ಅಳಿವಿನ ಆಂಚಿನಲ್ಲಿರುವ ನಾಟಕ ಉಳಿಸಲು ಮುಂದಾಗಿ: ಮಹಾಂತ ಸ್ವಾಮೀಜಿ

| Published : Feb 12 2024, 01:39 AM IST

ಅಳಿವಿನ ಆಂಚಿನಲ್ಲಿರುವ ನಾಟಕ ಉಳಿಸಲು ಮುಂದಾಗಿ: ಮಹಾಂತ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಟಕಗಳು ಮನರಂಜನೆಯ ಜತೆಗೆ ದಣಿದ ದೇಹಕ್ಕೆ ಕೊಂಚಮಟ್ಟಿಗೆ ಶಾಂತಿ, ನೆಮ್ಮದಿ ನೀಡಿ ಮನಸ್ಸನ್ನು ಪ್ರಶಾಂತಗೊಳಿಸುವ ಮಹತ್ತರ ವೇದಿಕೆಯಾಗಿವೆ.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ನಾಟಕಗಳು ಮನರಂಜನೆಯ ಜತೆಗೆ ದಣಿದ ದೇಹಕ್ಕೆ ಕೊಂಚಮಟ್ಟಿಗೆ ಶಾಂತಿ, ನೆಮ್ಮದಿ ನೀಡಿ ಮನಸ್ಸನ್ನು ಪ್ರಶಾಂತಗೊಳಿಸುವ ಮಹತ್ತರ ವೇದಿಕೆಯಾಗಿವೆ. ಈ ಕಲೆ ಇಂದು ಅಳಿವಿನ ಅಂಚಿನಲ್ಲಿದ್ದು, ನಾವೆಲ್ಲರೂ ನಾಟಕ ಪ್ರದರ್ಶನವನ್ನು ಹೆಚ್ಚು ವೀಕ್ಷಿಸುವ ಮೂಲಕ ಇವುಗಳನ್ನು ಉಳಿಸಿ, ಬೆಳಸಲು ಮುಂದಾಗಬೇಕಿದೆ ಎಂದು ತಿಪ್ಪಾಯಿಕೊಪ್ಪದ ಗುರು ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ರಾಘವೇಂದ್ರ ಕಾಲನಿಯಲ್ಲಿ ದುರ್ಗಾದೇವಿ ಜಾತ್ರೆಯ ನಿಮಿತ್ತ ರಾಣಿಬೆನ್ನೂರಿನ ಮಂಜುನಾಥ ನಾಟ್ಯ ಸಂಘದ ವತಿಯಿಂದ ಮೂರು ತಿಂಗಳವರೆಗೆ ಏರ್ಪಡಿಸಿರುವ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾಟಕಗಳಲ್ಲಿ ಯಾವುದೋ ಒಂದು ಕತೆಯನ್ನು ನೈಜವಾಗಿ ನಡೆಯುತ್ತಿದೆ ಎಂಬಂತೆ ತೋರ್ಪಡಿಸುತ್ತಾರೆ. ನಶಿಸಿಸುತ್ತಿರುವ ಈ ಕಲೆಯನ್ನು ಉಳಿಸಿ ಬೆಳಸಬೇಕಿದೆ. ಸರ್ಕಾರ ಈ ನಿಟ್ಟಿನಲ್ಲಿ ನಾಟಕ ಸಂಘಗಳಿಗೆ ವಿಶೇಷ ಸೌಲಭ್ಯ, ಪ್ರೋತ್ಸಾಹ ಧನ ನೀಡಲು ಮುಂದಾಗಬೇಕಿದೆ. ಒಂದು ನಾಟಕ ಕಂಪನಿ ನಡೆಸುವುದು ಅಷ್ಟೊಂದು ಸುಲಭವಲ್ಲ, ಪ್ರೇಕ್ಷಕರೆ ಅವರಿಗೆ ದೇವರಿದ್ದಂತೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನ ವೀಕ್ಷಿಸಿದರೆ ಮಾತ್ರ ಕಲಾವಿದರಿಗೆ ಒಂದು ಹೊತ್ತಿನ ಊಟ ದೊರೆಯುತ್ತದೆ ಎಂದರು.

