ಸಾರಾಂಶ
ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮ ಪಂಚಾಯಿತಿ ವಿಮಾ ಘಟಕದ ವ್ಯಾಪ್ತಿಯ ಬ್ಯಾಲಾಳ ಗ್ರಾಮದ ರೈತ ಶಿವರೆಡ್ಡಿ ಭೀಮರೆಡ್ಡಿ ಹೆಬ್ಬಾಳ ಅವರ ಜಮೀನನಲ್ಲಿ ಕಡಲೆ (ಮಳೆ ಆಶ್ರಿತ) ಬೆಳೆಯ ಬೆಳೆ ಕಟಾವು ಪ್ರಯೋಗದ ಸಮೀಕ್ಷೆ ಕಾರ್ಯದ ಮೇಲ್ವಿಚಾರಣೆಯನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಮಾಡಿದರು.
ಧಾರವಾಡ:
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅಡಿ 2024-25ನೇ ಸಾಲಿನ ಹಿಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಬೆಳೆ ಕಟಾವು ಪ್ರಯೋಗದ ಸಮೀಕ್ಷೆ ಕಾರ್ಯದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಪಾಲ್ಗೊಂಡಿದ್ದರು.ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಪಂ ವಿಮಾ ಘಟಕದ ವ್ಯಾಪ್ತಿಯ ಬ್ಯಾಲಾಳ ಗ್ರಾಮದ ರೈತ ಶಿವರೆಡ್ಡಿ ಭೀಮರೆಡ್ಡಿ ಹೆಬ್ಬಾಳ ಅವರ ಜಮೀನನಲ್ಲಿ ಕಡಲೆ (ಮಳೆ ಆಶ್ರಿತ) ಬೆಳೆಯ ಬೆಳೆ ಕಟಾವು ಪ್ರಯೋಗದ ಸಮೀಕ್ಷೆ ಕಾರ್ಯದ ಮೇಲ್ವಿಚಾರಣೆಯನ್ನು ಜಿಲ್ಲಾಧಿಕಾರಿ ಮಾಡಿದರು.
ಗ್ರಾಪಂ ಮಟ್ಟಕ್ಕೆ ಜೋಳ (ಮಳೆ ಆಶ್ರಿತ), ಕಡಲೆ (ಮಳೆ ಆಶ್ರಿತ) ಬೆಳೆಗಳ ಒಟ್ಟು 237 ಹಾಗೂ ಹೋಬಳಿ ಮಟ್ಟಕ್ಕೆ ಜೋಳ (ನೀ), ಮುಸುಕಿನಜೋಳ (ನೀ), ಗೋಧಿ (ಮಳೆ ಆಶ್ರಿತ), ಗೋಧಿ (ನೀ), ಕಡಲೆ (ಮಳೆ ಆಶ್ರಿತ), ಕಡಲೆ (ಮಳೆ ಆಶ್ರಿತ), ಕಡಲೆ (ನೀ), ಕುಸುಮೆ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀ) ಬೆಳೆಗಳ ಒಟ್ಟು 65 ಸೇರಿದಂತೆ ಒಟ್ಟು 302 ವಿಮಾ ಘಟಕಗಳಿಗೆ ಮತ್ತು ಹತ್ತಿ (ಮಳೆ ಆಶ್ರಿತ), ಸೋಯಾಬಿನ್(ನೀ), ಸಾವೆ(ಮಳೆ ಆಶ್ರಿತ) ಬೆಳೆಗಳ ಆರು ಹೋಬಳಿ ಸೇರಿದಂತೆ ಒಟ್ಟು 1658 ಬೆಳೆ ಕಟಾವು ಪ್ರಯೋಗಗಳ ಕಾರ್ಯಯೋಜನಾ ಪಟ್ಟಿ ಅನುಮೋದಿಸಲಾಗಿದೆ. ಸದರಿ ಬೆಳೆ ಕಟಾವು ಪ್ರಯೋಗಗಳು ನಮೂನೆ-1 ಮತ್ತು ನಮೂನೆ-1 ರಲ್ಲಿ ಪ್ರಗತಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.ಈ ವೇಳೆ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ್ ಸುಧೀರ ಸಾಹುಕಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವೀರನಗೌಡ ಪಾಟೀಲ, ಸಾಂಖ್ಯಿಕ ಅಧಿಕಾರಿಗಳು, ಸಾಂಖ್ಯಿಕ ನಿರೀಕ್ಷಕರು, ಕಂದಾಯ ನಿರೀಕ್ಷಕರು ಇದ್ದರು.