ಬೆಳೆ ವಿಮೆ, ಸಮೀಕ್ಷೆ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಚಾಲನೆ

| Published : Jul 26 2024, 01:42 AM IST

ಸಾರಾಂಶ

ತರೀಕೆರೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಅಮೃತಾಪುರ ಹೋಬಳಿ ಜನಸ್ಪಂದನ ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಹಾಗೂ ಬೆಳೆ ಸಮೀಕ್ಷೆ ಯೋಜನೆಗಳ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.

ಮುಸುಕಿನ ಜೋಳ, ರಾಗಿ,ಬತ್ತ ನೋಂದಣಿಗೆ ಆ.16 ಅಂತಿಮ ದಿನ

ಕನ್ನಡಪ್ರಭ ವಾರ್ತೆ, ತರೀಕೆರೆ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಅಮೃತಾಪುರ ಹೋಬಳಿ ಜನಸ್ಪಂದನ ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಹಾಗೂ ಬೆಳೆ ಸಮೀಕ್ಷೆ ಯೋಜನೆಗಳ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.

ರೈತರಿಗೆ ಮುಸುಕಿನ ಜೋಳ, ರಾಗಿ ಹಾಗೂ ಭತ್ತ ನೋಂದಣಿ ಅಂತಿಮ ದಿನಾಂಕ ಆಗಸ್ಟ್ 16 ರಂದು ಇದ್ದು ರೈತರು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳೂಬೇಕಾಗಿ ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನ, ಪೋಲೀಸ್ ಮುಖ್ಯ ವರಿಷ್ಠಾಧಿಕಾರಿಗಳಾದ ಡಾ.ವಿಕ್ರಮ್ ಅಮಟೆ, ತರೀಕೆರೆ ಉಪ ವಿಭಾಗದ ಉಪ ಕೃಷಿ ನಿರ್ದೇಶಕರಾದ ಹಂಸವೇಣಿ, ತರೀಕೆರೆ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕ ಲೋಕೇಶಪ್ಪ ಬಿ.ಎಲ್. ಕೃಷಿ ಅಧಿಕಾರಿ ಶಿವಪ್ರಸಾದ್, ರೇಖಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜುಲೈ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ರೈತ ಬಾಂಧವರು ತಮ್ಮ ಹೊಲದಲ್ಲಿ ನಿಂತ ಹೆಚ್ಚುವರಿ ನೀರನ್ನು ಬಸಿಗಾಲುವೆ ಮೂಲಕ ಹೊರ ಹಾಕುವ ಕೆಲಸ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಲೋಕೇಶಪ್ಪ ಬಿ.ಎಲ್. ಕೋರಿದರು.

25ಕೆಟಿಆರ್.ಕೆ08ಃ

ತರೀಕೆರೆ ತಾಲೂಕು ಅಮೃತಾಪುರ ಹೋಬಳಿಯಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಹಾಗೂ ಬೆಳೆ ಸಮೀಕ್ಷೆ ಯೋಜನೆಗಳ ಪ್ರಚಾರ ವಾಹನಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಚಾಲನೆ ನೀಡಿದರು.