ಕಲಿಕೆ, ಕೌಶಲ್ಯ ಪ್ರದರ್ಶನಕ್ಕೆ ಕಾಲೇಜು ಉತ್ತಮ ವೇದಿಕೆ: ಡಾ.ಚನ್ನಕೃಷ್ಣಯ್ಯ

| Published : Mar 22 2025, 02:02 AM IST

ಕಲಿಕೆ, ಕೌಶಲ್ಯ ಪ್ರದರ್ಶನಕ್ಕೆ ಕಾಲೇಜು ಉತ್ತಮ ವೇದಿಕೆ: ಡಾ.ಚನ್ನಕೃಷ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ತಮ್ಮ ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅದಕ್ಕೆ ಪೂರಕವಾದ ತರಬೇತಿ ಮಾರ್ಗದರ್ಶನ ಪಡೆಯಲು ಉತ್ತಮ ಅವಕಾಶವಿದ್ದು ಅದನ್ನು ಸೂಕ್ತ ರೀತಿಯಲ್ಲಿ ಪಡೆದು ಸಮಾಜದ ಮುಂಚೂಣಿಗೆ ಬರಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳಿಗೆ ಕಾಲೇಜು ಅತ್ಯುತ್ತಮ ಕಲಿಕಾ ಅವಕಾಶಗಳನ್ನು ಒದಗಿಸುವ ಮತ್ತು ಕೌಶಲ್ಯ ಪ್ರದರ್ಶಿಸುವ ವೇದಿಕೆಯಾಗಿದೆ ಎಂದು ಕೆ.ವಿ.ಶಂಕರೇಗೌಡ ಮಹಾ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಚನ್ನಕೃಷ್ಣಯ್ಯ ಹೇಳಿದರು.

ನಗರದ ಸ್ವರ್ಣಸಂದ್ರದ ಎಇಟಿ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ್ದ ಪ್ರಶಿಕ್ಷಣೋತ್ಸವ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ತಮ್ಮ ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅದಕ್ಕೆ ಪೂರಕವಾದ ತರಬೇತಿ ಮಾರ್ಗದರ್ಶನ ಪಡೆಯಲು ಉತ್ತಮ ಅವಕಾಶವಿದ್ದು ಅದನ್ನು ಸೂಕ್ತ ರೀತಿಯಲ್ಲಿ ಪಡೆದು ಸಮಾಜದ ಮುಂಚೂಣಿಗೆ ಬರಬೇಕೆಂದು ಕಿವಿಮಾತು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೆಲೆ ಮತ್ತು ನೆಲೆ ಸಿಗುವುದು ನಮ್ಮ ಕೌಶಲ್ಯದಿಂದಲೇ ಹೊರತು ಅಡ್ಡದಾರಿಯಿಂದ ಪಡೆದ ಅಡ್ಡ ದಾರಿಯಿಂದ ಪಡೆದ ಯಶಸ್ಸು ಶಾಶ್ವತವಲ್ಲ ಎಂದರು.

ವಿದ್ಯಾರ್ಥಿಗಳ ಜೀವನದಲ್ಲಿ ಸಮಯ ಬಹು ಮುಖ್ಯವಾಗಿದ್ದು ಉತ್ತಮ ಗುರಿಯನ್ನು ಒಂದು ಹೊಂದಿ ಸತತ ಪರಿಶ್ರಮ ಹಾಗೂ ಶ್ರದ್ದೆಯಿಂದ ಅಧ್ಯಯನ ನಡೆಸಿ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಗಳಿಸಬೇಕೆಂದು ತಿಳಿಸಿದರು.

ಎಇಟಿ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷೆ ಶಾರದಾ ರಮೇಶ ರಾಜು ಮಾತನಾಡಿ. ಗ್ರಾಮೀಣ ಪ್ರದೇಶದಲ್ಲಿ ಹಲವಾರು ಪ್ರತಿಭೆಗಳು ಅವಕಾಶ ವಂಚಿತರಾಗಿದ್ದು ಅಂತ ಪ್ರತಿಭಾನ್ವಿತರನ್ನ ಉಪನ್ಯಾಸಕರು ಗುರುತಿಸಿ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಅವರ ಭವಿಷ್ಯವನ್ನು ಪ್ರಜ್ವಲ ಗೊಳಿಸ ಬೇಕು ಎಂದರು.

ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಕಳೆದ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಕಾಲೇಜು ಪ್ರಾಂಶುಪಾಲ ಡಾ.ಎಸ್‌.ಶಿವಕುಮಾರ್, ಗ್ಲೋಬಲ್ ಕಾಂಪಿಟೇಟಿವ್ ಅಕಾಡೆಮಿಯ ಶೈಕ್ಷಣಿಕ ತರಬೇತುದಾರ ಪೃಥ್ವಿರಾಜ್ , ಪ್ರಾಧ್ಯಾಪಕರಾದ ಎಚ್‌.ಪಿ.ಧರ್ಮೇಶ್, ಮೋಹನ್ ದಾಸ್ ,ಸುಕೇಶ್, ಶಿವ ನಾಗೇಂದ್ರ ಪ್ರಸಾದ್, ರಕ್ಷಿತಾ, ಸಿಬ್ಬಂದಿ ಉಷಾ, ಸೌಮ್ಯ, ಶಿವಮೂರ್ತಿ ಇತರರಿದ್ದರು.