್ದು, ಇದನ್ನು ತಡೆಯಬೇಕೆಂದು ಒತ್ತಾಯಿಸಿದರು. ತಹಸೀಲ್ದಾರ್ ಜೆ. ಮಂಜುನಾಥ್ ಮಾತನಾಡಿ, ಶಿಷ್ಟಾಚಾರದಂತೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಮುಖ್ಯವೇದಿಕೆಯಲ್ಲಿ ಎಲ್ಲ ಗಣ್ಯರಿಗೂ ಸ್ಥಾನ ಕಲ್ಪಿಸಲಾಗುವುದು ಎಂದರು. ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜನೆಗೊಳ್ಳುವ ಕಾರ್ಯಕ್ರಮದಲ್ಲಿ ನಗರ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ಪಥಸಂಚಲನ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಆಯೋಜಸಲಾಗುವುದು, ಮೈದಾನದಲ್ಲಿ ಕಾರ್ಯಕ್ರಮ ನಡೆಯುವ ವೇಳೆ ಆಭಾಸವಾಗದಂತೆ ಬ್ಯಾರಿಕೇಡ್‌ ಗಳನ್ನು ಅಳವಡಿಸಲಾಗುವುದು ಎಂದರು.ಸಾರ್ವಜನಿಕರಿಗೆ ಸೂಕ್ತ ಸ್ಥಳಾವಕಾಶ ನೀಡಿ ಕಾರ್ಯಕ್ರಮವನ್ನು ವೀಕ್ಷಿಸಲು ಅನುವು ಮಾಡಕೊಡಲಾಗುವುದು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಅಂದು ಸಂಜೆ ಕೂಡ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉನ್ನತ ವ್ಯಾಸಂಗದಲ್ಲಿ ಸಾಧನೆಗೈದ ತಾಲೂಕಿನ ಸಾಧಕರಿಗೆ ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ವ್ಯಾಸಂಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ವಿವಿಧ ಕಾರ್ಯಕ್ರಮ ಯಶಸ್ಸಿಗೆ ವಿವಿಧ ಇಲಾಖೆಗಳಿಗೆ ಜವಾಬ್ದಾರಿಯನ್ನು ತಹಸೀಲ್ದಾರ್ ಜೆ. ಮಂಜುನಾಥ್ ನೀಡಿದರು. ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯು ವೇದಿಕೆ ಸಜ್ಜು, ಅಲಂಕಾರ ಮತ್ತು ಬ್ಯಾರಿಕೇಡ್‌ ಗಳ ಅಳವಡಿಕೆಯನ್ನು ಕೈಗೊಳ್ಳಬೇಕು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯಕ್ರಮಕ್ಕೆ ಆಗಮಿಸುವ ಜನಪ್ರತಿನಿಧಿಗಳು ಮತ್ತು ಗಣ್ಯರಿಗೆ ಲಘು ಉಪಾಹಾರ ಮತ್ತು ಟೀ, ಕಾಫಿ ಪೂರೈಸಬೇಕು. ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ತಿಯಿಂದ ಗಣ್ಯರ ಮತ್ತು ಸಾಧಕರ ಸನ್ಮಾನಕ್ಕೆ ಅಗತ್ಯ ಹೂಗುಚ್ಛ ಮುಂತಾದವುಗಳನ್ನು ಒದಗಿಸುವುದು. ಮುಖಂಡ ವಕೀಲ ಪುಟ್ಟರಾಜು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಸಭೆಯಲ್ಲಿ ನಗರಸಭಾದ್ಯಕ್ಷ ಗಣೇಶ್ ಕುಮಾರಸ್ವಾಮಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್. ರಾಚಪ್ಪ, ಸುಬ್ಬಣ್ಣ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ, ಮುಖಂಡರಾದ ನಿಂಗರಾಜ ಮಲ್ಲಾಡಿ, ವಿ.ಪಿ. ಸಾಯಿನಾಥ್, ಇಒ ಕೆ. ಹೊಂಗಯ್ಯ, ಬಿಇಒ ಎಸ್.ಪಿ. ಮಹದೇವ್, ಅಧಿಕಾರಿಗಳು ಇದ್ದರು.