ಕಿರುತೆರೆ ಮತ್ತು ಚಲನಚಿತ್ರ ಕಲಾವಿದ ಗುರುಶಾಂತ ಯತ್ತಿನಹಳ್ಳಿ ಮಾತನಾಡಿ, ಈ ಹಿಂದೆ ಪಟ್ಟಣದಲ್ಲಿ ೪ ಬಾರಿ ನಡೆದ ಜಾತ್ರೆಯಲ್ಲಿ ಯಾವುದೇ ನಾಟಕ ಕಂಪನಿಗಳು ಪ್ರದರ್ಶನ ನೀಡಿಲ್ಲ. ಈ ಜಿಲ್ಲೆ ಕಲೆಯ ತವರೂರಾಗಿದ್ದು, ನಾಟಕಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾತ್ರೆಯ ನಿಮಿತ್ತ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಶಿಕಾರಿಪುರ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಉಮೇಶ ಎಂ. ಮಾತನಾಡಿ, ನಾಟಕ ಕಂಪನಿಗಳು ಕೇವಲ ಲಾಭಗಳಿಕೆಗೆ ಮಾತ್ರ ಪ್ರದರ್ಶನ ನೀಡುವುದಿಲ್ಲ. ಇದರ ಹಿಂದೆ ಅನೇಕ ಕಲಾವಿದರ ಜೀವನ ಅಡಗಿದೆ. ಕನಿಷ್ಠ ಒಂದು ಪ್ರದರ್ಶನವನ್ನಾದರೂ ನಾವು ನೋಡಬೇಕು ಇದರಿಂದ ಅನೇಕರ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದರು.

ದುರ್ಗಾದೇವಿ ಜಾತ್ರಾ ಮಹೋತ್ಸವ ಸಮೀತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಕಾರ್ಯದರ್ಶಿ ಆನಂದ ನಾಯ್ಕರ್, ಸ್ಥಳದ ದಾನಿಗಳಾದ ಪಾಂಡುರಂಗ ನಾಡಿಗೇರ, ಡಾ. ವಿನಯ್ ನಾಡಿಗೇರ, ನಾಟಕ ಕಂಪನಿಯ ಮಾಲಿಕೆ ನಾಗರತ್ನಮ್ಮ ಚಿಕ್ಕಮಠ, ಪಪಂ ಸದಸ್ಯರಾದ ಹನುಮಂತ ಕುರಬರ, ಸುಧಾ ಚಿಂದಿ, ಸನಾವುಲ್ಲಾ ಮಕಾಂದಾರ, ರಾಜು ಕರಡಿ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಪತ್ರಕರ್ತರಾದ ಇಂದುಧರ ಹಳಕಟ್ಟಿ, ಪ್ರಕಾಶ ಬಣಕಾರ ಇದ್ದರು.

ನಾಟಕ ಕಂಪನಿಯ ವ್ಯವಸ್ಥಾಪಕ ಸುದರ್ಶನ ಚಿಕ್ಕಮಠ, ಸಂಚಾಲಕ ಮಲ್ಲಿಕಾರ್ಜುನ ಚಿಕ್ಕಮಠ ನಿರ್ವಹಿಸಿದರು.೧೦ಎಚ್‌ಕೆಆರ್‌೦೧

ಹಿರೇಕೆರೂರಿನ ಚಿಕ್ಕೇರೂರ ರಸ್ತೆಯ ರಾಘವೇಂದ್ರ ಕಾಲನಿಯಲ್ಲಿ ನಾಟಕ ಪ್ರದರ್ಶನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ತಿಪ್ಪಾಯಿಕೊಪ್ಪದ ಗುರು ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು.