ವನಕಲ್ಲು ಮಠದಲ್ಲಿ ಸಿದ್ದಯೋಗಾನಂದ ಶ್ರೀಗಳ ಸ್ಮರಣೋತ್ಸವ

| Published : Aug 19 2025, 01:00 AM IST

ಸಾರಾಂಶ

ದಾಬಸ್‍ಪೇಟೆ: ಶ್ರೀವನಕಲ್ಲು ಮಠದ 2ನೇ ಮಠಾಧ್ಯಕ್ಷರಾಗಿ ಶ್ರೀ ಸಿದ್ದಯೋಗಾನಂದ ಸ್ವಾಮೀಜಿಯವರು ನಡೆದು ಬಂದ ಹಾದಿ ನಮಗೆ ಆದರ್ಶವಾಗಿದೆ, ಅವರ ಆಡಳಿತದಲ್ಲಿ ಶ್ರೀಮಠದಲ್ಲಿ ಅನಾಥಾಶ್ರಮ, ಧ್ಯಾನ ಮಂದಿರ ನಿರ್ಮಾಣ, ಶಾಲೆ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಡಾ. ಶ್ರೀ ಬಸವ ರಮಾನಂದ ಮಹಾಸ್ವಾಮೀಜಿ ಹೇಳಿದರು.

ದಾಬಸ್‍ಪೇಟೆ: ಶ್ರೀವನಕಲ್ಲು ಮಠದ 2ನೇ ಮಠಾಧ್ಯಕ್ಷರಾಗಿ ಶ್ರೀ ಸಿದ್ದಯೋಗಾನಂದ ಸ್ವಾಮೀಜಿಯವರು ನಡೆದು ಬಂದ ಹಾದಿ ನಮಗೆ ಆದರ್ಶವಾಗಿದೆ, ಅವರ ಆಡಳಿತದಲ್ಲಿ ಶ್ರೀಮಠದಲ್ಲಿ ಅನಾಥಾಶ್ರಮ, ಧ್ಯಾನ ಮಂದಿರ ನಿರ್ಮಾಣ, ಶಾಲೆ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಡಾ. ಶ್ರೀ ಬಸವ ರಮಾನಂದ ಮಹಾಸ್ವಾಮೀಜಿ ಹೇಳಿದರು.

ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ದಯೋಗಾನಂದ ಸ್ವಾಮೀಜಿ 15ನೇ ವಾರ್ಷಿಕ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಮಠಕ್ಕೆ ಒಂದು ಎಕರೆ ಜಮೀನನ್ನು ಖರೀದಿಸಿ ಮಠಕ್ಕೆ ಭದ್ರಬುನಾದಿ ನಿರ್ಮಾಣ ಮಾಡಿದ್ದಾರೆ. ಅವರ ಎರಡು ಕಣ್ಣುಗಳಾದ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳು ಅತ್ಯುತ್ತಮವಾಗಿ ನಡೆದುಕೊಂಡು ಹೋಗುತ್ತಿವೆ ಎಂದರು.

ಮಾಗಡಿಯ ಗುಮ್ಮಸಂದ್ರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ದಯೋಗಾನಂದ ಸ್ವಾಮೀಜಿಯವರ ಸ್ಮರಣಾರ್ಥ 501 ಅಡಿಕೆ ಸಸಿಗಳನ್ನು ನೀಡಲಾಗುತ್ತಿದೆ. ಪೂಜ್ಯರ ಎಲ್ಲಾ ಕಾರ್ಯಗಳನ್ನು ಈಗಿನ ಮಠಾಧೀಶರಾದ ಬಸವ ರಮಾನಂದ ಸ್ವಾಮೀಜಿಯವರು ನಡೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ಶಿಕ್ಷಕರಾದ ಹರ್ಷಿತ್ ಚೈತ್ರ, ಪ್ರಮೀಳಾ, ಹರ್ಷ, ಸುಮಾ, ಉದಯಕುಮಾರ್, ಮಾರುತಿ, ಮಾಯಕ್ಕ, ಹೆಗ್ಗುಂದ ಡೈರಿ ಅಧ್ಯಕ್ಷ ಹನುಮಂತರಾಜು, ಗ್ರಾ.ಪಂ. ಸದಸ್ಯರಾದ ಸಿದ್ದಮ್ಮ, ಪ್ರಕಾಶ್ ಹೆಗ್ಗುಂದ, ಜಯಮಹಲ್ ಲಯನ್ಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಅರವಿಂದ ಶೆಟ್ಟಿ, ಮಠದ ಟ್ರಸ್ಟಿಗಳಾದ ರಾಮಕೃಷ್ಣಯ್ಯ, ಮಧುಸೂದನ್, ತೋಪಯ್ಯ ತಿರುಮಲಯ್ಯ, ಗುರುಪ್ರಸಾದ್, ವೆಂಕಟೇಶ್, ಲೋಕೇಶ್, ಲಲಿತಾರವಿ, ಶಿಕ್ಷಕರಾದ ಯೋಗಾನಂದ, ಶ್ರೀನಿವಾಸ್, ರಾಮಸ್ವಾಮಿ, ಗೀತಾ, ಮಠದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪೋಟೋ 5 :

ವನಕಲ್ಲು ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ದಯೋಗಾನಂದ ಮಹಾಸ್ವಾಮೀಜಿಯವರ 15ನೇ ವಾರ್ಷಿಕ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ, ಗುಮ್ಮಸಂದ್ರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಚಾಲನೆ ನೀಡಿದರು.