ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ,ಮರಿಸ್ವಾಮಿ, ಶಿಕ್ಷಣತಜ್ಞ ಡಾ.ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ,ಮರಿಸ್ವಾಮಿ, ಶಿಕ್ಷಣತಜ್ಞ ಡಾ.ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ನಂತರ ಮಾತನಾಡಿ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡಿದ ಡಾ.ರಾಧಾಕೃಷ್ಣನ್‌ ರಾಷ್ಟ್ರಪತಿ, ಶಿಕ್ಷಣತಜ್ಞರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ, ಇವರ ಹುಟ್ಟು ಹಬ್ಬದಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದು ಹೆಮ್ಮೆಯ. ವಿಚಾರ ಪ್ರಪಂಚವೇ ಹೆಚ್ಚು ಗೌರವಿಸುವಂತಹ ವ್ಯಕ್ತಿಯಾಗಿ ಶಿಕ್ಷಕನನ್ನು ನಾವು ಕಾಣುತ್ತೇವೆ ಸಮಾಜವನ್ನು ಸರಿದಾರಿಗೆ ತರುವಲ್ಲಿ ಶಿಕ್ಷಕನ ಸ್ಥಾನ ಅತ್ಯಂತ ಮಹತ್ತರವಾಗಿದೆ ಡಾ.ರಾಧಾಕೃಷ್ಣನ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಚೂಡ ಅಧ್ಯಕ್ಷ ಮಹಮದ್‌ಅಸ್ಗರ್ (ಮುನ್ನಾ), ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ನಗರಸಭಾ ನಾಮನಿರ್ದೇಶಕ ಸ್ವಾಮಿ, ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಸ್ರುಲ್ಲಾಖಾನ್ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರವಿ ಬಿಸಲವಾಡಿ, ಗ್ಯಾರಂಟಿ ಯೋಜನೆ ಅನುಷ್ಠಾನಸಮಿತಿ ಸದಸ್ಯರಾದ ಕುಮಾರ್‌ಮರಿಯದ ಹುಂಡಿ, ರಾಜೇಶ್‌ಮೂಡಳ್ಳಿ, ರಮೇಶ್, ಮಲ್ಲಿಕಾರ್ಜುನಲಿಂಗನಪುರ, ಮಂಜುಳಾ, ಮಾದಾಪುರ ಕುಮಾರಸ್ವಾಮಿ, ಸುಕುಮರ್, ಗಣೇಶ್, ಚೂಡ ಸದಸ್ಯ ಪುಟ್ಟಸ್ವಾಮಿ, ಕಾಂಗ್ರೆಸ್ ಗ್ರಾಮಾಂತರ ಮಹಿಳಾ ಅಧ್ಯಕ್ಷೆ ಶಕುಂತಳಾ, ನಗರಸಭಾ ಮಾಜಿ ಅಧ್ಯಕ್ಷರಾದ ಚಿನ್ನಮ್ಮ, ಸುರೇಶ್‌ನಾಯಕ್, ಮಾದಾಪುರ ಗ್ರಾಪಂ ಮಾಜಿ ಅಧ್ಯಕ್ಷ ರೂಪೇಶ್, ಜಿಪಂ ಮಾಜಿ ಸದಸ್ಯ ರಮೇಶ್, ಜಯರಾಜ್ ಸೇವಾದಳ ಅಧ್ಯಕ್ಷಶಿವಮೂರ್ತಿರಾಮಸಮುದ್ರ, ಅಯಿಬ್‌ಖಾನ್, ಅಭಾಸ್, ಅಕ್ಷಯ್, ಸ್ವಾಮಿ, ಬಿಸಲವಾಡಿ ಚನ್ನಬಸಪ್ಪ, ಮಹೇಶ್, ನಾಗರಾಜು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.