ಜಯಣ್ಣ ಮಾತನಾಡಿ, ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಅವರ ವಿಚಾರಗಳು ಬದುಕಿರುವುದು ಮುಖ್ಯ. ಹುಟ್ಟಿದಾಗ ಇದ್ದ ಮುಗ್ಧತೆಯನ್ನು ಜೀವಿತದ ಕೊನೆಯವರೆಗೂ ಮುಂದುವರಿಸಿಕೊಂಡು ಹೋಗುವುದು ಕಷ್ಟಕರ. ಅಂತರಂಗದಲ್ಲಿ ಶುದ್ಧಿ ಇದ್ದರೆ ಬಹಿರಂಗ ಶುದ್ಧಿ ಕಾಣಬಹುದು. ಅಂತಹವರ ಸಾಲಿಗೆ ಸ್ವಾಮೀಜಿ ಸೇರಿದವರು ಎಂದು ನೆನಪಿಸಿಕೊಂಡರು. ವೀರಶೈವ ಹಿರಿಯ ಮುಖಂಡ ವೈ.ಬಿ ಟೀಕರಾಜ್ ಮಾತನಾಡಿ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರ ಸೇವೆ ಎಲ್ಲರಿಗೂ ಸ್ಫೂರ್ತಿ ಎಂದ ಅವರು, ಶಿವಕುಮಾರ ಸ್ವಾಮಿಗಳ ಕಾಯಕ ಶ್ರದ್ಧೆ ನಮ್ಮ ಬದುಕಿನ ದಾರಿಯಾದಾಗ ಮಾತ್ರ ಅವರ ತತ್ವಗಳ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ತಮ್ಮ ಜ್ಞಾನವನ್ನು ಲೋಕಕಲ್ಯಾಣಕ್ಕೆ ಅರ್ಪಣೆ ಮಾಡಿಕೊಂಡಿದ್ದರು ಎಂದು ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್ ಸ್ಮರಿಸಿದರು.ಪಟ್ಟಣದ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ರೋಗಿಗಳಿಗೆ, ದಾದಿಯರಿಗೆ ಹಾಗೂ ವೈದ್ಯರಿಗೆ ಹಮ್ಮಿಕೊಂಡಿದ್ದ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆತ್ಮಸಾಕ್ಷಿಯಂತೆ ಬದುಕಿದವರು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ. ಸಮಾಜಕ್ಕೆ ಅನ್ನ, ಜ್ಞಾನ, ಆಶ್ರಯ ಕೊಟ್ಟು, ಜನರಿಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ ಅವರು ತೊರಿಸಿಕೊಟ್ಟ ಹಾದಿಯಲ್ಲಿ ನಾವೇಲ್ಲರೂ ಸಾಗೋಣ ಎಂದ ಅವರು ಇದೇ ಜನವರಿ 29ರ ಬುಧವಾರದಂದು ತಾಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆಯನ್ನು ಆಚರಿಸಲಾಗುವುದು ಎಂದು ಹೇಳಿದರು.ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಸ್ ಜಯಣ್ಣ ಮಾತನಾಡಿ, ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಅವರ ವಿಚಾರಗಳು ಬದುಕಿರುವುದು ಮುಖ್ಯ. ಹುಟ್ಟಿದಾಗ ಇದ್ದ ಮುಗ್ಧತೆಯನ್ನು ಜೀವಿತದ ಕೊನೆಯವರೆಗೂ ಮುಂದುವರಿಸಿಕೊಂಡು ಹೋಗುವುದು ಕಷ್ಟಕರ. ಅಂತರಂಗದಲ್ಲಿ ಶುದ್ಧಿ ಇದ್ದರೆ ಬಹಿರಂಗ ಶುದ್ಧಿ ಕಾಣಬಹುದು. ಅಂತಹವರ ಸಾಲಿಗೆ ಸ್ವಾಮೀಜಿ ಸೇರಿದವರು ಎಂದು ನೆನಪಿಸಿಕೊಂಡರು. ವೀರಶೈವ ಹಿರಿಯ ಮುಖಂಡ ವೈ.ಬಿ ಟೀಕರಾಜ್ ಮಾತನಾಡಿ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರ ಸೇವೆ ಎಲ್ಲರಿಗೂ ಸ್ಫೂರ್ತಿ ಎಂದ ಅವರು, ಶಿವಕುಮಾರ ಸ್ವಾಮಿಗಳ ಕಾಯಕ ಶ್ರದ್ಧೆ ನಮ್ಮ ಬದುಕಿನ ದಾರಿಯಾದಾಗ ಮಾತ್ರ ಅವರ ತತ್ವಗಳ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಂಘದ ನಿರ್ದೇಶಕರಾದ ಬೇಡುಚವಳ್ಳಿ ಕಾಂತರಾಜು, ಕೆರೆಹಳ್ಳಿ ಶಾಂತಪ್ಪ, ಹೆಮಂತ್, ಸಂದೀಪ್, ಸೋಮಣ್ಣ, ಹುಣಸುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಾವನೂರು ಮೋಹನ್, ಲಯನ್ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ನವೀನ್ ದಡಹಳ್ಳಿ, ತಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿರ್ದೇಶಕ ಹರೀಶ್, ಆಸ್ಪತ್ರೆ ವೈದ್ಯರುಗಳಾದ ಡಾ.ನವೀನ್, ಡಾ.ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಸತೀಶ್ ಸೇರಿದಂತೆ ಮುಂತಾದವರು ಹಾಜರಿದ್ದರು.===

ಪೋಟೋ ಕ್ಯಾಪ್ಶನ್:

ಪಟ್ಟಣದ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ರೋಗಿಗಳಿಗೆ, ದಾದಿಯರಿಗೆ ಹಾಗೂ ವೈದ್ಯರಿಗೆ ಹಮ್ಮಿಕೊಂಡಿದ್ದ ಹಣ್ಣು ಹಂಪಲು ವಿತರಣೆ ಮಾಡಲಾಯಿತು.