ಕಾಲೇಜು ಜೀವನ ವಿದ್ಯಾರ್ಥಿಗಳಿಗೆ ಭವಿಷ್ಯದ ದಿಕ್ಸೂಚಿ: ದಂಡಿನ್

| Published : Feb 08 2024, 01:31 AM IST

ಕಾಲೇಜು ಜೀವನ ವಿದ್ಯಾರ್ಥಿಗಳಿಗೆ ಭವಿಷ್ಯದ ದಿಕ್ಸೂಚಿ: ದಂಡಿನ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶ ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮಲಿ.

ಕನ್ನಡಪ್ರಭ ವಾರ್ತೆ ಹುಣಸಗಿ

ಕಾಲೇಜು ಜೀವನ ವಿದ್ಯಾರ್ಥಿಗಳ ಭವಿಷ್ಯದ ದಿಕ್ಸೂಚಿ. ಸರಿಯಾಗಿ ಅರ್ಥೈಸಿಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡರೆ ಕಾಲೇಜ್‌ ಲೈಫ್ ಈಸ್ ಗೋಲ್ಡ್ ನ್‌ ಲೈಫ್ ಎಂಬ ನುಡಿಯಂತೆ ತಮ್ಮ ಭವಿಷ್ಯ ಸುವರ್ಣಮಯವಾಗಿ ಬದಲಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹೇಳಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ಪಿಯು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶ ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ಮತ್ತು ಚನ್ನಯ್ಯಸ್ವಾಮಿ ಹಿರೇಮಠ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಶಿಕ್ಷಣ ಬಹಳ ಮುಖ್ಯ. ಒಳ್ಳೆಯ ಶಿಕ್ಷಣ ಪಡೆದು ಕಾಲೇಜಿಗೆ, ಹುಟ್ಟಿದ ಊರಿಗೆ ತಂದೆ-ತಾಯಿ, ಗುರುಗಳಿಗೆ ಗೌರವ ತರಬೇಕು. ಉಪನ್ಯಾಸಕರ ಒಳ್ಳೆಯ ಮಾರ್ಗದರ್ಶನದಲ್ಲಿ ತಂದೆ-ತಾಯಿಗಳ ಆಸೆಗಳನ್ನು ಈಡೆರಿಸುವ ಭವಿಷ್ಯದ ನಾಯಕರಾಗಬೇಕು ಎಂದು ಹೇಳಿದರು.

ಉಪನ್ಯಾಸಕ ಲಕ್ಷ್ಮಣ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಾರ್ಯಕ್ರಮದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ಪ್ರಾಚಾರ್ಯ ವಿಶ್ವನಾಥ ಬಿರಾದಾರ್ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ಚನ್ನಯ್ಯಸ್ವಾಮಿ ಹಿರೇಮಠ, ಸಿದ್ದಣ್ಣ ಮಲಗಲದಿನ್ನಿ, ಪ.ಪಂ. ಕೌನ್ಸಲರ್‌ಗಳಾದ ಶರಣು ದಂಡಿನ್, ಸಿದ್ರಾಮಪ್ಪ ಮುದಗಲ್, ಮುಖಂಡರಾದ ಶಾಂತಗೌಡ ಪಾಟೀಲ್, ಆರ್.ಎಂ. ರೇವಡಿ, ಮಹಾಂತಪ್ಪ ಮಲಗಲದಿನ್ನಿ, ಈರಣ್ಣ ದೇಸಾಯಿ, ರವಿ ಮಲಗಲದಿನ್ನಿ, ಮಲ್ಲಣ್ಣ ಬ್ಯಾಕೋಡ, ಸಂಗನಬಸಪ್ಪ ಗೋಗಿ, ಲಕ್ಷ್ಮೀ, ದೇವಮ್ಮ ಇತರರಿದ್ದರು. ರುದ್ರಗೌಡ ಬಿರಾದಾರ್ ಸ್ವಾಗತಿಸಿದರು. ಗೀತಾ ವಂದಸಿದರು. ಸಿದ್ದಮ್ಮ ಬಡಿಗೇರ ನಿರೂಪಿಸಿದರು.