ರಕ್ತದಾನ ಶಿಬಿರಕ್ಕೆ ಜಿಲ್ಲಾಧಿಕಾರಿ ಚಾಲನೆ

| Published : Sep 22 2024, 01:49 AM IST

ಸಾರಾಂಶ

ದಾವಣಗೆರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ದಾವಣಗೆರೆ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೆಸ್ಕಾಂ, ಕೆಪಿಟಿಸಿಎಲ್ ನೌಕರರ ಸಂಘ, ಕೆಇಬಿ ಅಧಿಕಾರಿಗಳು, ಬೆಸ್ಕಾಂ ಎಂಜಿನಿಯರ್‌ಗಳ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಇವರ ಆಶ್ರಯದಲ್ಲಿ ಹದಡಿ ರಸ್ತೆಯಲ್ಲಿನ ಕೆಇಬಿ ಇಂಜಿನಿಯರ್ಸ್‌ ಅಸೋಸಿಯೇಷನ್ ನಲ್ಲಿ ಶನಿವಾರ ಬೃಹತ್ ರ‍್ತಕದಾನ ಶಿಬಿರ ಆಯೋಜಿಸಲಾಗಿತ್ತು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ, ರಕ್ತದಾನ ಮಾಡಿದ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಸಿಬ್ಬಂದಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ, ಇದರಿಂದ ಬೇರೊಂದು ಜೀವಕ್ಕೆ ಮರುಜೀವ ನೀಡಲು ಸಾಧ್ಯವಾಗಿದ್ದು ಇದಕ್ಕಿಂತ ಶ್ರೇಷ್ಠವಾದದು ಬೇರೊಂದಿಲ್ಲ ಎಂದು ಹೇಳಿದರು.

ಈ ವೇಳೆ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಪಾಟೀಲ್, ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ರೇವಣಸಿದ್ದಪ್ಪ, ಪಾಲಿಕೆ ಆಯುಕ್ತರಾದ ರೇಣುಕಾ, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ.ಎ.ಎಂ.ಶಿವಕುಮಾರ್, ಕಾರ್ಯದರ್ಶಿ ಆನಂದ ಜ್ಯೋತಿ, ಖಜಾಂಚಿ ಅನಿಲ್ ಬಾರಂಗಳ್, ನಿರ್ದೇಶಕರಾದ ಡಾ.ಧನಂಜಯಮೂರ್ತಿ, ನಾಗರಾಜ, ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ಗಳಾದ ವಿನಯ್‌ಕುಮಾರ್, ರವಿಕಿರಣ್ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.